ಚೆಲುವ ಚನ್ನಿಗನಿಗೆ ನವರಾತ್ರಿ ವಿಶೇಷ ಪೂಜಾ ಕೈಂಕರ್ಯ
ಕ.ಪ್ರ.ವಾರ್ತೆ , ಬೇಲೂರು , ಅ.16
ಕೈಮುಗಿದು ಒಳಗೆ ಬಾ ಯಾಂತ್ರಿಕನೆ ಶಿಲೆಯಲ್ಲ ಈ ಗುಡಿ ಕಲೆಯ ಮಂದಿರ ಎಂಬ ಕವಿ ವಾಣಿಯಂತೆ ಬೇಲೂರು ಕಲಾ ರಸಿಕರ ಪಾಲಿಗೆ ಶಿಲ್ಪ ಕಲೆಗಳ ಬೀಡು. ಭಕುತ ಭಕ್ತರಿಗೆ ವೈಕುಂಠವಾಗಿರುವ ಬೇಲೂರು ಶ್ರೀ ಚನ್ನಕೇಶವ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳ ಪರ್ಯಂತ ವಿಶೇಷ ಪೂಜೆ ಹಾಗೂ ಹೋಮ ಹವನಗಳು ಸಾಂಗವಾಗಿ ನಡೆದವು. ನವರಾತ್ರಿ ಕೊನೆಯ ದಿನ ವಿಜಯದಶಮಿ ಅಂಗವಾಗಿ ಶ್ರೀಚನ್ನಕೇಶವಸ್ವಾಮಿ ಹಾಗೂ ಅಮ್ಮನವರಿಗೆ ನಾನಾವಿಧ ಅಭಿಷೇಕ ಮತ್ತು ಪುಷ್ಪಾಲಂಕಾರ ಮಾಡಲಾಯಿತು.
ಅಸಂಖ್ಯ ಭಕ್ತ ವೃಂದ ದೇವರ ದರ್ಶನ ಗೈದು ಪುನೀತರಾದರು. ಮ. 4 ರಲ್ಲಿ ಬಂಟೆನಹಳ್ಳಿ ಬನ್ನಿ ಮಂಟಪಕ್ಕೆ ತೆರಳುವ ಸಂದರ್ಭದಲ್ಲಿ ಸ್ವಲ್ಪ ಸಮಯ ವರುಣನ ಆಗಮನವಾಗಿತ್ತು. ದೇವಾಲಯದಿಂದ ಪಟ್ಟಣದ ರಾಜಬೀದಿಗಳಾದ ಕೆಂಪೇಗೌಡರ ವೃತ್ತ, ಬಸವೇಶ್ವರವೃತ್ತ ಹಾಗೂ ನೆಹರು ವೃತ್ತ ಹಾಯ್ದು ಬಂಟೇನಹಳ್ಳಿ ಬನ್ನಿಮಂಟಪಕ್ಕೆ ಮಂಗಳವಾದ್ಯ ವೇದಘೋಷದ ನಡುವೆ ಮರವಣಿಗೆ ಸಾಗಿತು. ದಾರಿಯುದ್ದಕ್ಕೂ ಭಕ್ತರು ಕೇಶವನ ದರ್ಶನ ಪಡೆದರು.
ಶ್ರೀಚನ್ನಕೇಶವಸ್ವಾಮಿ ಹಾಗೂ ಅಮ್ಮನವರು ಅಶ್ವರೂಢರಾಗಿ ಬನ್ನಿಮಂಟಪದಲ್ಲಿ ಆಸೀನವಾದ ಬಳಕ ಬನ್ನಿ ಮರಕ್ಕೆ ವೇದ ಮಂತ್ರಗಳಿಂದ ವಿಶೇಷ ಪೂಜಾದಿಗಳು ಮಂಗಳಾರಾತಿ ನೀಡಿ ಬನ್ನಿ ಮರದ ಎಲೆಗಳಿಗೆ ಕತ್ತಿಯಿಂದ ಕತ್ತರಿಸಿ ಭಕ್ತರಿಗೆ ಬನ್ನಿ ಪತ್ರೆ ನೀಡಲಾಯಿತು. ಭಕ್ತರಿಗೆ ದೇವಾಲಯದಿಂದ ಪ್ರಸಾದ ವಿನಿಯೋಗಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

