ತೇಜಸ್ವಿಯಂತಹ ಪರಿಸರ ಸಾಹಿತಿ ನಾಡಿಗೆ ಅಗತ್ಯ'
ಕ.ಪ್ರ. ವಾರ್ತೆ ಬೇಲೂರು ಅ.1
ಇಂದು ಗಟ್ಟಿ ಸಾಹಿತ್ಯ ರಚನೆ ಕೊರತೆ ಕಾಣುತ್ತಿದ್ದು, ಯುವ ಸಾಹಿತಿಗಳು ಇದರ ಬಗ್ಗೆ ಗಮನ ಹರಿಸಬೇಕಿದೆ ಎಂದು ಪತ್ರಕರ್ತ ಅನಂತರಾಜೇ ಅರಸು ಹೇಳಿದರು.
ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಬಿ.ಸಿ.ಇಂದಿರಮ್ಮ ಅವರ ಪ್ರಾಯೋಜಕತ್ವದಲ್ಲಿ ಸೌಮ್ಯನಾಯಕಿ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ಮನೆ ಮನೆ ಸಾಹಿತ್ಯ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಸಾಹಿತ್ಯ ಕೃತಿಯಲ್ಲಿನ ಪದಗಳಲ್ಲಿ ತೀಕ್ಷಣತೆಯ ಕೊರತೆ ಎದ್ದುಕಾಣುತ್ತಿದೆ.
ಕುವೆಂಪು, ದ.ರಾ.ಬೇಂದ್ರೆ ಅವರ ಸಮಕಾಲೀನ ಸಾಹಿತಿಗಳಲ್ಲಿನ ಸಾಹಿತ್ಯ ರಚನಾ ಶೈಲಿಯೇ ಇಂದು ಕಾಣುತ್ತಿಲ್ಲ. ಚಲನಚಿತ್ರಗಳ ಸಾಹಿತ್ಯ, ಸಂಭಾಷಣೆಯಲ್ಲೂ ಗಟ್ಟಿತನದ ಕೊರತೆ ಕಂಡುಬರುತ್ತಿದೆ. ಹಿಂದಿನ, ಇಂದಿನ ಸಾಹಿತ್ಯ ಕೃತಿಗಳಿಗೆ ಹೋಲಿಕೆ ಇಲ್ಲವಾಗಿದೆ ಎಂದು ವಿಷಾದಿಸಿದರು.
ಸಾಹಿತಿ ಕೆ.ಪಿ.ಪೂರ್ಣಚಂದ್ರತೇಜಸ್ವಿ ಬದುಕು, ಬರಹ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಜಯಕುಮಾರ್, ಪರಿಸರ ಪ್ರೇಮಿ ಸಾಹಿತಿ ಪೂಚಂತೇ ಅವರಂತಹ ಸಾಹಿತಿಗಳು ಇಂದು ನಾಡಲ್ಲಿ ಹುಟ್ಟಬೇಕಿದೆ. 10ನೇ ತರಗತಿ ಎರಡು ಅವಧಿ ಅನುತ್ತೀರ್ಣರಾದ ತೇಜಸ್ವಿ ಒಬ್ಬ ಮಹಾನ್ ಸಾಹಿತಿ ಆಗಿದ್ದಾದರೂ ಹೇಗೆ ಎಂಬುದು ಎಲ್ಲರನ್ನೂ ಕಾಡುತ್ತದೆ. ಅವರಲ್ಲಿನ ಶ್ರದ್ಧೆ, ಪರಿಸರ ಪ್ರೇಮ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಧುಮುಕುವಂತೆ ಮಾಡಿತು. ಅವರಿಗೆ ಕುವೆಂಪು ಅವರಂತ ಮೇರು ಸಾಹಿತಿ ನೀರೆರೆದು ಬೆಳೆಸಿದರು ಎಂದು ತಿಳಿಸಿದರು. ಪರಿಸರವೇ ನನ್ನ ಉಸಿರು ಎನ್ನುವಂತೆ ದೇಶದ ಉದ್ದಗಲ ತಿರುಗಿದರು. ಅವರ ಎಲ್ಲಾ ಸಾಹಿತ್ಯ ಕೃತಿಗಳು ಪರಿಸರಕ್ಕೆ ಪೂರಕವಾಗೆ ಇವೆ. ಯಾವ ಮನುಷ್ಯ ಹುಟ್ಟಿದಾಗ ಸರ್ವಜ್ಞನಾಗಿರುವುದಿಲ್ಲ. ಆತನ ಆಸಕ್ತಿ, ನಡೆ, ನುಡಿ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ಹೇಳಿದರು. ತೇಜಸ್ವಿಯವರ ಅನೇಕ ಕೃತಿಗಳು ಚಲನಚಿತ್ರವಾಗಿದ್ದು ಅನೇಕ ಪ್ರಶಸ್ತಿಗಳ ಪಡೆದುಕೊಂಡಿದೆ ಎಂದು ಹೇಳಿದರು.
ಈ ವೇಳೆ ಕಲಾವಿದ ನಿವೃತ್ತ ಆಡಿಟರ್ ಕೃಷ್ಣಮೂರ್ತಿ ಅವರನ್ನು ಗೌರವಿಸಲಾಯಿತು. ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

