80 ಕೆರೆಗಳ ಅಭಿವೃದ್ಧಿಗೆ ರು. 17.16 ಕೋಟಿ: ಶಾಸಕ
ಕ.ಪ್ರ. ವಾರ್ತೆ ಚನ್ನರಾಯಪಟ್ಟಣ ಅ.9
ತಾಲೂಕಿನ 80 ಕೆರೆಗಳ ಸಮಗ್ರ ಅಭಿವೃದ್ಧಿಗೆ 17.16 ಕೋಟಿ ರು. ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಹರೆಸೋಮನಹಳ್ಳಿಯಲ್ಲಿ ತಾಲೂಕು ಆಡಳಿತ ಮತ್ತು ಎಲ್ಲಾ ಗ್ರಾಮ ಪಂಚಾಯ್ತಿಗಳ ಸಹಯೋಗದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆರೆಗಳಲ್ಲಿ ನೀರು ಸಂಗ್ರಹಿಸಿ ಆ ಭಾಗದಲ್ಲಿನ ಪ್ರದೇಶಗಳ ಅಂತರ್ಜಲ ವೃದ್ಧಿಗಾಗಿ ಸರ್ಕಾರ ಮುಂದಾಗಿದ್ದು ಕೆರೆಗೆ ಹರಿದು ಬರುವ ನೀರಿಗೆ ಅಡ್ಡಲಾಗಿರುವ ಅಡೆತಡೆಗಳನ್ನು ಸರಿಪಡಿಸಬೇಕು. ಕೆರೆಗೆ ಬಂಡು ನಿರ್ಮಾಣ, ಕೆರೆಯ ಹೂಳೆತ್ತುವ ಕಾರ್ಯವಾಗಬೇಕು, ಅಗತ್ಯವಿರುವ ಕಡೆ ಸಿಮೆಂಟ್ ಕೂಡಾ ಹಾಕಬೇಕು. ಒಟ್ಟಾರೆ ಕೆರೆಯ ಸಮಗ್ರ ಅಭಿವೃದ್ಧಿಯಾಗಬೇಕು ಎಂದು ನುಡಿದರು.
ಹರೆಸೋಮನಹಳ್ಳಿ ಕೆರೆಗೆ 30 ಲಕ್ಷ ರು. ಬಿಡುಗಡೆಯಾಗಿದ್ದು ಈ ಕೆಲಸ ಪೂರ್ಣಗೊಳಿಸಲು ಕಾಲದ ಮಿತಿ ಇರುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಕ್ಕೆ ಸೀಮಿತವಾಗದೆ ಇನ್ನೂ ಹೆಚ್ಚು ದಿನಗಳು ಕೆಲಸ ನಿರ್ವಹಿಸಬಹುದು. ಮಾರ್ಚ್ ತಿಂಗಳ ನಂತರವೂ ಕೆಲಸ ಮುಂದುವರಿಯುತ್ತದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಗೌಡಗೆರೆ ರಸ್ತೆಯಿಂದ ಹರೆಸೋಮನಹಳ್ಳಿ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊಂಡಂತೆಯೇ ಜೋಳ ಬೆಳೆದಿದ್ದಾರೆ. ಇದು ಖಂಡನೀಯ. ರಸ್ತೆ ಒತ್ತುವರಿ ಮಾಡಬಾರದು. ರಸ್ತೆಯ ಪಕ್ಕ ಹಾಕುವ ಗೊಬ್ಬರವನ್ನೇ ತಮ್ಮ ಜಮೀನಿಗೆ ಹಾಕಿದರೆ ಉತ್ತಮ ಬೆಳೆ ಬರುತ್ತದೆ ಎಂದು ತಿಳಿಸಿದರು. ತಾಪಂ ಕಾರ್ಯನಿರ್ವಾಹಣಾಧಿಕಾರಿ ನಿಂಗರಾಜಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್ಕುಂಟೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯ ರವಿಕುಮಾರ್, ಜೆ.ಇ. ನರಸಿಂಹಮೂರ್ತಿ, ಕಲ್ಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ಅಶೋಕ್, ಮಾಜಿ ಅಧ್ಯಕ್ಷ ಪ್ರಕಾಶ್, ಧರ್ಮರಾಜು, ಉಪಾಧ್ಯಕ್ಷ ಕೆ.ಟಿ.ರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಕೃಷ್ಣನಾಯಕ್ ಹಾಗೂ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

