ಹಾಸನ

ಹಾಸನಾಂಬೆ ದರ್ಶನಕ್ಕೆ ಜನಸಾಗರ

Published On :

ಕ.ಪ್ರ.ವಾರ್ತೆ ,  ಹಾಸನ ,  ಅ.24
ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವ ಗುರುವಾರ ಅದ್ಧೂರಿಯಾಗಿ ಪ್ರಾರಂಭವಾಗಿದೆ.
ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಅರಸು ವಂಶಸ್ಥರು ಬನ್ನಿ ಕಡಿದ ನಂತರ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು.
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ದೇವಿಯ ದರ್ಶನಕ್ಕಾಗಿ ಮೊದಲ ದಿನವೇ ಭಕ್ತರ ದಂಡು ಜಮಾಯಿಸಿತ್ತು. ಕಳೆದ ವರ್ಷ 15 ದಿನಗಳ ಕಾಲ ದರ್ಶನ ಭಾಗ್ಯ ಲಭ್ಯವಾಗಿತ್ತು, ಆದರೆ ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಭಕ್ತರಿಗೆ ಲಭ್ಯವಾಗಲಿದ್ದು, ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸೌಲಭ್ಯ ಸಿಗಲಿದೆ. ಕೆಲವು ಭಕ್ತರು ಹೊರಗಿನಿಂದ ನೋಡಿ ಹಾಸನಾಂಬೆಗೆ ನಮಸ್ಕರಿಸಿದರು.
ಸಾಂಪ್ರದಾಯಿಕ ವಿಧಿ- ವಿಧಾನ ಹಾಗೂ ಅರಸು ವಂಶಶ್ಥ ನರಸಿಂಹ ರಾಜ ಅರಸು ಅವರು ಬನ್ನಿ ಕಡಿದ ನಂತರ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಕ್ತಗೊಳಿಸಲಾಯಿತು. ಗರ್ಭಗುಡಿಯ ಬಾಗಿಲು ತೆರೆಯುವ ಸಂದರ್ಭದಲ್ಲಿ ದೇವಿಯ ಮುಂಭಾಗ ಹಚ್ಚಿದ್ದ ದೀಪ ಹಾಗೆಯೇ ಪ್ರಜ್ವಲಿಸುತ್ತಿತ್ತು, ಹೂ ಬಾಡಿರಲಿಲ್ಲ, ದೇವಿಗೆ ಇಟ್ಟಿದ್ದ ಎಡೆಯೂ ಲೋಪವಾಗದೆ ಇದ್ದದ್ದು, ದೇವಿಯ ಮಹಿಮೆಯನ್ನು ಮತ್ತೊಮ್ಮೆ ಸಾಕ್ಷೀಕರಿಸಿತು.
ಈ ನಂಬಿಕೆಯಲ್ಲಿ ಕೊಂಚ ಏರುಪೇರಾದರೆ ಏನಾದರೂ ತೊಂದರೆ ಆಗಲಿದೆ ಅನ್ನೋ ಪ್ರತೀತಿ ಇದೆ. ಆದರೆ ಎಲ್ಲವರು ಅಂದುಕೊಂಡಂತೆ ಆಗಿರುವುದರಿಂದ ಸಕಲಿರಗೂ ಒಳ್ಳೆಯದಾಗಲಿದೆ ಎಂದು ನಂಬಲಾಗಿದೆ.
ಮೊದಲ ದಿನ ದೇವರಿಗೆ ಅಲಂಕಾರ ಮತ್ತ ಜಿಲ್ಲಾ ಖಜಾನೆಯಿಂದ ತಂದಿದ್ದ ಆಭರಣಗಳಿಂದ ದೇವಿಗೆ ಅಲಂಕಾರ ಮಾಡಲಾಯಿತು. ಬೆಳಗ್ಗೆಯಿಂದಲೇ ಭಕ್ತರು ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ದೇವಿಯ ದರ್ಶನಕ್ಕೆ ಧರ್ಮಸ್ಥಳ ಮಾದರಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹಲವು ವೈಶಿಷ್ಯ ಹೊಂದಿರುವ ಹಾಸನಾಂಬೆ ಕಂಡು ವಿಶೇಷ ಪೂಜೆ ಸಲ್ಲಿಸಲು ರಾಜ್ಯದ ನಾನಾ ಕಡೆಗಳಿಂದ ಭಕ್ತರು ಮೊದಲ ದಿನವೇ ಆಗಮಿಸಿದ್ದರು.
ನಿರ್ಮಲಾನಂದ ಸ್ವಾಮೀಜಿಯಿಂದ ದರ್ಶನ: ಆದಿಚುಂಚನಗಿರಿ ಶ್ರೀಕ್ಷೇತ್ರದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿಯವರು ಮೊದಲ ದಿನವೇ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ನಂತರ ಮಾತನಾಡಿದ ಅವರು, ಭಾರತ ಪುಣ್ಯ ಭೂಮಿಯಲ್ಲಿ ಹಲು ಆಗಮನ ಮತ್ತು ಧಾರ್ಮಿಕ ಐತಿಹಾಸಿಕಗಳ ಹೆಗ್ಗೂರು ಇದೆ. ಆದೇ ರೀತಿ ಹಾಸನದಲ್ಲಿ ಹಾಸನಾಂಬೆ ದೇವಿ ಇದೆ. ಈ ದೇವಿಯ ದರ್ಶನ ಪಡೆಯಬೇಕು ಅಂತ ಪೂಜ್ಯರು ಅಂದುಕೊಂಡಿದ್ದರಿಂದ ಮೊದಲ ದಿನವೇ ದೇವಿಯ ದರ್ಶನ ಮಾಡಿದೆ. ಅದು ನನ್ನ ಭಾಗ್ಯವಾಗಿದೆ. ನಾಡಿನ ಜನತೆಗೆ ದೇವಿಯು ಆಶೀರ್ವಾದ ನೀಡಿ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.
ಶಾಸಕ ಎಚ್.ಎಸ್. ಪ್ರಕಾಶ್: ಹಾಸನಾಂಬೆ ದೇವಿಯ ದರ್ಶನ ಪ್ರಾರಂಭಿವಾಗಿದ್ದು, ದೇವಿಯ ಮಹಿಮೆ ಅಪಾರವಾಗಿದೆ. ಕಳೆದ ವರ್ಷ ಹಚ್ಚಿದಂತಹ ದೀಪ, ಹೂ ಹಾಗೂ ಎಡೆ ಲೋಪವಾಗಿದೆ ಅಗೇ ಇರುವುದು ಇಲ್ಲಿನ ಮಹಿಮೆಯಾಗಿದೆ. ನಾಡಿನ ಜನತೆಗೆ ದೇವಿಯು ಒಳ್ಳೆಯದನ್ನು ಮಾಡಲಿ ಹಾಗೂ ಎಲ್ಲಾ ಧರ್ಮದವರು ಈ ದೇವಿಯನ್ನು ಪೂಜಿಸುವಂತಾಗಿದ್ದು, ದೇವಿಯ ದರ್ಶನ ಪಡೆಯುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್: ಈ ದೇವಾಲಯದ ವೈಶಿಷ್ಟ್ಯದ ಹಾಗೂ ದೇವಿಯ ದರ್ಶನ ಮಾಡಿ ಬಹಳ ಸಂತೋಷವಾಗಿದೆ. ಕಳೆದ ವರ್ಷ ಹಚ್ಚಿದಂತಹ ದೀಪ, ಮುಡಿಸದಂತಹ ದೀಪ ಮತ್ತು ಇಟ್ಟಂತ ಎಡೆಯು ಸ್ಪಲ್ಪವು ವ್ಯತ್ಯಾಸಗೊಳ್ಳದೆ ಎಲ್ಲವು ತಾಜವಾಗಿತ್ತು. ನಾಡಿನ ಜನತೆ ಹೇಳಿದ್ದು, ಸತ್ಯವಾಗಿದೆ ಎಂದ ಅವರು, ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತವತಿಯಿಂದ ಎಲ್ಲಾ ರೀಯ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಾಗಿ ಗೋಪುರ ಪೂರ್ಣಗೊಂಡಿದೆ. ಅದೇ ರೀತಿ ಸಿದ್ದೇಶ್ವರ ಸ್ವಾಮಿ ದೇವಾಲಯದ ಕೆಲಸವನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದು ಅದನ್ನು ಪೂರ್ಣಗೊಳಿಸಲಾಗುತ್ತದೆ. ಜೊತೆಗೆ ಭಕ್ತರು ಸಹ ದೇವಾಲಯಕ್ಕೆ ಕಾಣಿಕೆಗಳನ್ನ ನೀಡಲು ಮುಂದೆ ಬಂದಿದ್ದಾರೆ. ಅದಕ್ಕಾಗಿಯೇ ಹುಂಡಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಈ ಬಾರಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದು, ಭಕ್ತರು ಗೊಂದಲ ಮಾಡಿಕೊಳ್ಳದೆ ದೇವಿಯ ದರ್ಶನ ಪಡೆಯುವಂತೆ ಮನವಿ ಮಾಡಿದರು.
ಎಸ್ಪಿ ರವಿ ಡಿ. ಚನ್ನಣ್ಣನವರ್: ಇತ್ತೀಚಿನ ವರ್ಷಗಳಲ್ಲಿ ದೇವಿಯ ದರ್ಶನಕ್ಕೆ ಅಪಾರ ಭಕ್ತಗಣ್ಯರು ಆಗಮಿಸುತ್ತರಿಂದ ನೂಕುನುಗ್ಗಲು ತಡೆಯಲು 2 ಕೆಎಸ್‌ಆರ್‌ಪಿ, 2 ಡಿಎಆರ್ ತುಕಡಿ, 2 ಡಿವೈಎಸ್ಪಿ, 4 ಇನ್ಸ್‌ಪೆಕ್ಟರ್, 15 ಪಿಎಸ್‌ಐ, ಕ್ರೈಂ ಸಿಬ್ಬಂದಿ, 10 ಜನ ವಿಡಿಯೋಗ್ರಾಫರ್ ಹಾಗೂ 10 ಸಿಸಿ ಕ್ಯಾಮೆರಾಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದ ಅವರು, ಭಕ್ತರು ಯಾವುದೇ ಗೊಂದಲಗಳಿಗೆ ಒಳಗಾಗದೇ ದೇವಿಯ ದರ್ಶನ ಪಡೆಯಬೇಕು ಎಂದರು.
ಇತ್ತೀಚಿನ ವರ್ಷಗಳಲ್ಲಿ ದೇವಿಯ ದರ್ಶನಕ್ಕೆ ಅಪಾರ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿರುವುದರಿಂದ ನೂಕುನುಗ್ಗಲು ಹೆಚ್ಚಾಗಿದೆ. ಕಳೆದ ವರ್ಷ 15 ದಿನಗಳ ದರ್ಶನ ಭಾಗ್ಯ ಸಿಕ್ಕಿತ್ತು. ಆದರೆ ಈ 13 ದಿನಗಳ ಕಾಲ ಸಿಕ್ಕಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾ ಸತ್ರ ಹಾಗೂ ಸೆಷನ್ಸ್ ನ್ಯಾಯಾಧೀಶ ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ತಹಸೀಲ್ದಾರ್ ಮಂಜುನಾಥ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.