ಹಾಸನ

ಬಕೆಟ್ ಖರೀದಿಯಲ್ಲಿ ಅವ್ಯವಹಾರ: ಲೋಕಾಯುಕ್ತ ಎಸ್ಪಿಗೆ ದೂರು

Published On :

 ಹಾಸನ: ಸ್ವಚ್ಛತೆಗೆ ಸಂಬಂಧಿಸಿದಂತೆ ನಗರಸಭೆಯಿಂದ ನೀಡಿರುವ ಕಸದ ಬಕೆಟ್ಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ತನಿಖೆಗೆ ನಡೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಲೋಕಾಯುಕ್ತ ಎಸ್ಪಿಗೆ ಶುಕ್ರವಾರ ದೂರು ನೀಡಿದರು.
ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಂತದ ತ್ಯಾಜ್ಯ ಸಂಗ್ರಹಣೆಗಾಗಿ ಪ್ಲಾಸ್ಟಿಕ್ ಬರೆಟ್ಗಳನ್ನು ಅಲ್ಪಾವಧಿ ಟೆಂಡರ್ ಕರೆಯಲಾಗಿತ್ತು. ಮಾರುತಿ ಪ್ಲಾಸ್ಟಿಕ್ ಮಂಗಳೂರು ಇವರಿಂದ ಒಂದು ಬಕೆಟ್ಗೆ 147.70 ರು.ನಂತೆ 52,200 ಬಕೆಟಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು. ಒಂದು ಬಕೆಟ್ ಬೆಲೆ ಮುಕ್ತ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಬೆಲೆ ನೀಡಲಾಗಿದೆ. ಶೇ.10 ರಿಂದ 15 ರಷ್ಟು ಮನೆಗಳಿಗೆ ಇನ್ನು ಬಕೆಟ್ ವಿತರಿಸಲಾಗಿಲ್ಲ. ನಗರದಲ್ಲಿ 20 ಸಾವಿರ ಮನೆಗಳಿದ್ದು, 52 ಸಾವಿರ ಬಕೆಟ್ ಖರೀದಿಸುವ ಅವಶ್ಯಕತೆ ಇರಲಿಲ್ಲ. ಸರ್ಕಾರದಿಂದ ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೆ ಬಿಡುಗಡೆಯಾಗುವ ಎಲ್ಲಾ ಹಣಕ್ಕೂ ಸ್ಥಳೀಯ ಶಾಸಕರೇ ಹೊಣೆಗಾರರು ಆಗುತ್ತಾರೆ ಎಂದು ಆರೋಪಿಸಿದ ಮುಖಂಡರು, ಯಾವುದೆ ಒಂದು ಯೋಜನೆ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕಾದ ಹೊಣೆ ಕ್ಷೇತ್ರದ ಶಾಸಕರು ತೆಗೆದುಕೊಳ್ಳಬೇಕು ಎಂದರು. ಬಕೆಟ್ ಖರೀದಿಯಲ್ಲಿ ಆಗಿರುವ ಅವ್ಯವಹಾರವನ್ನು ಲೋಕಾಯುಕ್ತರು ತನಿಖೆ ಮಾಡುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದರು.
ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಸದಸ್ಯ ರಮೇಶ್ಬಾಬು, ಎಸ್.ಮಂಜುನಾಥ್ ಶರ್ಮಾ, ಚನ್ನಪಟ್ಟಣ ಗೃಹ ಮಂಡಳಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ್, ದುರ್ಗಾ ಪರಮೇಶ್ವರಿ ದೇವಾಲಯ ಅಧ್ಯಕ್ಷ ಬಿ.ಎನ್. ಮಹಂತೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.