ಡಿಪೋ ಮುಂಭಾಗ ಚಾಲಕರು, ನಿರ್ವಾಹಕರ ಪ್ರತಿಭಟನೆ
ಚನ್ನರಾಯಪಟ್ಟಣ: ರಾಜ್ಯ ಸಾರಿಗೆ ಸಂಸ್ಥೆ ಚನ್ನರಾಯಪಟ್ಟಣ ಘಟಕದ ಬಸ್ಸೊಂದು ತಾಂತ್ರಿಕ ಕಾರಣದಿಂದ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ಡಿಪೋದಲ್ಲಿ ಚಾಲಕರು ಹಾಗೂ ನಿರ್ವಾಹಕರು ತಮಗೆ ಗುಣಮಟ್ಟದ ಬಸ್ಗಳನ್ನು ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದರು.
ಶುಕ್ರವಾರ ಮುಂಜಾನೆ ಬಸ್ ಡಿಪೋ ಎದುರು ತಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ.ತಮಗೆ ಗುಣಮಟ್ಟದ ಬಸ್ಗಳನ್ನು ನೀಡಲು ಕಳೆದ 6 ತಿಂಗಳಿಂದ ಮನವಿ ಮಾಡಿದರೂ ಕೇಳುವವರಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಚಾಲಕರು ಹಾಗೂ ನಿರ್ವಾಹಕರು ಒಂದು ಗಂಟೆಗೂ ಅಧಿಕ ಸಮಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಧರಣಿ ನಡೆಸಿದರು.
ಗುರುವಾರ ಬೆಳ್ಳೂರು ಕ್ರಾಸ್ ಬಳಿ ಬಸ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಘಟಕದಲ್ಲಿ ದೂರಕ್ಕೆ ತೆರಳುವ ವಾಹನಗಳೂ ಕೂಡ ಹಳೆಯ ಮಾದರಿಯ ಬಸ್ಗಳಾಗಿದ್ದು, ಅವುಗಳನ್ನು ರಿಪೇರಿ ಮಾಡಲು ಸಾಧ್ಯವಿಲ್ಲದಿದ್ದರೂ ತಾವು ಅವುಗಳನ್ನೇ ಓಡಿಸಬೇಕಾಗಿದೆ ಎಂದು ಚಾಲಕರು ತಮ್ಮ ಅಳಲನ್ನು ತೋಡಿಕೊಂಡರು. ಧರಣಿ ನಿರತ ಸ್ಥಳಕ್ಕೆ ಶಾಸಕ ಬಾಲಕೃಷ್ಣ ಬೇಟಿ ನೀಡಿ ಸಂಸ್ಥೆಯ ಸಿಬ್ಬಂದಿ ಅಳಲನ್ನು ಆಲಿಸಿ ಕೂಡಲೇ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರ ಜತೆ ಚರ್ಚಿಸಿ ಹೊಸ ಬಸ್ಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಚಾಲಕ ಹಾಗೂ ನಿರ್ವಾಕರು ಕರ್ತವ್ಯಕ್ಕೆ ಹಾಜರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

