'ನಮ್ಮ ರುಚಿ- ನಿಮ್ಮ ಪಾಕ' ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ ಹಾಸನ ಅ. 9
ಮನೆ ಅಡುಗೆ ಆರೋಗ್ಯಕ್ಕೆ ಉತ್ತಮ ಎಂದು ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ನಾಯಕರಹಳ್ಳಿ ಮಂಜೇಗೌಡ ಹೇಳಿದರು.
ನಗರದ ಗೃಹ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ತುಮಕೂರಿನ ಸ್ಟೂಡೆಂಟ್ ಬುಕ್ ಕಂಪನಿ ಆಶ್ರಯದಲ್ಲಿ ಪದ್ಮಶರ್ಮಾ ರಚಿಸಿರುವ ನಮ್ಮ ರುಚಿ ನಿಮ್ಮ ಪಾಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹೊರಗೆ ಮಾರಾಟ ಮಾಡುವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸದೆ ಮನೆಯಲ್ಲಿಯೇ ಅಡುಗೆ ಮಾಡಿ ಸೇವಿಸುವಂತೆ ಸಲಹೆ ನೀಡಿದರು. ಮೊದಲು ಸ್ವಚ್ಛತೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕಾಪಾಡಿಕೊಳ್ಳುವುದು ಅನಿವಾರ್ಯವಿದೆ ಎಂದು ಕಿವಿಮಾತು ಹೇಳಿದರು.
ಗೃಹ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಸಾವಿತ್ರಿ ಹೊಸಮನೆ ಪುಸ್ತಕ ಪರಿಚಯದಲ್ಲಿ ಮಾತನಾಡಿ, ಮಹಿಳೆಯು ಇಂದು ಅಡುಗೆ ಮನೆಯೊಂದಕ್ಕೆ ಸೀಮಿತವಾಗದೆ ಎಲ್ಲಾ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಪುಸ್ತಕ ಬಿಡುಗಡೆಯೇ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಸರಳ ಭಾಷೆಯಲ್ಲಿ ಪುಸ್ತಕವನ್ನು ರಚಿಸಿರುವುದು ಅಡುಗೆ ಪ್ರಿಯರಿಗೆ ಅನುಕೂಲವಾಗಲಿದೆ. ಈ ಪುಸ್ತಕದಲ್ಲಿ ವಸ್ತುನಿಷ್ಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.
ವೈಜ್ಞಾನಿಕ ತಳಹದಿ ಇಟ್ಟುಕೊಂಡು ಅಡುಗೆ ಬಗ್ಗೆ ತಿಳಿಸಲಾಗಿದ್ದು, ಹಸಿರು ಸೊಪ್ಪಿನ ಬಗ್ಗೆಯೇ ಒತ್ತು ನೀಡಿರುವುದು ಹಾಗೂ ಮೆಂತ್ಯೆ ಅಡುಗೆ ಮಾಡುವ ವಿಧಾನ ಹೇಳಲಾಗಿರುವುದು ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶ್ಲಾಘಿಸಿದರು.
ಪುಸ್ತಕದ ರಚಯಿತ ಪದ್ಮಶರ್ಮಾ, ಸಾಹಿತಿ ಚನ್ನೇಗೌಡ, ಗಂಜಲಗೂಡು ಗೋಪಾಲಗೌಡ, ಎಸ್ಕೆಪಿಸಿ ಬ್ಯಾಂಕ್ ಅಧ್ಯಕ್ಷೆ ವನಜಾರಾಜ್, ಜಯಶ್ರೀ ನರ್ಸಿಂಗ್ ಹೋಂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಹೇಮಲತಾ ಪಟ್ಟಾಭಿ, ವಿಜಯ ಪಾಟೀಲ್ ಇತರರು ಇದ್ದರು. ಕೃಪಾ ಪ್ರಭಾಕರ್ ಪ್ರಾರ್ಥಿಸಿದರು. ಸಾಹಿತಿ ಜಯರಮೇಶ್ ಸ್ವಾಗತಿಸಿದರು. ಸಾಹಿತಿ ದಾಕ್ಷಾಯಿಣಿ ಅವರುವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

