ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳು ವಸತಿ ಶಾಲೆಗೆ
ಕ.ಪ್ರ.ವಾರ್ತೆ ಅರಸೀಕೆರೆ ಅ.30
ಪಟ್ಟಣದ ರೇಲ್ವೆ ನಿಲ್ದಾಣ ರಸ್ತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮೂವರು ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸುವಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮಣ್ ಎಂ. ಬಳೂಟಗಿ ಯಶಸ್ವಿಯಾದರು.
ಶಿಕ್ಷಣದ ಮುಖ್ಯವಾಹಿನಿಗೆ ಎಲ್ಲಾ ಮಕ್ಕಳನ್ನೂ ತರಬೇಕೆಂಬ ಮಹತ್ವಾಕಾಂಕ್ಷೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊಂದಿದ್ದು ಈ ಸಂಬಂಧ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅದರೂ ಭಿಕ್ಷಾಟನೆ ಯಲ್ಲಿ ಮಕ್ಕಳನ್ನೂ ತೊಡಗಿಸುವುದು ಸಾಮಾನ್ಯವಾಗಿದೆ.
ಮಂಗಳವಾರ ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿ ಮೂವರು ಬಾಲಕರು ಭಿಕ್ಷಾಟನೆಯಲ್ಲಿ ತೊಡಗಿರುವುದನ್ನು ಪತ್ರಕರ್ತ ಎಚ್.ಡಿ.ಸೀತಾರಾಂ ಗಮನಿಸಿ, ಮಕ್ಕಳನ್ನು ಅಲ್ಲಿಯೇ ತಡೆದು ಕೂಡಲೆ ಬಿಆರ್ಸಿ ಬಳೂಟಗಿಯವರ ಗಮನಕ್ಕೆ ತಂದರು. ಬಿಆರ್ಸಿ ಸತೀಶ್ರೊಂದಿಗೆ ಬಂದ ಅಧಿಕಾರಿ ತಮ್ಮೊಂದಿಗೆ ಮಕ್ಕಳನ್ನು ಕರೆದೊಯ್ದು ಸಿದ್ದರಹಟ್ಟಿಯಲ್ಲಿ ಇಲಾಖೆಯಿಂದ ನಡೆಸಲಾಗುತ್ತಿರುವ ಚಿಣ್ಣರ ಅಂಗಳ ವಸತಿ ಶಾಲೆಗೆ ಸಿಆರ್ಪಿ ಬಸವರಾಜ್ ಮೂಲಕ ದಾಖಲಿಸಿದರು.
ಸಿದ್ದರ ಸಮುದಾಯಕ್ಕೆ ಸೇರಿರುವ ಈ ಮಕ್ಕಳು ಶಾಲೆಯ ರಜೆ ಕಾಲದಲ್ಲಿ ಭಿಕ್ಷಾಟನೆ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ರಜೆಯ ಸಮಯದಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ವಾತಾವರಣದಲ್ಲಿ ಮಕ್ಕಳು ಇರುವಂತೆ ನೋಡಿಕೊಳ್ಳಬೇಕೆಂದು ಲಕ್ಷ್ಮಣ್ ಬಳೂಟಗಿ ಪೋಷಕರಿಗೆ ಕಿವಿಮಾತು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

