ಹಾಸನ

ಜಿಪ್ಸಂ ಗೊಬ್ಬರ ತೂಕದಲ್ಲಿ ಮೋಸ

Published On :

ಸಕಲೇಶಪುರ: ಕೃಷಿ ಇಲಾಖೆ ಪೂರೈಸಿದ್ದ ಜಿಪ್ಸಂ ಗೊಬ್ಬರ ತೂಕದಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಕ್ಯಾನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಭತ್ತದ ಗದ್ದೆಗಳಿಗೆ ಹಾಗೂ ಕಾಫಿ ತೋಟಗಳಿಗೆ ಮೇಲುಗೊಬ್ಬರವಾಗಿ ಉಪಯೋಗಿಸಲಾಗುವ ಜಿಪ್ಸಂನ್ನು ಸ್ಥಳೀಯ ಕೃಷಿ ಇಲಾಖೆ 50 ಕೆ.ಜಿ ತೂಕವುಳ್ಳ  295 ಚೀಲವನ್ನು 95 ರು.ನಂತೆ ರೈತರಿಗೆ ಪೂರೈಸಲಾಗಿದೆ. ಆದರೆ ಪ್ರತಿಚೀಲ ಗೊಬ್ಬರದಲ್ಲಿ 30 ರಿಂದ 35 ಕೆ.ಜಿ ಜಿಪ್ಸಂ ಗೊಬ್ಬರವಿದ್ದು  ಗ್ರಾಮಸ್ಥರಿಗೆ ಮೋಸ ಮಾಡಲಾಗಿದೆ ಎಂದು ದೂರಿದ್ದಾರೆ.  ತೂಕದಲ್ಲಿ ಜಿಪ್ಸಂ ಕಡಿಮೆ ಬಂದಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದು ಜಿಪ್ಸಂ ಪೂರೈಸಿರುವ ಮೈಸೂರಿನ ಕಂಪನಿ ಲೋಪ ಸರಿಪಡಿಸುವ ಬಗ್ಗೆ ಹೇಳಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.