ಪವಿತ್ರ ಗಾಯತ್ರಿಶಿಲೆಯಲ್ಲಿ ಪ್ರಾಣಿಬಲಿಗೆ ಪರಿತಾಪ
ಕ.ಪ್ರ.ವಾರ್ತೆ ಅರಕಲಗೂಡು ಅ.28
ಪುರಾಣ ಪ್ರಸಿದ್ಧ ದಕ್ಷಿಣಕಾಶಿ ಎಂದೇ ಹೆಸರಾಗಿರುವ ರಾಮನಾಥಪುರದ ಸುಬ್ರಹ್ಮಣ್ಯೇಶ್ವರ ದೇವಾಲಯ ಬಳಿ ಜೀವನದಿ ಕಾವೇರಿ ದಡದಲ್ಲಿನ ಪವಿತ್ರ ಗಾಯತ್ರಿ ಶಿಲೆ ಮೇಲೆ ಭಾನುವಾರ ಪ್ರಾಣಿಬಲಿ ನಡೆಸಿ ಧಾರ್ಮಿಕ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ.
ಹಾಸನದ ಬಿ. ಕಾಟಿಹಳ್ಳಿಯ ನಿವಾಸಿ ಪುತ್ತೂರಪ್ಪ ಘಟನೆ ಕುರಿತು ಮಾತನಾಡಿ, ನಮ್ಮ ಊರಿನ ಜಮೀನಿನಲ್ಲಿ ಇರುವ ಬೇಡರ ಕಲ್ಲು ಭಿನ್ನವಾಗಿದ್ದು ಈ ಬಗೆ ಜ್ಯೋತಿಷಿಯೊಬ್ಬರನ್ನು ಪ್ರಶ್ನೆ ಕೇಳಿದಾಗ ಆ ಜ್ಯೋತಿಷಿ ನಿರ್ದೇಶನದಂತೆ ಕಾವೇರಿ ನದಿಯಲ್ಲಿರುವ ಗಾಯತ್ರಿ ಶಿಲೆಯ ಬಳಿ ಮೇಕೆಯೊಂದನ್ನು ವಧಾ ಮಾಡಿ ಅಲ್ಲಿಯೇ ಅಡುಗೆ ಮಾಡಿ ನೈವೇದ್ಯ ನೀಡಿ ಭಕ್ಷಿಸುವುದರಿಂದ ನಿಮ್ಮ ಸಂಕಷ್ಟಗಳು ಪರಿಹಾರವಾಗುವುದು ಎಂದು ಸೂಚಿಸಿದರ ಮೇರೆಗೆ ಮೂಢ ನಂಬಿಕೆಗೆ ಕಿವಿಗೊಟ್ಟು ಈ ಕೃತ್ಯ ಎಸಗಿದ್ದಾಗಿ ಹಾಗೂ ಈ ಕ್ಷೇತ್ರದ ಮಹತ್ವ ಅರಿಯದೆ ತಪ್ಪು ಮಾಡಿರುವುದಾಗಿ ಪರಿತಪಿಸಿದರು.
ವೇದವ್ಯಾಸರು, ಹೇಮಾವತಿ, ಕಪಿಲ, ಕಾಮಧೇನು ಇವರುಗಳು ಈ ಪವಿತ್ರ ಗಾಯತ್ರೀ ಶಿಲೆ ಮೇಲೆ ಕುಳಿತು ತಪಸ್ಸು ಆಚರಿಸಿ ಮೋಕ್ಷ ಪಡೆದಂತ ಸ್ಥಳವಾಗಿದ್ದು ಪ್ರತಿ ವರ್ಷ ಯುಗಾದಿಯಲ್ಲಿ ದೂರದೂರಿನಿಂದ ಗ್ರಾಮದೇವತೆಗಳನ್ನು ತಂದು ಇಲ್ಲಿಯೇ ಪೂಜಿಸುವ ಪುಣ್ಯ ಸ್ಥಳವೂ ಇದಾಗಿದೆ. ಇಂತಹ ಗಾಯತ್ರಿ ಶಿಲೆಗೆ ಸೂಕ್ತ ರಕ್ಷಣೆ ಇಲ್ಲದೆ ಈ ದುರಂತ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

