ನ್ಯೂ ಮಿನರ್ವ ಮಿಲ್ಉದ್ಘಾಟನೆ ಸಮಾರಂಭ ಇಂದು
ಹಾಸನ: ತಾಲೂಕಿನ ಹನುಮಂತಪುರ ಬಳಿ ಇರುವ ನ್ಯೂ ಮಿನರ್ವ ಮಿಲ್ನ್ನು ಅ.12 ರಂದು ಬೆಳಿಗ್ಗೆ 10.30 ಕ್ಕೆ ಕೇಂದ್ರ ಜವಳಿ ಖಾತೆ ಸಚಿವ ಡಾ.ಕಾವೂರು ಸಾಂಬ ಶಿವರಾವ್ ಉದ್ಘಾಟಿಸುವರು. ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ, ಕೇಂದ್ರದ ರಾಜ್ಯ ಜವಳಿ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವೆ ಪನಬಾಕಲಕ್ಷ್ಮಿ, ರಾಜ್ಯ ಜವಳಿ ಸಚಿವ ಬಾಬುರಾವ ಚಿಂಚನಸೂರ್, ರಾಜ್ಯ ಲೋಕೋಪಯೋಗಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.15ಕ್ಕೆ ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.
150 ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಚುರುಕು
ಹಾಸನ: ಜಿಲ್ಲಾದ್ಯಂತ 150 ಕೇಂದ್ರಗಳನ್ನು ತೆರೆದು, ಆಧಾರ್ ನೋಂದಣೆ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯ ಜನಸಂಖ್ಯೆಯ ಪೈಕಿ ಶೇ. 43.74 ರಷ್ಟು ಮಂದಿ ಮಾತ್ರ ಆಧಾರ್ ನೋಂದಣಿ ಮಾಡಿಸಿದ್ದು, ಉಳಿದವರಿಗೆ ತ್ವರಿತವಾಗಿ ಮಾಡಿಸಿಕೊಡಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕು ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. 2011 ರ ಜನಗಣತಿಯಂತೆ ಜಿಲ್ಲೆಯಲ್ಲಿ 17, 76, 221 ಜನಸಂಖ್ಯೆ ಇದ್ದು, ಮೊದಲ ಹಂತದಲ್ಲಿ 49, 137 ಮಂದಿಗೆ ನೋಂದಣಿ ಆಗಿದ್ದು, ಎರಡನೇ ಹಂತದಲ್ಲಿ 7,90, 80 ಮಂದಿಗೆ ಆಗಿದೆ. ಇನ್ನೂ 7, 76, 991 ಮಂದಿ ನೋಂದಣಿ ಮಾಡಿಸಬೇಕಾಗಿದೆ. ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್, ಕಾರ್ವಿ ಸೇರಿದಂತೆ ಖಾಸಗಿ ಸಂಸ್ಥೆಗಳಿಂದ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಲಾರಿ ಡಿಕ್ಕಿ - ಬೈಕ್ ಸವಾರ ಸಾವು
ಹಾಸನ: ಲಾರಿ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ. ಬೆಂಗಳೂರು ತ್ಯಾಗರಾಜನಗರದ ವಿನಯ್ (22) ಸಾವನ್ನಪ್ಪಿದ ದುರ್ದೈವಿ. ವಿನಯ್ ಹೊಂಡಾ ಬೈಕಿನಲ್ಲಿ ಸ್ನೇಹಿತ ದಿನೇಶ್ ಅವರನ್ನು ಕೂರಿಸಿಕೊಂಡು ಗೊರೂರು ಠಾಣಾ ವ್ಯಾಪ್ತಿ ಜವೇನಹಳ್ಳಿ-ಶೆಟ್ಟಿಹಳ್ಳಿ ರಸ್ತೆ ಪೂಜಾ ಸ್ಟೋರ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿನಯ್ ಮೃತಪಟ್ಟಿದ್ದಾರೆ. ದಿನೇಶ್ ಗೊರೂರು ಠಾಣೆಗೆ ದೂರು ನೀಡಿದ್ದಾರೆ.
ಮದ್ಯ ಮಾರಾಟ:
3 ಜನರ ಬಂಧನ
ಆಲೂರು: ಮದ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಆಲೂರಿನಲ್ಲಿ ಗುರುವಾರ ನಡೆದಿದೆ. ತಾಲೂಕಿನ ಕಸಬಾ ಹೋಬಳಿ, ಬೈರಾಪುರ ಬಿ.ಎಂ.ರಸ್ತೆಯ ಕಳಿಂಗ ವೈನ್ ಶಾಪ್ ಪಕ್ಕದ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಹುಬ್ಬಳಿಯ ರವಿ (22), ಹುಬ್ಬಳ್ಳಿಯ ಮೋಹನ (22) ಮತ್ತು ಆಲೂರಿನ ಕಿರಗಡಲು ಗ್ರಾಮದ ಸುರೇಶ (23) ಎಂಬವರನ್ನು ಬಂಧಿಸಿದ್ದು, ಅಕ್ರಮವಾಗಿ ಮದ್ಯ ಮಾರಾಟಕ್ಕಿಟ್ಟಿದ್ದ 24,874 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ಹಾಸನ: ನಗರ ಪಾರ್ಕ್ ರಸ್ತೆ, ಸರ್ಕಾರಿ ಬಾಲಮಂದಿರದ ನಿವಾಸಿ ಮುರುಗೇಶ(8) ಬಾಲಮಂದಿರದಿಂದ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ಚಹರೆ ಮುರುಗೇಶ ಬಿನ್ ರವಿ, 8 ವರ್ಷ, ಕನ್ನಡ ಮಾತನಾಡುತ್ತಾನೆ. ಬಾಲಮಂದಿರದ ಅಧಿಕಾರಿ ಭವಾನಿ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

