ಹಾಸನ

ದೇವೇಗೌಡರಿಂದ ಮತ್ತಷ್ಟು ಅನುದಾನದ ಭರವಸೆ

Published On :

ಅರಕಲಗೂಡು: ತಾಲೂಕಿನ ವಡ್ಡರಹಳ್ಳಿಯಲ್ಲಿ ನಿರ್ಮಿಸಲಾಗಿರುವ ಭಾರತ ಸೂರ್ಯಪುತ್ರ ಸಮುದಾಯಭವನದ ಮೊದಲ ಅಂತಸ್ತಿನ ಸಭಾಂಗಣ ಮತ್ತು ಬಯಲು ರಂಗಮಂದಿರವನ್ನು ಸೋಮವಾರ ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗೌಡರನ್ನು ಅದ್ಧೂರಿಯಾಗಿ ಸನ್ಮಾನಿಸಿ ದರು.
ಕಸಬಾ ಹೋಬಳಿ ನನಗೆ ರಾಜಕೀಯ ಶಕ್ತಿ ತುಂಬಿದ ಪ್ರದೇಶ. ನಾನು ಎಂದಿಗೂ ಈ ಪ್ರದೇಶದ ಬಗೆಗಿನ ಅಭಿಮಾನ ಮರೆತಿಲ್ಲ ಎಂದ ಅವರು, ಈಗ ಪರಿಸ್ಥಿತಿ ಬೇರೆಯೇ ಇರಬಹುದು. ಆದರೆ ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಗ್ರಾಮದ ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಾವು ಹಿಂದೆ ಬೀಳುವುದಿಲ್ಲ ಎಂದರು. ಜಿಲ್ಲೆಗೆ ಈ ಹಿಂದೆ ಕೊಟ್ಟಿರುವ ಅನುದಾನ ಸರಿಯಾದ ರೀತಿಯಲ್ಲಿ ವೆಚ್ಚವಾಗಿದೆಯೋ ಇಲ್ಲವೋ ಎಂಬ ಬಗ್ಗೆ ತಾವು ಪ್ರವಾಸ ಕೈಗೊಳ್ಳುವವನಿದ್ದೆ.ಆದರೆ ಮುಖ್ಯಮಂತ್ರಿಗಳು ಮಂಗಳವಾರ ಜಿಲ್ಲೆಗೆ ಬರುತ್ತಿರುವುದರಿಂದ ಅಧಿಕಾರಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ನನ್ನ ಪ್ರವಾಸವನ್ನು ಮುಂದಕ್ಕೆ ಹಾಕಿದ್ದೇನೆ.ಇದೇ 20, 21 ಮತ್ತು 22 ರಂದು ತಾವು ಜಿಲ್ಲೆಯಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದರು.
ಶಾಸಕ ಎಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೊನ್ನವಳ್ಳಿ ಸತೀಶ್, ಜೆಡಿಎಸ್ ಮುಖಂಡ ಎಂ.ಎಸ್.ರಮೇಶ್, ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಜಿಪಂ ಅಧ್ಯಕ್ಷೆ ಡಿ.ಜೆ.ಅಂಬಿಕಾ ರಾಮಣ್ಣ, ಜಿಪಂ ಸದಸ್ಯ ವಿ.ಎ.ನಂಜುಂಡಸ್ವಾಮಿ, ತಾಪಂ ಸದಸ್ಯ ನರಸೇಗೌಡ,ಎಂ.ಎಸ್. ಯೋಗೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.