ಹಾಸನ

ಪವಿತ್ರ ಗಾಯತ್ರಿ ಶಿಲೆ ಸಮೀಪ ಮಾಟ-ಮಂತ್ರ, ಪ್ರಾಣಿ ಬಲಿ

Published On :

ಅರಕಲಗೂಡು: ದಕ್ಷಿಣದ ಕಾಶಿ, ದೇವಾಲಯಗಳ ಬೀಡು ಎಂದೆಲ್ಲಾ ಕರೆಸಿಕೊಳ್ಳುವ ಕಾವೇರಿ ನದಿಯ ಮಧ್ಯೆದಲ್ಲಿರುವ ಗಾಯತ್ರಿ ಶಿಲೆಯ ಮೇಲೆ ಮಾಂತ್ರಿಕನೊಬ್ಬ ಪ್ರಾಣಿ ಬಲಿ ಮಾಡಿ ಅಪವಿತ್ರಗೊಳಿಸಿರುವ ಪ್ರಕರಣ  ಭಾನುವಾರದ ಹಾಡಹಗಲೇ ನಡೆದಿದೆ.
ಭಾನುವಾರ ಬೆಳಿಗ್ಗೆ ಸುಮಾರು 9.30 ರ ಸುಮಾರಿಗೆ ಹಾಸನದಿಂದ ಬಂದ ಸುಮಾರು 50ಕ್ಕೂ ಹೆಚ್ಚು ಮಂದಿಯೊಂದಿಗೆ ಮಾಂತ್ರಿಕನೊಬ್ಬ ರಾಮನಾಥಪುರಕ್ಕೆ ಬಂದು ಮಾಟ ಮಂತ್ರ ಮಾಡಿದ್ದಲ್ಲದೇ ಆಡೊಂದನ್ನು ಬಲಿ ನೀಡಿದ್ದಾನೆ. ಗಾಯತ್ರಿ ಶಿಲೆಯನ್ನು ಹಿಂದೂ ಸಂಪ್ರದಾಯದಂತೆ ಪವಿತ್ರ ಶಿಲೆ ಎಂದು ಇಂದಿಗೂ ಪೂಜಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಭೃಗು ಮಹರ್ಷಿಗಳೂ ತಪಸ್ಸು ಮಾಡಿದ್ದಾರೆಂಬ ಪೌರಾಣಿಕ ಹಿನ್ನೆಲೆ ಇದ್ದು, ಅವರ ಪಾದುಕೆಗಳೂ ಇಲ್ಲಿವೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಧಾವಿಸಿ ಬಂದು ವೀಕ್ಷಿಸಿದರು. ಅಷ್ಟರಲ್ಲಿ ಆ ಮಾಂತ್ರಿಕ ಅಲ್ಲಿಂದ ಹೊರಟುಹೋಗಿದ್ದ. ಆದರೆ ಸ್ಥಳದಲ್ಲಿದ್ದ ಇತರೆ ಪ್ರವಾಸಿಗರನ್ನು ಪ್ರಶ್ನಿಸಿದಾಗ ಈ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ಹೇಳಿದರು.
ಈ ಘಟನೆಯ ನಂತರ ಗ್ರಾಮದಲ್ಲಿ ಆತಂಕ ಮನೆಮಾಡಿದ್ದು, ಕಾವೇರಿ ನದಿ ಮತ್ತು ತೀರ್ಥಕ್ಷೇತ್ರದಲ್ಲಿ ಇರುವ ಗಾಯತ್ರಿ ಶಿಲೆ, ಕಲ್ಲು ಮತ್ತು ಇತರೆ ಪವಿತ್ರ ಸ್ಥಳಗಳನ್ನು ರಕ್ಷಣೆ ಮಾಡುವ ಸಲುವಾಗಿ ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.