ಹಾಸನ

ರಂಗನಾಥಸ್ವಾಮಿ ತೆಪ್ಪೋತ್ಸವ

Published On :

ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ನವಿಲೆ ನಾಗೇಶ್ವರಸ್ವಾಮಿ ರಂಗನಾಥಸ್ವಾಮಿ ಹಾಗೂ ಗ್ರಾಮ ದೇವತೆ ಕೆಂಪಮ್ಮ ದೇವರ ತೆಪ್ಪೋತ್ಸವಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಪೂಜೆ ಸಲ್ಲಿಸಿ ಚಾಲನೆ ನೀಡಿ ಬಾಗಿಣ ಅರ್ಪಿಸಿದರು.  ನವಿಲೆ ಏತ ನೀರಾವರಿಯ 3 ಮೋಟಾರುಗಳನ್ನು ನಿತ್ಯ ಚಾಲನೆ ಮಾಡಬೇಕು ಎರಡು ಮೋಟಾರುಗಳನ್ನು ರಿಪೇರಿ ಮಾಡಿ ಅಣತಿಕೆರೆಗೆ ಕುಡಿಯುವ ನೀರು ಬಿಡುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಶಾಸಕರು ಸೂಚಿಸಿದರು. ಮಾಜಿ ತಾಪಂ ಉಪಾಧ್ಯಕ್ಷ ವಿ.ಎನ್ಮ್‌ಂಜುನಾಥ, ಗ್ರಾಪಂ ಅಧ್ಯಕ್ಷ ಎನ್.ಕೆ ನಾಗರಾಜ್, ಮಾಜಿ ಗ್ರಾಪಂ ಅಧ್ಯಕ್ಷ ಎನ್.ಬಿ ನಾಗರಾಜ, ಗಿರೀಶ್, ನಾಗೇಶ್ ಎನ್.ಸಿ ರವೀಶ್ ಇದ್ದರು.

ಇಂದು ನೆಹರು ಯುವ ಸಂಸ್ಥಾಪನ ದಿನಾಚರಣೆ
ಹಾಸನ: ನೆಹರು ಯುವ ಕೇಂದ್ರ,  ಸರಸ್ವತಿ  ಮಹಿಳಾ  ಕಲಾ ಸಮಾಜದ ಆಶ್ರಯದಲ್ಲಿ  ನೆಹರು ಯುವಕೇಂದ್ರ ಸಂಸ್ಥಾಪನ ದಿನ ಹಾಗೂ ಮಕ್ಕಳ ದಿನಾಚರಣೆಯನ್ನು  ನ.24 ರಂದು  ಬೆಳಗ್ಗೆ 11ಕ್ಕೆ  ನಗರದ ದೇವರಾಜು ಅರಸು  ಭವನದಲ್ಲಿ ಆಯೋಜಿಸಲಾಗಿದೆ.  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ಉದ್ಘಾಟಿಸುವರು. ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್,  ಪ್ರಸೂತಿ ಮತ್ತು  ಸ್ತ್ರೀರೋಗ ತಜ್ಞೆ  ಡಾ.ಸಾವಿತ್ರಿ,   ಯುವಜನ ಸೇವಾ ಮತ್ತು  ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ್, ನಗರಸಭೆ ಸದಸ್ಯರಾದ ಕುಮಾರ್, ಪಾರ್ವತಿ ಇತರರು ಭಾಗವಹಿಸುವರು.  ಕಾರ್ಯಕ್ರಮದಲ್ಲಿ ಆಲೂರು ಕಾವೇರಿ ಸಮುದಾಯದ  ಸಂಘದ ಕಾರ್ಯದರ್ಶಿ  ಶಾಹಿದ್‌ಖಾತೂನ್,  ಕಂಪ್ಯೂಟರ್ ಆಪರೇಟರ್ ತಾತಾಬಾಯಿ, ಶಾಂತಿನಗರದ  ಸ್ಪೂರ್ತಿ ಮಹಿಳಾ ಸಮಾಜದ ಪದ್ಮ ಮಂಜುನಾಥ್,  ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸೆಲ್ವ ಮೇರಿ ಆಂಟೋನಿ, ಮಾನವ ಹಕ್ಕುಗಳ  ಪುಸ್ತಕ ಬರಹಗಾರ ಪರೀಕ್ಷಿತ್, ಕೆಎಸ್‌ಆರ್‌ಪಿ 11ನೇ ಪಡೆಯ ವೈ.ಬಿ.  ಕಾಂತಾರಾಜಜ್ಸೇರಿದಂತೆ ಇತರರು ಸನ್ಮಾನಿತರಾಗಲಿದ್ದಾರೆ.    

ಇನ್ಫೋಸಿಸ್‌ನಿಂದ 35 ವಿದ್ಯಾರ್ಥಿಗಳ ಆಯ್ಕೆ
ಹಾಸನ: ರಾಷ್ಟ್ರದ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿಯು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ 35 ವಿದ್ಯಾರ್ಥಿಗಳನ್ನು ನ.19 ಮತ್ತು 20ರಂದು ನಡೆದ ಕ್ಯಾಂಪಸ್‌ಪ್ಲೇಸ್‌ಮೆಂಟ್‌ನಲ್ಲಿ ಆಯ್ಕೆ ಮಾಡಲಾಯಿತು.   ಆಯ್ಕೆಯಾಗಿರುವ 35 ವಿದ್ಯಾರ್ಥಿಗಳನ್ನು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ವಿ. ಸತ್ಯನಾರಾಯಣ, ಟ್ರೈನಿಂಗ್ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ ಹಾಗೂ ಉಪಪ್ರಾಂಶುಪಾಲ ಡಾ.ಕೆ.ಎಸ್. ಜಯಂತ, ಉಪಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ ಮತ್ತು ಸಹಾಯಕ ಪ್ಲೇಸ್ಮೆಂಟ್ ಅಧಿಕಾರಿ ಎಂ.ಕೆ.ರವಿಶಂಕರ ಅಭಿನಂದಿಸಿದ್ದಾರೆ. ಇನ್ಫೋಸಿಸ್ ಕಂಪನಿಯ ಹಿರಿಯ ಅಧಿಕಾರಿ ಸುಧೀರ್‌ಮಿಶ್ರಾ, ನಟರಾಜನಿವಾಸನ್, ಮೆಹೆರ್ ಪ್ರಮೋದ್  ಎಂ.ಸಿ.ಇ. ವಿದ್ಯಾರ್ಥಿಗಳ ತಾಂತ್ರಿಕ ನಿಪುಣತೆ, ನಿಷ್ಠೆ ಮತ್ತು ಸಮಯ ಪಾಲನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ ಪ್ರಾಂಶುಪಾಲ ಡಾ.ಕೆ.ಎಸ್. ಜಯಂತ ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್‌ಹಾರನಹಳ್ಳಿ ಮತ್ತು ಪದಾಧಿಕಾರಿಗಳು ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ
ಆಲೂರು: ಆಲೂರು ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಿಕೊಪ್ಪಲು ಗ್ರಾಮದಲ್ಲಿ 4 ಲಕ್ಷ ರು. ವೆಚ್ಚದ ಅಂಗನವಾಡಿ ಕಟ್ಟಡದ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಕಣತೂರು ಗ್ರಾಪಂ ಅಧ್ಯಕ್ಷ ನಟರಾಜನಾಕಲಗೂಡು ನೆರವೇರಿಸಿದರು. ತಾಲೂಕು ಪಂಚಾಯ್ತಿ ಸದಸ್ಯ ಸರೋಜ ಗ್ರಾಮದ ವೆಂಕಟೇಶ್, ನಿರಂಜನ್, ಹರೀಶ್, ಯುವರಾಜ್ ಇನ್ನಿತರರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.