ಬದುಕುವ ಕಲೆ ಹೇಳಿಕೊಟ್ಟ ಮಹರ್ಷಿ
ಕ.ಪ್ರ.ವಾರ್ತೆ , ಸಕಲೇಶಪುರ , ಅ. 18
ಗ್ರಂಥದ ಮೂಲಕ ಬದುಕುವ ಕಲೆಯನ್ನು ಹೇಳಿಕೊಟ್ಟ ವಾಲ್ಮೀಕಿ ಮಹರ್ಷಿ ಮಹಾನ್ ಮಾನವತಾವಾದಿ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಪಟ್ಟಣದ ಪುರಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೀಳು ಕುಲದಿಂದ ಜನಿಸಿ ಭೂಮಂಡಲ ಇರುವವರೆಗೆ ಶಾಶ್ವತವಾಗಿರುವಂತಹ ಶ್ರೇಷ್ಠ ಸಾಧನೆ ಮಾಡಿದ ವಾಲ್ಮೀಕಿ ಇಂದಿನ ಜನರಿಗೆ ದಾರಿ ದೀಪವಾಗಿದ್ದಾರೆ. ಬದುಕಿನ ಬದಲಾವಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಾಲ್ಮೀಕಿ ರಾಮಾಯಣ ಓದುವುದು ಅಗತ್ಯವಿದೆ. ಆದರೆ ಇಂದಿನ ಜನರಿಗೆ ಒಳ್ಳೆಯ ಚಿಂತನೆಯೇ ಇಲ್ಲವಾಗಿದೆ ಎಂದು ವಿಷಾದಿಸಿದರು.
ಪುರಸಭೆ ಅಧ್ಯಕ್ಷ ಸತೀಶ್ ಮಾತನಾಡಿ, ವಾಲ್ಮೀಕಿ ಜನಿಸಿದಂತಹ ಭೂಮಿಯಲ್ಲಿ ನಾವಿರುವುದು ಹೆಮ್ಮೆಯ ವಿಚಾರ ಎಂದರು. ಪುರಸಭೆ ಸದಸ್ಯ ನಿರ್ವಾಣಯ್ಯ ಮಾತನಾಡಿ, ಕಾಟಾಚಾರದ ಕಾರ್ಯಕ್ರಮಗಳನ್ನು ಆಚರಿಸಿತ್ತಿರುವುದು ಅರ್ಥಹೀನ. ಸರ್ಕಾರಿ ರಜೆ ನೀಡಿ ಜಯಂತಿ ಆಚರಿಸುತ್ತಿರುವುದರಿಂದ ಜಯಂತಿ ಕಾರ್ಯಕ್ರಮಗಳಿಗೆ ಜನರ ಸ್ಪಂದನೆ ಇಲ್ಲದಾಗಿದೆ. ಆದ್ದರಿಂದ ಮಹಾತ್ಮರ ಜಯಂತಿ ಕಾರ್ಯಕ್ರಮಗಳಿಗೆ ರಜೆ ನೀಡುವುದನ್ನು ಸರಕಾರ ನಿಷೇದಿಸ ಬೇಕು ಎಂದು ಆಗ್ರಹಿಸಿದರು.
ಜಿಪಂ ಸದಸ್ಯೆ ಸುಲೋಚನಾ ರಾಮಕೃಷ್ಣ,ತಾಪಂ ಸದಸ್ಯೆ ಸಿದ್ದಯ್ಯ,ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷೆ ಪಾರ್ವತಿ, ಪುರಸಭೆ ಸದಸ್ಯರು ಇದ್ದರು.
ಹೀಗೊಂದು ಭಾಷಣ: ಎಸ್ಸಿ, ಎಸ್ಟಿಗಳ ಉನ್ನತಿಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ವಾಲ್ಮೀಕಿ ಅವರು ಬರೆದಿರುವ ಕಥೆಯನ್ನು ಎಲ್ಲರು ತಪ್ಪದೆ ಓದಬೇಕು ಎಂದು ತಾಪಂ ಅಧ್ಯಕ್ಷೆ ಮಂಜುಳ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

