ಹಾಸನ

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ

Published On :

ಹಾಸನ: ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಲೋಯರ್ ಡಿವಿಜನ್ ಕ್ಲರ್ಕ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಸ್ಟಾಫ್ ಸೆಲೆಕ್ಷನ್ ಕಮೀಷನ್ ನ. 10 ಅಥವಾ 17 ರಂದು ದೇಶದೆಲ್ಲೆಡೆ  ಪರೀಕ್ಷೆ ನಡೆಸಲಿದೆ. ಪರೀಕ್ಷೆಯಲ್ಲಿ  ಜನರಲ್ ಇಂಟಲಿಜೆನ್ಸ್, ಜನರಲ್ ಇಂಗ್ಲಿಷ್ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್, ಜನರಲ್ ಆವೇರ್ನೆಸ್ ವಿಷಯಗಳಿದ್ದು,  ಪ್ರತಿ ವಿಷಯಕ್ಕೆ 50 ಅಂಕಗಳು.  ಒಟ್ಟಿಗೆ 200 ಅಂಕಗಳು. 2ಗಂಟೆ ಅವಧಿಯ ಬಹು ಆಯ್ಕೆ ವಿಧಾನ ಪರೀಕ್ಷೆ ಇರುತ್ತದೆ. ಮಾಹಿತಿಗೆ ಕೃಷಿಕ್ ಸರ್ವೋದಯ ಫೌಂಡೇಷನ್ ಮೊ. 9845581710  ಸಂಪರ್ಕಿಸಬಹುದು.
ಮಕ್ಕಳ ನಾಟಕ ರಚನೆ ಕಾರ್ಯಕ್ರಮ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬೆಂಗಳೂರಿನ ಹಂಸಲೇಖ ದೇಸೀ ಕಾಲೇಜು ವತಿಯಿಂದ ಮಕ್ಕಳ ನಾಟಕ ರಚನೆ ಕಾರ್ಯಕ್ರಮವನ್ನು ಕಿರು ನಾಟಕ ವರ್ಷ 2013-14 ಶೀರ್ಷಿಕೆಯಡಿ  ಅ. 31ರಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ನಾಗರಾಜ್ ತಿಳಿಸಿದ್ದಾರೆ. ಮಕ್ಕಳ ನಾಟಕ ರಚನೆ ಮಾಡಿರುವ ಹಿರಿಯ ಸಾಹಿತಿಗಳಿಗೆ ಆದ್ಯತೆ ನೀಡಲಾಗುವುದು 30 ಮಂದಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶ. ಅ. 25 ರೊಳಗಾಗಿ ಪರಿಷತ್ತಿನ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಕಾರ್ಯಕ್ರಮದ ವಿವರಗಳನ್ನು ಪರಿಷತ್ತಿನ ಕಚೇರಿ ವೇಳೆಯಲ್ಲಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.