ಹಾಸನ

ಬೆಂಕಿ ಮಹದೇವ್ ಗಾಣಿಗರ ಸಂಘದ ನೂತನ ಅಧ್ಯಕ್ಷ

Published On :

ಹೊಳೆನರಸೀಪುರ: ತಾಲೂಕು ಗಾಣಿಗರ ಸಂಘದ ಸರ್ವ ಸದಸ್ಯರ ಸಭೆಯು ಪಟ್ಟಣದ ಸಿಂಗಮ್ಮದೇವಿ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದು, ತಾಲೂಕು ನೂತನ ಅಧ್ಯಕ್ಷರಾಗಿ ಎಚ್.ಬಿ. ಮಹದೇವ್(ಬೆಂಕಿ ಮಹದೇವ್) ಸರ್ವಾನುಮತದಿಂದ ಆಯ್ಕೆಗೊಂಡರು.
 ತಾಲೂಕು ಮಟ್ಟದ ಗಾಣಿಗ ಸಮುದಾಯದ ಬಾಂಧವರ ಸಭೆಯಲ್ಲಿ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾಗಿದ್ದ ಟಿ. ಗುಂಡಶೆಟ್ಟಿ ಅವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ಹಾಗೂ ಅವರ ಕಾರ್ಯವೈಖರಿ ಕುರಿತಂತೆ, ಜನಾಂಗದ ಸಮುದಾಯ ಭವನದ ಕಾಮಗಾರಿಯು ಕಳೆದ 7 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವುದರ ಕುರಿತಂತೆ, ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಚ್.ಡಿ. ರೇವಣ್ಣ ಅವರು ನೀಡಿರುವ 4.50 ಲಕ್ಷ ಅನುದಾನದ ಬಳಕೆಯ ಕುರಿತಾದ ಮಾಹಿತಿ, ನಿಯಮಾನುಸಾರ ಅಧ್ಯಕ್ಷರಾಗಿದ್ದ ಟಿ. ಗುಂಡಶೆಟ್ಟಿ ಅವರು ತಾಲೂಕು ಸಂಘದ ಕಾರ್ಯಕಾರಿ ಸಮಿತಿಯ ಹಾಗೂ ಸರ್ವ ಸದಸ್ಯರ ಸಭೆ ಕರೆಯದೆ ಇರುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಕ್ಕನಹಳ್ಳಿ ಮೋಹನ್ ಮಾತನಾಡಿದರು. ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಚ್.ಬಿ. ಮಹದೇವ್, ಸಭೆಯಲ್ಲಿನ ಸಮಾಜದ ಎಲ್ಲಾ ಬಾಂಧವರ ಸಲಹೆ ಸಹಕಾರಗಳೊಂದಿಗೆ ಸಮಾಜದ ಉನ್ನತಿಗಾಗಿ ಶ್ರಮಿಸುವುದಾಗಿ ತಿಳಿಸಿದರು.  ಗಾಣಿಗ ಸಮುದಾಯ ಸಂಘದ ಜಿಲ್ಲಾ ಸಲಹೆಗಾರ ತಮ್ಮಣ್ಣ ಶೆಟ್ಟಿ ಇದ್ದರು. ನೂತನ ಪದಾಧಿಕಾರಿಗಳು: ಎಚ್.ಬಿ. ಮಹದೇವ್(ಬೆಂಕಿ ಮಹದೇವ್)- ಅಧ್ಯಕ್ಷರು, ವೈ.ಎಚ್. ಗೋವಿಂದಶೆಟ್ಟಿ- ಪ್ರಧಾನ ಕಾರ್ಯದರ್ಶಿ, ಶ್ರೀನಿವಾಸ್ ಹಾಗೂ ವೆಂಕಟೇಶ್- ಉಪಾಧ್ಯಕ್ಷರು, ಮಧು- ಖಜಾಂಚಿ, ಶಂಕರ್- ಸಹ ಕಾರ್ಯದರ್ಶಿ ಹಾಗೂ ಇನ್ನಿತರರು ಸಂಘದ ನಿರ್ದೇಶಕರು ಹಾಗೂ ಸಂಚಾಲಕರಾಗಿ ಆಯ್ಕೆಗೊಂಡರು. ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಜಕ್ಕನಹಳ್ಳಿ ಮೋಹನ್‌ಕುಮಾರ್ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ. ನಾಗರಾಜು, ಗೌರವಾಧ್ಯಕ್ಷ ಸೋಮಶೇಖರ್, ಜಿಲ್ಲಾ ಗಾಣಿಗ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ನಾಗರಾಜ್, ಚನ್ನರಾಯಪಟ್ಟಣದ ಶಿವಜ್ಯೋತಿ ಗಾಣಿಗರ ವಿವಿಧೋದ್ದೇಶ ಬ್ಯಾಂಕಿನ ಅಧ್ಯಕ್ಷ ಗಾರೆ ಶ್ರೀನಿವಾಸ್, ಅರಸೀಕೆರೆ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಶ್ರವಣಬೆಳಗೊಳ ಅಧ್ಯಕ್ಷ ಮಹದೇವಪ್ಪ, ಹೊಳೆನರಸೀಪುರ ತಾಲೂಕು ಸಂಘದ ಮಾಜಿ ಉಪಾಧ್ಯಕ್ಷ ರಾಜಶೆಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.