ಹಾಸನ

ಆಹಾರ, ವಸತಿ, ನಿರುದ್ಯೋಗ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಅ.3
ದೇಶವಿಂದು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ಆಹಾರ, ಆರೋಗ್ಯ, ವಸತಿ ಹಾಗೂ ನಿರುದ್ಯೋಗಗಳಿಗೆ ವಿಜ್ಞಾನ ಮಾತ್ರ ಪರಿಹಾರ ನೀಡಬಲ್ಲದು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು.
ನಗರದ ಎಸ್.ಜಿ.ಆರ್. ಶಾಲಾ ಆವರಣದಲ್ಲಿ ತಾಲೂಕು ಬಿಜಿವಿಎಸ್ 4ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ಅಭಿವೃದ್ಧಿಯಲ್ಲಿ ವೈಜ್ಞಾನಿಕ ಹಾದಿ ಮತ್ತು ಸಾಮಾಜಿಕ ಆರ್ಥಿಕ ಚಟುವಟಿಕೆಯಲ್ಲಿ ವೈಚಾರಿಕತೆ ಬೆಳೆಸಿಕೊಳ್ಳ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಜಿವಿಎಸ್ ಅಧ್ಯಕ್ಷ ಡಿ.ಟಿ.ಶಿವಣ್ಣ ಮಾತನಾಡಿ, ಕಂದಾಚಾರ, ಮೂಢನಂಬಿಕೆಗಳು ಭಾರತವನ್ನು ಅಂಧಕಾರದತ್ತ ತಳ್ಳುತ್ತಿದೆ. ಪಟ್ಟಭದ್ರರು ಜನಸಾಮಾನ್ಯರನ್ನು ಸುಲಿಯುತ್ತಿದ್ದಾರೆ ಬಿಜಿವಿಎಸ್ ಮಾತ್ರ ಜನರಲ್ಲಿ ವೈಚಾರಿಕತೆಯನ್ನು ತುಂಬಬಲ್ಲದು ಹಾಗಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಘಟನಾತ್ಮಕವಾಗಿ ಬಲಶಾಲಿ ಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತಾಲೂಕು ಸಮ್ಮೇಳನ ನಡೆಯುತ್ತಿದೆ ಎಂದರು. ತಾಲೂಕು ಉಸ್ತುವಾರಿ ಸದಸ್ಯ ಹಾಗೂ ಬಿಜಿವಿಎಸ್ ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ ಉಸ್ತುವಾರಿ ವಹಿಸಿದ್ದರು.  ಜಯಪ್ರಕಾಶ್ ವರದಿ ಮಂಡಿಸಿದರು. ತಾಲೂಕು ಕಾರ್ಯದರ್ಶಿ ಆರ್.ಸಿ.ಭೈರಪ್ಪ ಕಳೆದ 2 ವರ್ಷಗಳಿಂದ ತಾಲೂಕಿನಾದ್ಯಂತ ಸಮಿತಿ ಹಮ್ಮಿಕೊಂಡಿದ್ದ ಕ್ರಿಯಾ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ 10 ಜನರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಮಮತಶಿವು ಅಧ್ಯಕ್ಷರಾಗಿ, ದೇವರಾಜೇಗೌಡ ಮತ್ತು ಆರ್.ಸಿ.ಭೈರಪ್ಪ ಉಪಾಧ್ಯಕ್ಷರಾಗಿ, ಜಯಪ್ರಕಾಶ್ ಕಾರ್ಯದರ್ಶಿಯಾಗಿ, ವೇದಶ್ರೀ ರಾಜ್ ಹಾಗೂ ಪ್ರಸಾದ್ ಸಹಕಾರ್ಯದರ್ಶಿಗಳಾಗಿ, ರೇಖಾ ಖಜಾಂಚಿಯಾಗಿ ಹಾಗೂ ಸುಧೀರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.