ಹಾಸನ

ಅರ್ಧಕ್ಕೆ ನಿಂತ ಮಠದ ಕಾಮಗಾರಿ; ನೆರವಿಗೆ ಮನವಿ

Published On :

ಕ.ಪ್ರ. ವಾರ್ತೆ ಅರಕಲಗೂಡು ಅ.22
ಕೊಣನೂರು ಹೋಬಳಿ ಕೆಸವತ್ತೂರು ಮಠದ ಆವರಣದಲ್ಲಿ ನೂತನ ಸಿದ್ದಲಿಂಗೇಶ್ವರಸ್ವಾಮಿ ಮಠ ಹಾಗೂ ಸಭಾಂಗಣದ 2ನೇ ಅಂತಸ್ತಿನ ಕಾಂಕ್ರಿಟ್ ಕಾಮಗಾರಿ ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.
ಕೆಸವತ್ತೂರು ಸಿದ್ದಲಿಂಗೇಶ್ವರ ವಿರಕ್ತ ಮಠದ ಅವರಣದಲ್ಲಿ ಸುಮಾರು 70 ಲಕ್ಷ ರು ವೆಚ್ಚದಲ್ಲಿ ಶತಾಯುಷಿ, ತ್ರಿವಿಧ ದಾಸೋಹಿ  ಸಿದ್ದಗಂಗಾಮಠದ ಡಾ. ಶಿವಕುಮಾರ  ಸ್ವಾಮೀಜಿಯವರಿಂದ  4 ವರ್ಷಗಳ ಹಿಂದೆ ಭೂಮಿ ಪೂಜೆ ನಡೆದು ಕಟ್ಟಡದ ನಿರ್ಮಾಣಕ್ಕೆ ಶುಭ ಕೋರಿ ಕಾಮಗಾರಿಗೆ ಚಾಲನೆ ನೀಡಿದ್ದರು.
 ಶ್ರೀಗಳ ಮಾರ್ಗದರ್ಶನದಂತೆ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಮಠದ ಕೆಳ ಹಂತತ್ತಿನ ಕಟ್ಟಡದ ಕಾಮಗಾರಿ ಮುಗಿದಿದ್ದು ಎರಡನೇ ಹಂತತ್ತಿನ ಕಟ್ಟಡವು ಅಗಿದ್ದು ಉಳಿದ ಕೆಲಸಕ್ಕೆ ಹಣದ ಕೊರತೆಯಿಂದ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.
ಗ್ರಾಮೀಣ ಭಾಗದಲ್ಲಿರುವ ಕೆಸವತ್ತೂರು ಮಠದ ಬಸವಜೇಂದ್ರಸ್ವಾಮೀಜಿ ಭಕ್ತರ ಸಹಕಾರ ಹಾಗೂ ನಾನಾ ಮೂಲಗಳಿಂದ ಬಂದ ನೂತನ ಮಠದ ಅರ್.ಸಿ.ಸಿ.ವರಗಿನ ಕಾಮಗಾರಿಗೆ ಈ ತನಕ ಸುಮಾರು 40 ಲಕ್ಷ ರು. ನಷ್ಟು  ವೆಚ್ಚ ಮಾಡಿದ್ದಾರೆ. ಅರಕಲಗೂಡು ತಾಲೂಕಿನ ವೀರಶೈವ ಮಠಗಳಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಠವು ಬಹಳ ದೊಡ್ಡದು. ಬಸವರಾಜೇಂದ್ರಸ್ವಾಮಿಜಿಯವರು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ನಂತರ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಉನ್ನತಿಗೆ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಜನರಿಗೆ ಪಸರಿಸಿ ಅಭಿವೃದ್ಧಿ ಕೆಲಸಗಳಲ್ಲಿ ಹೆಜ್ಜೆ ಹಾಕಿ. ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಎಲ್ಲಾ ಭಕ್ತರ ಮನೆಗಳಲ್ಲಿ ಪೂಜಾ ಪುರಸ್ಕಾರ ನೆರವೇರಿಸಿ ಭಕ್ತರಲ್ಲಿ ಧರ್ಮ ಜಾಗೃತಿ ಉಂಟು ಮಾಡುತ್ತಾ,  ಈ ಭಾಗದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಬಸವರಾಜೇಂದ್ರಸ್ವಾಮೀಜಿ ಅವರು, ಬಡವರ ಅಂತ-ಕರಣವುಳ್ಳವರು ಸಮಾಜದ ಬಗ್ಗೆ ಕಳಜಿಯುಳ್ಳವರು. ಸುಮಾರು ಇನ್ನೂ ಸುಮಾರು 30 ಲಕ್ಷದ ರು ವೆಚ್ಚ ಬೇಕಾಗಿರುವ ಉಳಿಕೆ ಕಾಮಗಾರಿಗೆ ಭಕ್ತರು ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿ ತನು,  ಮನ, ಧನದ ಭಕ್ತಿ ಸೇವೆ ಸಲ್ಲಿಸಿ ಉಳಿದಿರುವ ಕಾಮಗಾರಿ ಮುಗಿಸಲು ಸಹಕರಿಸುವಂತೆ ಸ್ವಾಮೀಜಿಯವರು ಭಕ್ತರನ್ನು  ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.