ಮೊಬೈಲ್ ಅಭಿವೃದ್ಧಿ ಕುರಿತು ಕಾರ್ಯಾಗಾರ
ಕನ್ನಡಪ್ರಭವಾರ್ತೆ ಹಾಸನ ಅ.28
ಪ್ರಸ್ತುತ ಮೊಬೈಲ್ ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚಾಗಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ ತಿಳಿಸಿದರು.
ನಗರದ ಎಂಸಿಇ ಕಾಲೇಜು ಸಭಾಂಗಣದಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಂಡ್ರಾಯ್ಡ್ ಬಳಸಿಕೊಂಡು ಮೊಬೈಲ್ ಅಭಿವೃದ್ಧಿ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಓಡಾಡುತ್ತಿದೆ. ಮೊಬೈಲ್ನಲ್ಲಿ ಹೊಸ ಕಲ್ಪನೆಯನ್ನು ರಚಿಸಲು ಸಾಮರ್ಥ್ಯ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಕೌಶಲ್ಯ ಮತ್ತು ಹಂಚಿಕೆ ಅಭಿವೃದ್ಧಿ ಹಾಗೂ ಹೊಸ ವಿಚಾರವನ್ನು ಕಂಡುಹಿಡಿಯುವ ಹವ್ಯಾಸವನ್ನು ಜೊತೆಯಲ್ಲಿಯೇ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಎಂ.ವಿ. ಸತ್ಯನಾರಾಯಣ ಮಾತನಾಡಿ, ಮೊಬೈಲ್ನಲ್ಲಿ ಮೊದಲು ಬಂದ ತಂತ್ರಜ್ಞಾನಕ್ಕೂ ಈಗ ಬಂದಿರುವ ತಂತ್ರಜ್ಞಾನಕ್ಕೂ ಸಾಕಷ್ಟು ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ಇಂಟರ್ನೆಟ್ ಬಳಕೆ ಇಂದು ನಗರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಅದರ ಚಾಲನೆ ನಡೆಯುತ್ತಿದ್ದು, ಯುವ ಜನತೆ ಇದರ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ಕರೆ ನೀಡಿದರು.
ನಿರ್ದೇಶಕ ಆರ್. ವೆಂಕಟರಾಮ್, ಆಂಡ್ರಾಯ್ಡ್ ಬಳಸಿ ಮೊಬೈಲ್ ಅಭಿವೃದ್ಧಿ ಕುರಿತು ಪ್ರವಚನ ನೀಡಿದರು. ಕಾವ್ಯ ಮತ್ತು ವೆಂಕಟ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

