ಹಾಸನ

ರಾಮೇಗೌಡ ಆಟೋಮಾಲೀಕರ ಸಂಘದ ನೂತನ ಅಧ್ಯಕ್ಷ

Published On :

ಬೇಲೂರು: ಹೊಯ್ಸಳ ಆಟೋ ಮಾಲಿಕರ ಹಾಗೂ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ರಾಮೇಗೌಡ (ಲೋಕೇಶ್) ಅತಿ ಹೆಚ್ಚು ಮತಗಳಿಂದ ಆಯ್ಕೆಯಾದರು. ಹೊಯ್ಸಳ ಆಟೋ ಮಾಲಿಕರ ಹಾಗೂ ಚಾಲಕರ ಸಂಘದ ನೂತನ  ಅಧ್ಯಕ್ಷರ ಆಯ್ಕೆ ಸಾಕಷ್ಟು ಗೊಂದಲದಿಂದ ಕೂಡಿ ನಂತರ ಪೊಲೀಸರ ಹಾಗೂ ಆಟೋ ಚಾಲಕರ ಮಧ್ಯಸ್ಥಿಕೆಯಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಹೊಯ್ಸಳ ಆಟೋ ಮಾಲಿಕರ ಮತ್ತು ಚಾಲಕರ ಸಂಘಕ್ಕೆ  ಕಳೆದ ಮೂರು ತಿಂಗಳ ಹಿಂದೆ  ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅಧ್ಯಕ್ಷ ಮಂಜುನಾಥ್ ವರ್ತನೆ ಸರಿಯಿರಲಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ತಂದು ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
 ಅಧ್ಯಕ್ಷ ಮಂಜುನಾಥ್ ರಾಜಿನಾಮೆ  ನೀಡುವುದಿಲ್ಲ ಎಂದು ತಿಳಿಸಿದ ಕಾರಣಕ್ಕೆ, ಆಟೋ ಸಂಘದ ಸುಮಾರು 300 ಕ್ಕೂ  ಹೆಚ್ಚು ಚಾಲಕರು ಮತ್ತು ಮಾಲೀಕರು ಪಟ್ಟಣದ ಜೂನಿಯರ್ ಕಾಲೇಜು ಅವರಣದಲ್ಲಿ ಜಮಾಯಿಸಿ ಅಧ್ಯಕ್ಷ ಮಂಜುನಾಥರನ್ನು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
 ಸಂಘದವರ  ಒತ್ತಾಯಕ್ಕೆ ಮಣಿಯದ ಮಂಜುನಾಥ್ ವಿರುದ್ಧ ಪೊಲೀಸರಿಗೆ ದೂರು ನೀಡಿದರು, ಸ್ಥಳಕ್ಕೆ  ಧಾವಿಸಿದ ಪಿಎಸ್ಐ ಅಶ್ವಿನ್ ಕುಮಾರ್ ಅವರು ಮಂಜುನಾಥರನ್ನು ಕರೆಸಿ ನಂತರ ತಾನು ರಾಜಿನಾಮೆ ನೀಡಿ ಮತ್ತೆ ಸ್ಪರ್ಧೆಗೆ ನಿಲ್ಲುತ್ತೇನೆ ಎಂಬ ಷರತ್ತಿನಿಂದ ಮಂಜುನಾಥ್  ರಾಜಿನಾಮೆ  ನೀಡಿದರು.
ನಂತರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ತೀರ್ಮಾನಿಸಿದಾಗ  ರಾಮೇಗೌಡ (ಲೊಕೇಶ್) ಹಾಗೂ ಮಾಜಿ ಅಧ್ಯಕ್ಷ ಮಂಜುನಾಥ್ ಕಣದಲ್ಲಿ ಉಳಿದರು. ಚುನಾವಣೆಯಲ್ಲಿ ಒಟ್ಟು 199 ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ  175 ಮತಗಳೊಂದಿಗೆ ರಾಮೇಗೌಡ (ಲೋಕೇಶ್) ಅಧ್ಯಕ್ಷರಾಗಿ ಆಯ್ಕೆ ಗೊಂಡರು.
  ನೂತನ ಅಧ್ಯಕ್ಷ ಲೋಕೇಶ್ ಸಾರ್ವಜನಿಕರೊಂದಿಗೆ ಪ್ರೀತಿ ವಿಶ್ವಾಸದಿಂದ ಸಹಕರಿಸಿ ಎಂದು ತಿಳಿಸಿದರು.ಪಿಎಸ್ಐ ಅಶ್ವಿನ್ಕುಮಾರ್, ಎ.ಎಸ್.ಐ. ಚಂದ್ರಪ್ಪ ಮಾಲೀಕ ಚಂದ್ರು, ಕೇಶವಮೂರ್ತಿ, ಶ್ರೀನಿವಾಸ್ ಕೋಟೆ, ಚಂದ್ರಶೇಖರ್,  ಪುನೀತ್ ಹಾಗೂ ಆಟೋ ಚಾಲಕರು, ಮಾಲೀಕರು ಈ ಸಂದರ್ಭದಲ್ಲಿ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.