ಹಾಸನ

ಗ್ರಂಥಾಲಯ ಕಾಮಗಾರಿ ನೆನಗುದಿಗೆ

Published On :

ಕ.ಪ್ರ.ವಾರ್ತೆ  ಅರಸೀಕೆರೆ  ನ.27
ಶತಮಾನೋತ್ಸವನ್ನು ಆಚರಿಸಿ ಶಿಥಿಲವಾಗಿದ್ದ ಸಾರ್ವಜನಿಕ ಗ್ರಂಥಾಲಯ ಹಲವರ ಹೋರಾಟದ ಫಲವಾಗಿ ನೂತನ ಕಟ್ಟಡ ಸುಮಾರು 1 ಕೋಟಿ ಬಿಡುಗಡೆಯಾಗಿ 3 ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ. ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿದ್ದ ಸಾರ್ವಜನಿಕ ಗ್ರಂಥಾಲಯದ ಹಳೇ ಕಟ್ಟಡಕ್ಕೆ ಅಂದಿನ ಶಾಸಕರಾಗಿದ್ದ ಎ.ಎಸ್. ಬಸವರಾಜು 1 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಯೋಜನೆಯನ್ನು ಮಂಜೂರು ಮಾಡಿಸಿದ್ದರು. ತದನಂತರ ಶಾಸಕ ಕೆ.ಎಂ. ಶಿವಲಿಂಗೇಗೌಡ ಏಪ್ರಿಲ್ 15ರ 2011ರಲ್ಲಿ ಭೂಮಿ ಪೂಜೆಯನ್ನು ಕೂಡ ನೆರವೇರಿಸಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದರು.
ಅಲ್ಲಿಂದ ಸುಮಾರು ಎರಡುವರೆ ವರ್ಷಗಳು ಕಳೆದರೂ ಇನ್ನೂ ಕಟ್ಟಡದ ಕಾಮಾಗಾರಿಗಳು ಸಂಪೂರ್ಣ ಆಗದೆ ಪ್ರತಿನಿತ್ಯ ಗ್ರಂಥಾಲಯಕ್ಕೆ ಬಂದು ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುತ್ತಿದ್ದ ವಯೋವೃದ್ಧರಿಗೆ ಒಂದು ರೀತಿಯ ನಿರಾಸೆಯ ಭಾವನೆ ಉಂಟಾಗಿದೆ. ಈಗಾಗಲೇ ತಾತ್ಕಾಲಿಕವಾಗಿ ಸ್ಥಳಾಂತರವಾಗಿರುವ ಗ್ರಂಥಾಲಯವು ಪುರಸಭಾ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಕಾರಣ ಮಹಿಳೆಯರು ಮತ್ತು ವಯೋವೃದ್ಧರು ಪ್ರತಿನಿತ್ಯ ಮಹಡಿಯನ್ನು ಹತ್ತಲು ಅಸಾಧ್ಯವಾಗಿರುವ ಕಾರಣ ನೂತನ ಕಟ್ಟಡದ ಆರಂಭಕ್ಕೆ ಇರುವ ವಿಘ್ನವನ್ನು ಕೂಡಲೇ ಪರಿಹರಿಸುವ ಮೂಲಕ ಸಾರ್ವಜನಿಕ ಗ್ರಂಥಾಲಯಕ್ಕೆ ಅಂಟಿಕೊಂಡಿರುವ ಗ್ರಹಣದಿಂದ ಮುಕ್ತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ನೂತನ ಕಟ್ಟಡದ ಉದ್ಘಾಟನೆಯನ್ನು ತ್ವರಿತವಾಗಿ ನೆರವೇರಿಸಲು ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.