ಹಾಸನ

ರು. 65 ಲಕ್ಷದ ಧ್ಯಾನ ಮಂದಿರ ಉದ್ಘಾಟನೆ

Published On :

ಚನ್ನರಾಯಪಟ್ಟಣ: ಸಂಸಾರವೆಂಬ ದೋಣಿ ನಡೆಸಲು ಸರಿಯಾದ ನಾವಿಕರನ್ನು ಕಾಣದೇ ನಾವು ದಿಕ್ಕು ತಪ್ಪುತ್ತಿದ್ದೇವೆ ಎಂದು ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದರು. ಪಟ್ಟಣದ ಕೋಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ 65 ಲಕ್ಷ ರು. ವೆಚ್ಚದಲ್ಲಿ ನಿರ್ಮಿತ ಧ್ಯಾನ ಮಂದಿರ ಉದ್ಧಾಟಿಸಿ ಆಶೀರ್ವಚ ನೀಡಿ ಮಾತನಾಡಿದರು.
 ಮಠಗಳು ಹಾಗೂ ಸಂತರ ಮೇಲೆ ಜನತೆ  ಅಪಾರ ನಂಬಿಕೆಯಿಟ್ಟಿದ್ದು, ಅದಕ್ಕೆ ಧಕ್ಕೆ ತರುವ ಕಾರ್ಯಗಳನ್ನು ಮಾಡದಂತೆ ಸಾಮಾಜಿಕ ಕಾರ್ಯಗಳನ್ನು ಮಾಡುವತ್ತಾ ಮುಂದಾಗಬೇಕು ಎಂದು ಹೇಳಿದರು.
 ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ ನಮ್ಮ ದೇಶ ಧರ್ಮದ ತಳಹದಿಯ ಮೇಲೆ ನಿಂತಿದ್ದು, ಅದನ್ನು ಕದಡುವ ಪ್ರಯತ್ನಕ್ಕೆ ಯಾರೂ ಮುಂದಾಗದೆ ಎಲ್ಲಾ ಧರ್ಮಿಯರೂ ಸೇರಿ ದೇಶ ಕಟ್ಟುವಲ್ಲಿ ಮುಂದಾಗಬೇಕು ಎಂದರು.  ಮನುಷ್ಯ ಎಷ್ಟೇ ಗಳಿಸಿದರೂ ಅದು ಕೊನೆಯವರಗೆ ಬರುವುದಿಲ್ಲ. ತಾನೂ ತನ್ನ ಜೀವಿತಾವಧಿಯಲ್ಲಿ ಮಾಡಿದ ಸಾಮಾಜಿಕ ಕಾರ್ಯಗಳು ಎಂದಿಗೂ ಸ್ಮರಣೀಯವಾಗಿ ಉಳಿಯುತ್ತವೆ ಎಂದು ನುಡಿದರು. ಮಠದ ಸಮಿತಿ ಅಧ್ಯಕ್ಷ ಸಿ.ವಿ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸುಬ್ಬರಾಯಶೆಟ್ಟಿ ಉಪಸ್ಥಿತರಿದ್ದರು.  ಬಸವರಾಜು ನಿರೂಪಿಸಿದರು. ಸುಬ್ಬಣ್ಣ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.