'ಹೊಲಿಗೆ ತರಬೇತಿಯಿಂದ ಸ್ವಾವಲಂಬನೆ'
ಕ.ಪ್ರ.ವಾರ್ತೆ ಅರಸೀಕೆರೆ ನ. 23
ಹೊಲಿಗೆ ತರಬೇತಿ ಪಡೆದು ವೃತ್ತಿಯಲ್ಲಿ ಕೌಶಲ್ಯ ಹೊಂದಿದರೆ ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಆರ್ಥಿಕವಾಗಿ ಮಹಿಳೆಯರು ಸಬಲರಾಗಲು ಸಹಾಯಕವಾಗುತ್ತದೆ ಎಂದು ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ತಿಳಿಸಿದರು.
ಪಟ್ಟಣದ ರಾಜೇಶ್ವರಿ ಮಹಿಳಾ ಹೊಲಿಗೆ ತರಬೇತಿ ಸಮಾಜ ಮತ್ತು ಹಾಸನ ನೆಹರೂ ಯುವ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ತರಬೇತಿ ಪಡೆದು ವೃತ್ತಿಯಲ್ಲಿ ಕೌಶಲ್ಯತೆ ಹೊಂದಿದರೆ ವಿವಿಧ ಭಾಗಗಳಲ್ಲಿ ಉದ್ಯೋಗ ಪಡೆಯಬಹುದು ಹಾಗೂ ಮುಂದಿನ ದಿನಗಳಲ್ಲಿ ಹಲವಾರು ಗಾರ್ಮೆಂಟ್ಸ್ಗಳು ತಾಲೂಕಿನಲ್ಲಿ ಸ್ಥಾಪನೆಯಾಗಲಿದ್ದು ಉತ್ತಮ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಿದರು.
ಪುರಸಭಾಧ್ಯಕ್ಷ ಮೋಹನ್ ಮಾತನಾಡಿ ವಿದ್ಯಾವಂತ ಯುವಕ ಯುವತಿಯರು ಬಡತನ ನಿರುದ್ಯೋಗ ತೊಲಗಿಸಿ ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ರಘು ಮಾತನಾಡಿ ಸರ್ಕಾರದ ವಿವಿಧ ಇಲಾಖೆಯ ಟೈಲರಿಂಗ್ ತರಬೇತಿಯನ್ನು ನಿರಂತರವಾಗಿ ಈ ಸಮಾಜ ನೀಡುತ್ತಾ ಬಂದಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಪುರಸಭಾ ಸದಸ್ಯ ಶ್ರೀನಿವಾಸ್, ರಂಗನಾಥ್, ಬಾಲಮುರುಗನ್, ಎಸ್ಬಿಎಂ ವಲಯ ಶಾಖಾಧಿಕಾರಿ ಮೋಹನ್ರಾಜ್, ಹನುಮಂತರಾಯಪ್ಪ ಇದ್ದರು. ರಾಜೇಶ್ವರಿ ಮಹಿಳಾ ಹೊಲಿಗೆ ಸಮಾಜದ ಕಾರ್ಯದರ್ಶಿ ನಾಗರತ್ನಮ್ಮ ಸ್ವಾಗತಿಸಿದರು. ಆಡಳಿತಾಧಿಕಾರಿ ತಿಮ್ಮಪ್ಪ ನಿರೂಪಿಸಿದರು. ಜಯಶ್ರೀ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

