ಮತ್ತೆ ಗುಲಾಮಗಿರಿಯತ್ತ ದೇಶ: ವೆಂಕಟರಾಮು ವಿಷಾದ
ಕ.ಪ್ರ.ವಾರ್ತೆ ಅರಸೀಕೆರೆ ಅ.17
ಎರಡು ಸಾವಿರ ವರ್ಷದ ಇತಿಹಾಸ ಹೊಂದಿರುವ ಭಾರತದ ಸಂಸ್ಕೃತಿಯಲ್ಲಿ 400 ವರ್ಷ ದಾಸ್ಯದ ಹುರುಳಲ್ಲಿ ಬೆಂದು ಸ್ವಾತಂತ್ರ್ಯ ಬಂದರೂ ನಮಗೆ ಗೊತ್ತಿಲ್ಲದ ಹಾಗೆ ದೇಶವನ್ನು ಮತ್ತೆ ಗುಲಾಮಗಿರಿಗೆ ಕೊಂಡೊಯ್ಯುತ್ತಿರುವ ಬಗ್ಗೆ ಮೈಸೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ವೆಂಕಟರಾಮು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ 88 ವಸಂತಗಳನ್ನು ದಾಟಿ 89ನೇ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಅಖಂಡ ಹಿಂದೂಸ್ತಾನದಲ್ಲಿ ಅಪಾಯಕಾರಿ ಘಟನೆಗಳು ನಡೆದಾಗ ತನ್ನ ಅಸ್ತಿತ್ವವನ್ನು ಇಟ್ಟುಕೊಂಡು ಯಾವುದೇ ಮಾಧ್ಯಮ, ಮೀಡಿಯಾ ಸಂಪರ್ಕವಿಲ್ಲದೆ ಸ್ವಯಂ ಸೇವಕರ ಸಹಾಯದಿಂದ ಉದಾಹರಣೆಗೆ ರಾಮಸೇತು ಅಮರನಾಥಯಾತ್ರೆ ಮುಂತಾದ ಹಲವು ಹೋರಾಟಕ್ಕೆ ಕರೆ ಕೊಟ್ಟಾಗ ದೇಶದ 50ಸಾವಿರಕ್ಕೂ ಹೆಚ್ಚು ಶಾಖೆಗಳಿಂದ ಹಿಂದೂಸ್ತಾನದ ಉನ್ನತಿಗೆ ಹೋರಾಡಿದ ಸಂಘ ಕಾರ್ಯಕರ್ತರ ಪರಿಶ್ರಮ ಅಪಾರವಾದುದು ಎಂದರು.
1925ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಮಹಿಥೇವಾಡ ಗ್ರಾಮದಲ್ಲಿ ಡಾ.ಕೇಶವಬಲಿರಾಮ ಹೆಡಗೆವಾರ್ ಅವರು ನೆಟ್ಟ ಸಸಿ ಇಂದು ಅಖಂಡ ಭಾರತದ ಹೆಮ್ಮರವಾಗಿದೆ. ಯಾವುದೇ ಪ್ರಚಾರವಿಲ್ಲದೆ ಜಗತ್ತಿನಲ್ಲೇ ಅದ್ವಿತೀಯ ಸಂಘಟನೆಯಾಗಿದೆ ಎಂದು ತಿಳಿಸಿದರು.
ಸಂಘಚಾಲಕ ಕೋ.ರಾ.ಶ್ರೀನಿವಾಸಮೂರ್ತಿ, ವಿಭಾಗ ಕಾರ್ಯವಾಹ ಲ.ನ.ಶಾಸ್ತ್ರೀ ಹಾಗೂ ವಿಭಾಗ ಸೇವಾ ಪ್ರಮುಖ ಸತ್ಯನಾರಾಯಣ, ಮಾಜಿ ಶಾಸಕ ಎ.ಎಸ್.ಬಸವರಾಜ್, ಪುರಸಭಾ ಮಾಜಿ ಸದಸ್ಯ ಎ.ಸಿ.ಶಂಕರಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್, ಎ.ಎಲ್.ನಾರಾಯಣ್, ಪುರಿ ನಾಗೇಶ್ ಇದ್ದರು. ಇದೇ ಸಂದರ್ಭದಲ್ಲಿ ಪಟ್ಟಣದ ರಾಜಬೀದಿಗಳಲ್ಲಿ ಆಕರ್ಷಣೀಯ ಪಥಸಂಚಲನ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

