ಹಾಸನ

ಮಾಧ್ಯಮ ಉಸ್ತುವಾರಿ ಸಮಿತಿಗೆ ನೇಮಕ

Published On :

ಹಾಸನ:  ಲೋಕಸಭಾ ಸಾರ್ವತ್ರಿಕ ಚುನಾವಣೆ-2014ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದ ಲೋಕಸಭಾ ವ್ಯಾಪ್ತಿಗೆ ಮಾಧ್ಯಮ ದೃಢೀಕರಣ ಮತ್ತು ಉಸ್ತುವಾರಿ ಸಮಿತಿಯನ್ನು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅನ್ಬುಕುಮಾರ್ ಸಮಿತಿ ಅಧ್ಯಕ್ಷರಾಗಿದ್ದು ಅವರ ಮೊ. 9480068270, ರೇಷ್ಮೆ ಇಲಾಖೆ ಉಪ ನಿರ್ದೇಶಕ  ಶಿವನಾಗೇಂದ್ರಬಾಬು ಸಮಿತಿ ಸದಸ್ಯರಾಗಿದ್ದು ಅವರ ಮೊ. 9741156468, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ  ವಿನೋದ್ಚಂದ್ರ ಸಮಿತಿ ಸದಸ್ಯರ ಕಾರ್ಯದರ್ಶಿಯಾಗಿದ್ದು ಮೊ 9448267068, ಆಲ್ ಇಂಡಿಯಾ ರೇಡಿಯೋ ಪ್ರಸಾರ ನಿರ್ವಾಹಕ(ಕೃಷಿ)  ಡಾ. ವಿಜಯ್ ಅಂಗಡಿ ಸದಸ್ಯರಾಗಿದ್ದು ಮೊ. 9448996495 ಆಗಿದೆ.
 ಸರ್ಕಾರಿ ಎಲ್.ವಿ. ಪಾಲಿಟೆಕ್ನಿಕ್ನ ಪ್ರಾಧ್ಯಾಪಕ ಐವನ್ ಡಿಸಿಲ್ವ ಸದಸ್ಯರಾಗಿದ್ದು ಮೊ. 9448073330 ಮತ್ತು ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಕಿರಿಯ ಸಹಾಯಕ ಪ್ರಕಾಶ್ ಸಮಿತಿ ಸಹಾಯಕರಾಗಿದ್ದು ಮೊ. 9481114898 ಆಗಿದೆ ಎಂದು ತಿಳಿಸಿದ್ದಾರೆ.
'ಆರ್ಥಿಕ ಗಣತಿಯಿಂದ ಯೋಜನೆಗೆ ಸಹಕಾರಿ'
ಹಾಸನ: 2011ರ ಜನಗಣತಿ ಆಧಾರದ ಮೇಲೆ 6ನೇ ಆರ್ಥಿಕ ಗಣತಿ ಕೈಗೊಂಡಿದ್ದು ಅಭಿವೃದ್ಧಿ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಲು ಈ ಗಣತಿ ಸಹಕಾರಿಯಾಗಲಿದೆ ಎಂದು  ಅಪರ ಜಿಲ್ಲಾಧಿಕಾರಿ  ಡಾ.ಗೋಪಾಲಕೃಷ್ಣ ತಿಳಿಸಿದರು.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 6ನೇ ಆರ್ಥಿಕ ಗಣತಿಯ ಕ್ಷೇತ್ರ ಸಮೀಕ್ಷೆಗೆ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಗಣತಿಯಿಂದ ಕೈಗಾರಿಕೆಗಳ, ಅಂಗಡಿಗಳ, ಜವಳಿ ಕಾರ್ಖಾನೆಗಳ, ಕೈಮಗ್ಗಳ ಇತ್ಯಾದಿ ಸಂಖ್ಯೆಗಳು ದೊರೆಯುತ್ತವೆ.
  ಸಣ್ಣ ಮತ್ತು ಅತಿ ಸಣ್ಣ ಘಟಕಗಳು ಕಾರ್ಯನಿರ್ವಹಿಸುವ ಪ್ರದೇಶಗಳ ವಿವರಗಳನ್ನು ಈ ಗಣತಿಯಲ್ಲಿ ಸಂಗ್ರಹಿಸುವುದರಿಂದ  ಕೈಗಾರಿಕೆ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳಿಗೆ ಸೌಲಭ್ಯ ವಿಸ್ತರಿಸಲು  ಯೋಜನೆ ರೂಪಿಸಲು ಉಪಯೋಗಿಸಲಾಗುವುದು.
 ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಈ ಕಾರ್ಯ ಮೇಲುಸ್ತುವಾರಿಯ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಗ್ರಾಮಾಂತರ ಪ್ರದೇಶಕ್ಕೆ ತಹಸೀಲ್ದಾರರು, ಪಟ್ಟಣ ಪ್ರದೇಶಕ್ಕೆ ಸಂಬಂಧಪಟ್ಟ ಮುಖ್ಯಾಧಿಕಾರಿ, ಆಯುಕ್ತರು ಚಾರ್ಜ್  ಅಧಿಕಾರಿಗಳಾಗಿರುತ್ತಾರೆ.  ಗಣತಿ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಜಿಲ್ಲಾಧಿಕಾರಿ ನೇಮಕಾತಿ  ಆದೇಶ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.