ಹಾಸನ

ಡಾ. ಅಂಬೇಡ್ಕರ್ ನಾಮಫಲಕ ವಿರೂಪ ಖಂಡಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ,  ರಾಮನಾಥಪುರ ,  ಅ. 26
ಸಮೀಪದ ರಾಗಿಮರೂರು ಗ್ರಾಮದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನು ಕಳೆದ ರಾತ್ರಿ ಕಿಡಿಗೇಡಿಗಳು ಸಗಣಿಯಿಂದ ವಿರೂಪಗೊಳಿಸಿ ಅಪಮಾನ ಮಾಡಿರುವುದನ್ನು ಇಲ್ಲಿನ ಅಂಬೇಡ್ಕರ್ ಕಾಲೋನಿ ಜನತೆ ಖಂಡಿಸಿ ಶನಿವಾರ ಪ್ರತಿಭಟಿಸಿದರು.  
  ಮುಖಂಡ ಎಂ.ಎಸ್.ಕುಮಾರ್ ಮಾತನಾಡಿ, 1983-84 ಸಾಲಿನ ಜೀತ ವಿಮುಕ್ತದ ವಿಚಾರವಾಗಿ ವರದಿ ನೀಡುವಂತೆ ಕೋರಿ ಶುಕ್ರವಾರವಷ್ಟೇ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದ್ದು, ಈ ಬಿಸಿ ಇನ್ನೂ ಆರಿಲ್ಲ. ಆಗಲೇ ಇದರ ಬೆನ್ನಲ್ಲೆ ರಾತ್ರಿ ಈ ದುಷ್ಕೃತ್ಯ ಎಸಗಲಾಗಿದೆ. ಇದರಿಂದಾಗಿ ಸಮಾಜದಲ್ಲಿ ದಲಿತರಿಗೆ ಯಾವ ರೀತಿ ರಕ್ಷಣೆ ದೊರೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.  ಘಟನೆ ಬಗ್ಗೆ ವಿಳಂಬ ಮಾಡದೇ ಸರಿಯಾಗಿ ತನಿಖೆ ನಡೆಸಿ ಕೃತ್ಯ ಎಸಗಿರುವ ಅಪರಾಧಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಅಪಮಾನಗೊಳಿಸಿರುವ ಅಂಬೇಡ್ಕರ್ ನಾಮಫಲಕದ ಬಳಿ ಕೆಲ ಹೊತ್ತು ಪ್ರತಿಭಟಿಸಿದರು.
  ನಂತರ ಕೊಣನೂರು ಉಪ ಆರಕ್ಷಕ ನಿರೀಕ್ಷಕ ರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇವರಿಂದ ಮಾಹಿತಿ ಪಡೆದರು. ತನಿಖೆ ಕೈಗೊಂಡಿದ್ದು, ಹಾಗೂ ದಲಿತ ಪರ ಹೋರಾಟಗಾರ ಮತ್ತು ಬಿಎಸ್ಪಿ ತಾಲೂಕು ಅಧ್ಯಕ್ಷ ಖ್ಯಾತ ವಕೀಲ ಬಿ.ಸಿ.ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರಿಗೆ ಸಾಂತ್ವನ ಹೇಳಿ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಪೋಲೀಸ್ ಇಲಾಖೆಗೆ ಮನವಿ ಮಾಡಿದರು.  
ಗ್ರಾಪಂ ಸದಸ್ಯ ರಾಜಯ್ಯ, ನಿಂಗಯ್ಯ, ಕೇಶವ, ರವೀಶ ಕಾಳಯ್ಯ, ರಾಮಯ್ಯ, ಸೋಮಯ್ಯ, ನರಸಿಂಹಯ್ಯ, ಸಾವಿತ್ರಮ್ಮ, ಜವರಮ್ಮ, ಸುಕನ್ಯ, ನಿಂಗಮ್ಮ, ಅಣ್ಣಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.