ಬಾಣೇಶ್ವರಸ್ವಾಮಿ ದೇವಾಲಯದಲ್ಲಿ ಮಂಡಲಪೂಜೆ
ದಿಡಗ (ಚನ್ನರಾಯಪಟ್ಟಣ ತಾ.): ದಿಡಗ ಹಳೇಗ್ರಾಮದಲ್ಲಿನ ಜೀರ್ಣೋದ್ಧಾರಗೊಂಡ ಪ್ರಸನ್ನ ಬಾಣೇಶ್ವರ ಸ್ವಾಮಿದೇವಾಲಯದಲ್ಲಿ ನಡೆದ 48ನೇ ದಿನದ ಮಂಡಲ ಪೂಜೆ, ಉತ್ಸವ ಅತ್ಯಂತ ವೈಭವೋಪೇತವಾಗಿ ಮುಕ್ತಾಯಗೊಂಡಿತು.
ಬೆಳಗ್ಗೆಯಿಂದಲೇ ಗಣಪತಿಪೂಜೆ, ಪುಣ್ಯಾಹ, ನಾಂದಿ, ನವಗ್ರಹ ಪೂಜೆ, ಗಣ ಹೋಮ, ರುದ್ರಹೋಮ, ಪೂರ್ಣಾಹುತಿ, ರುದ್ರಾಭಿಷೇಕ ಆಗಮಶಾಸ್ತ್ರ ವಿಶಾರದ, ವೇದರತ್ನ, ಶೃಂಗೇರಿ ಮಠದ ಮುದ್ರಾದಿಕಾರಿ, ವೇದಬ್ರಹ್ಮ, ಯಜ್ಯ ಶ್ರೀಕಾಂತಶರ್ಮಾ ಮುತ್ತೂರು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಪ್ರಧಾನ ಆಚಾರ್ಯತ್ವದಲ್ಲಿ ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿತು. ನಂತರ ಶ್ರೀ ಶನೇಶ್ವರ ಪೂಜೆ ನೆರವೇರಿಸಿ, ರಾತ್ರಿ ಶನಿಪ್ರಭಾವ ಹರಿಕಥೆ ಏರ್ಪಡಿಸಲಾಗಿತ್ತು. ಬೆಳಗಿನ ಜಾವ ಶ್ರೀ ಸತ್ಯಗಣಪತಿ ಸ್ವಾಮಿಯನ್ನು ಉತ್ಸವದೊಂದಿಗೆ ಗಂಗೆಯಲ್ಲಿ ವಿಸರ್ಜಿಸಲಾಯಿತು. ಗ್ರಾಮಸ್ಥರು ಶ್ರದ್ಧಾ ಭಕ್ತಿಗಳಿಂದ ಭಾಗಿಯಾಗಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

