ಸಾಂಬಾರ ಪದಾರ್ಥ ಬಳಕೆಯಿಂದ ಆರೋಗ್ಯ ಸುಧಾರಣೆ
ಹೊಳೆನರಸೀಪುರ: ಮನೆಯಲ್ಲಿಯೇ ಇರುವ ಸಾಂಬಾರ ಪದಾರ್ಥಗಳಿಂದ ನಮ್ಮಗಳ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದು ಇಲ್ಲಿನ ಆರ್ಯುವೇದಿಕ್ ಆಸ್ಪತ್ರೆಯ ವೈದ್ಯೆ ಡಾ. ಎ.ಎಸ್.ಪುಷ್ಪಲತ ತಿಳಿಸಿದರು. ಪಟ್ಟಣದ ಕೊರಮರ ಸಮುದಾಯ ಭವನದಲ್ಲಿ ತಾಲೂಕು ಕೊರಮರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಮನೆಮದ್ದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದೊರಕುವ ಸಾಂಬಾರ ಪದಾರ್ಥಗಳಾದ ಶುಂಠಿ, ಬೆಳ್ಳುಳ್ಳಿ, ಮೆಂತ್ಯೆ, ಜೀರಿಗೆ, ದಾಲ್ಚಿನ್ನಿ, ಲವಂಗವ, ಎಳ್ಳು ,ಕಾಳುಮೆಣಸು, ಅರಿಶಿನ, ಒಣದ್ರಾಕ್ಷಿ ಮುಂತಾದ ಪದಾರ್ಥಗಳಿಂದ ತಯಾರಿಸಿದ ಲೇಹ್ಯ, ಕಶಾಯಗಳು ಮನುಷ್ಯನಲ್ಲಿನ ಹಲವು ಕಾಯಿಲೆಗಳಿಗೆ ಮದ್ದಾಗಲಿದೆ. ಇದರಿಂದ ಯಾವುದೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿ, ಇವುಗಳನ್ನು ಉಪಯೋಗಿಸುವ ವಿಧಾನಗಳನ್ನು ತಿಳಿಸಿಕೊಟ್ಟರು.
ನಿವೇಶನ ಹಂಚಿಕೆ: ಹಾಜರಿಗೆ ಸೂಚನೆ
ಹಾಸನ: ತಾಲೂಕಿನ ಸತ್ಯವಂಗಲ ಗ್ರಾಮದ ಸರ್ವೇ ನಂ.244(ಹೊಸ ಸರ್ವೇ ನಂ.254)ರಲ್ಲಿ 4-20 ಎಕರೆ ಪ್ರದೇಶವನ್ನು ಈ ಕಾರ್ಯಾಲಯದ ಆದೇಶದನ್ವಯ ಪರಿಶಿಷ್ಟ ಜಾತಿ, ಪಂಗಡದ ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲು ಕಾಯ್ದಿರಿಸಿದ್ದು ಆಯ್ಕೆಯಾಗಿರುವ 148 ಫಲಾನುಭವಿಗಳು ಅಗತ್ಯ ದಾಖಲಾತಿಗಳೊಂದಿಗೆ ಅ.30 ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಹಾಜರಾಗುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ರಸ್ತೆಗೆ ಕರೀಂಖಾನ್ ಹೆಸರು: ಸಂತಸ
ಹಾಸನ: ಜಾನಪದ ಜಂಗಮ ಸಾಹಿತಿ ಎಸ್.ಕೆ. ಕರೀಂಖಾನ್ರ ಹೆಸರನ್ನು ಬೆಂಗಳೂರಿನ ರಸ್ತೆಗೆ ಇಡಲು ನಿರ್ಣಯ ಕೈಗೊಂಡಿರುವುದಕ್ಕೆ ಜಯಕರ್ನಾಟಕ ಸಂಘಟನೆಯ ಚೌಡುವಳ್ಳಿ ಜಗದೀಶ್ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಚಿನ್ನದ ಕಿರೀಟದಂತೆ ಕಂಗೊಳಿಸುವ ಕರೀಂಖಾನ್ರ ಹೆಸರನ್ನು ನೂರು ಅಡಿ ರಸ್ತೆಗೆ ನಾಮಕರಣ ಮಾಡಲು ಬೆಂಗಳೂರಿನ ಬಿಬಿಎಂಪಿಯಲ್ಲಿ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. ನವೆಂಬರ್ ತಿಂಗಳಲ್ಲಿ ಕಾರ್ಯ ರೂಪಕ್ಕೆ ತರಲು ಸರ್ವಾನುಮತದ ನಿರ್ಣಯ ಅಂಗೀಕರಿಸಿರುವುದು ಜಿಲ್ಲೆಗೆ ಸಂದ ಗೌರವ. ಅವರ ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಲು ಅವರ ನೆನಪುಗಳ ಪುಸ್ತಕಗಳು, ಜಾನಪದ ಹಾಡುಗಳು, ಸಾಹಿತ್ಯ ಲೋಕವೇ ಒಮ್ಮೆ ತಿರುಗಿ ನೋಡುವಂತಾಗಲು ಜಿಲ್ಲಾ ಕೇಂದ್ರದಲ್ಲಿ ಕರೀಂಖಾನ್ ಮ್ಯೂಸಿಯಂ ತೆರೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕ ಬೇಕಾದ ಜವಾಬ್ದಾರಿ ಜಿಲ್ಲೆಯ ಜನತೆಯದ್ದಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

