ರಾಜಿ ಮೂಲಕ ಹಲವು ಪ್ರಕರಣ ಇತ್ಯರ್ಥ
ಅರಸೀಕೆರೆ: ಕಾನೂನು ಸಾಕ್ಷರತಾ ರಥಯಾತ್ರೆಯ ಸಂಚಾರಿ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ.ವಿ.ಕೋಸಂದರ್ ಮಧ್ಯಸ್ಥಿಕೆದಾರರ ಮೂಲಕ ರಾಜಿಸಂಧಾನ ನಡೆಸಿ ಹಲವಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.
ನಂತರ ಮಾತನಾಡಿದ ಅವರು, ಸಾಮಾನ್ಯ ಜನರಲ್ಲಿ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಇಲ್ಲದ ಕಾರಣ ಸರ್ಕಾರ ನೀಡಿರುವ ಅವಕಾಶ ಬಳಸಿಕೊಳ್ಳಲು ಜನರು ಆಸಕ್ತಿ ವಹಿಸುತ್ತಿಲ್ಲ, ಅವರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳೇ ಎಲ್ಲದಕ್ಕೂ ಕಾರಣವಾಗಿದೆ ಎಂದರು. ಗ್ರಾಮೀಣಾ ಜನರಲ್ಲಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ವ್ಯಾಪಕವಾಗಿ ಇನ್ನೂ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಸರ್ವೇಶ್, ಹಿರಿಯ ವಕೀಲರಾದ ಬಿ.ಎನ್.ರವಿ, ಶಿವಕುಮಾರ್, ಎ.ಎಸ್.ಮಹೇಶ್ವರಪ್ಪ, ಅಶೊಕ್ಕುಮಾರ್, ಸವಿತಾ, ಬಸವರಾಜು, ಸುಬ್ರಹ್ಮಣ್ಯಸ್ವಾಮಿ, ಶೋಭಾ ಜಯದೇವ್ ನ್ಯಾಯಾಲಯ ಕಲಾಪ ನಡೆಸಿಕೊಡುವ ಮೂಲಕ ಹಲವಾರು ಕೇಸ್ಗಳ ರಾಜಿಸಂಧಾನ ಮಾಡಿಸಿದರು.
ಇದಕ್ಕೂ ಮುನ್ನ ಕಳೆದ ಮೂರು ದಿನಗಳಿಂದ ತಾಲೂಕಿನ ಮುದುಡಿ, ಲಾಳನಕೆರೆ, ಗಂಡಸಿ, ಜಾಜೂರು, ಮತ್ತು ಚಿಕ್ಕೂರು ಗ್ರಾಮಗಳಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆ ಮೂಲಕ ಪ್ರಧಾನ ನ್ಯಾಯಾಧೀಶರಾದ ದೇವಾನಂದ್ ಹಾಗೂ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚನ್ನಪ್ಪ ಕುರುಬೆಟ್ ಹಾಗೂ ವಕೀಲರ ಸಂಘದವರು ಸಂಚರಿಸಿ ಗ್ರಾಮೀಣ ಭಾಗದ ಜನರಲ್ಲಿ ಸಾಮಾನ್ಯ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

