ಹಾಸನ

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ

Published On :

ಕ.ಪ್ರ. ವಾರ್ತೆ೤ ಸಕಲೇಶಪುರ೤ ಅ. 28
ಪ್ರಿಯಕರನೊಂದಿಗೆ ಸೇರಿ ಪತ್ನಿ ತನ್ನ ಪತಿಯನ್ನು ಹತ್ಯೆಮಾಡಿರುವ ಘಟನೆ ತಾಲೂಕಿನ ಕಾಕನಮನೆ ಗ್ರಾಮದಲ್ಲಿ ಸೋಮವಾರ ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಸೆಲ್ವದೊರೈ (45) ಮೃತದೇಹ ಸಮೀಪದ ಮೋಹನ್ ಎಂಬುವರ ಕಾಫಿ ತೋಟದಲ್ಲಿ ದೊರೆತಿದೆ.
ಘಟನೆ ಹಿನ್ನೆಲೆ: ತಮಿಳುನಾಡು ಮೂಲದ ಸೆಲ್ವದೊರೈ ಕಳೆದ 15 ವರ್ಷಗಳಿಂದ ಕಾಕನಮನೆ ಗ್ರಾಮದಲ್ಲಿ ವಾಸವಾಗಿದ್ದು, ಇದೆ ಗ್ರಾಮದ ಅಂಬಿಕಾ ಎಂಬಾಕೆಯನ್ನು ಮದುವೆಯಾಗಿ ಎರಡು ಮಕ್ಕಳೊಂದಿಗೆ ಜೀವನ ಮಾಡುತ್ತಿದ್ದ.
ಆದರೆ ಸಂಸಾರದಲ್ಲಿ ಕಲಹ ಪ್ರಾರಂಭವಾದ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಗ್ರಾಮ ತೊರೆದಿದ್ದ ಈತ  ವಾರದ ಹಿಂದೆ ಗ್ರಾಮಕ್ಕೆ ಮರಳಿದ್ದ. ಈ ವೇಳೆ ಸೆಲ್ವದೊರೈ ಪತ್ನಿಯ ಅನೈತಿಕ ಸಂಬಂಧ ಬಯಲಾಗಿ ಪತ್ನಿಯೊಂದಿಗೆ ಜಗಳವಾಡಿದ್ದ.
ಈ ವಿಚಾರವನ್ನು ಅಂಬಿಕಾ ತನ್ನ ಪ್ರಿಯಕರ ಮೋಹನ್ಗೆ ತಿಳಿಸಿದ್ದು, ದೊರೈನನ್ನು ಕೊಲೆ ಮಾಡುವ ಪೂರ್ವಭಾವಿಯಾಗಿ ಸೆಲ್ವದೊರೈಗೆ ಗಣೇಶ್ ಎಂಬಾತ ಚೆನ್ನಾಗಿ ಮದ್ಯ ಕುಡಿಸಿ ಕಾಫಿ ತೋಟಕ್ಕೆ ಕರೆದೊಯ್ದ ಸಂದರ್ಭದಲ್ಲಿ ಮೋಹನ್ ಹಾಗೂ ಚಂದ್ರ ಎಂಬವರು ಕಾದು ಕುಳಿತು, ದೊರೈನನ್ನು ಮಚ್ಚಿನಿಂದ ಕೊಚ್ಚಿ ಗುಂಡಿಯಲ್ಲಿ ಹೂತ್ತಿಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಪತ್ನಿ ಅಂಬಿಕಾ, ಪ್ರಿಯಕರ ಮೋಹನ್ ಆತನ ಗೆಳೆಯರಾದ ಚಂದ್ರ ಗಣೇಶ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿಭಟನೆ: ಕೊಲೆಯಾಗಿರುವ ವಿಚಾರ ಭಾನುವಾರವೇ ಹೊರ ಬಂದಿದ್ದರೂ ಶವಪರೀಕ್ಷೆ ನಡೆಸಲು ಬರಬೇಕಿದ್ದ ಉಪವಿಭಾಗಾಧಿಕಾರಿ ಬಾರದ ಕಾರಣ ಸೋಮವಾರಕ್ಕೆ ಶವಪರೀಕ್ಷೆ ಮುಂದೂಡಲಾಗಿತ್ತು.
ಆದರೆ ಸೋಮವಾರ 11 ಗಂಟೆ ಸಮೀಪಿಸಿದರೂ ಯಾವ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಬಾಗೆ ಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ 48 ಬಂದ್ ಮಾಡಿ ಟೈರುಗಳನ್ನು ಸುಡುವ ಮೂಲಕ ಪ್ರತಿಭಟಿಸಿದರು.  
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ಶವಪರೀಕ್ಷೆ ನಡೆಸಲಾಗುವುದು ಎಂಬ ಹೇಳಿಕೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಉಪ
ವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಪಾರ್ವತಿಯವರ ಸಮ್ಮುಖದಲ್ಲಿ ಹೂತಿದ್ದ ಮೃತದೇಹ ತೆಗೆದು ಶವಪರೀಕ್ಷೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.