ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲಿ
ಕ.ಪ್ರ.ವಾರ್ತೆ ಹಾಸನ ಅ. 30
ಟಿಪ್ಪು ಜಯಂತಿ ಮತ್ತು ಟಿಪ್ಪು ಹುತಾತ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಒತ್ತಾಯಿಸಿ ಆಜಾದ್ ಟಿಪ್ಪು ಸಂಘರ್ಷ ಸಮಿತಿ ಮತ್ತು ಕನ್ನಡ, ದಲಿತ, ರೈತಪರ ಸಂಘಟನೆಗಳ ವೇದಿಕೆ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ತಮ್ಮ ತನು, ಮನ, ಪ್ರಾಣವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಕನ್ನಡಕ್ಕಾಗಿ ಸಾಕಷ್ಟು ಶ್ರಮಿಸಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10ರಂದು ಮತ್ತು ಟಿಪ್ಪು ಹುತಾತ್ಮ ದಿನಾಚರಣೆಯನ್ನು ಮೇ 4 ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಒತ್ತಾಯಿಸಿದರು.
ಟಿಪ್ಪು ಬ್ರಿಟಿಷರ ಸರ್ವಾಧಿಕಾರದ ವಿರುದ್ಧ ಹೋರಾಡಿ ತನ್ನ ಮಕ್ಕಳು, ಸಂಸ್ಥಾನ ಮತ್ತು ತನ್ನ ಜೀವವನ್ನೇ ದೇಶಕ್ಕಾಗಿ ತ್ಯಾಗ ಮಾಡಿದ ದೇಶಪ್ರೇಮಿ. ಇಂತಹ ತ್ಯಾಗಿಯ ಮತ್ತು ರಾಷ್ಟ್ರ ಪ್ರೇಮಿಯ ಇತಿಹಾಸವನ್ನು ಜನತೆ ಮತ್ತು ಸರ್ಕಾರ ಮರೆತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಟಿಪ್ಪು ಪ್ರಗತಿಪರ, ಸಾಮಾಜಿಕ ದೂರದೃಷ್ಟಿವುಳ್ಳವನಾಗಿದ್ದು, ಈತನ ಆಳ್ವಿಕೆಯಲ್ಲಿ ದಲಿತರಿಗೆ ನ್ಯಾಯ ಸಮ್ಮತ ಹಕ್ಕುಗಳು ಮತ್ತು ಸ್ವಾವಲಂಬನೆ, ಅಸ್ಪೃಷ್ಯತೆ ನಿಷೇಧ, ಹೆಣ್ಣುಮಕ್ಕಳಿಗೆ ಶಿಕ್ಷಣ, ಆಧುನಿಕ ಕೃಷಿ, ರೇಷ್ಮೆ ಬೆಳೆ, ಹಾಗೂ ದೇಶದಲ್ಲಿ ಮೊಟ್ಟ ಮೊದಲಿಗೆ ಉಳುವವನಿಗೆ ಭೂಮಿಯನ್ನು ನೀಡಿದ ಕೀರ್ತಿ ಟಿಪ್ಪು ಸುಲ್ತಾನ್ಗೆ ಸಲ್ಲುತ್ತದೆ ಎಂದರು.
ಇಂತಹ ದೂರದೃಷ್ಟಿಯುಳ್ಳ ಟಿಪ್ಪು ಆದರ್ಶ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ವರ್ಷ ನವಂಬರ್ 10ರಂದು ಟಿಪ್ಪು ಜಯಂತಿ ಹಾಗೂ ಮೇ 4 ರಂದು ಟಿಪ್ಪು ಹುತಾತ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಆಗ್ರಹಿಸಿದರು.
ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶಿರ್ ಅಹಮದ್, ಸಮೀರ್ ಅಹಮದ್, ವೆಂಕಟೇಶ್, ಸಿಐಟಿಯು ಧರ್ಮೇಶ್, ಸಮೀರ್ ಅಹಮದ್, ಕೆಪಿಆರ್ಎಸ್ ಎಚ್.ಆರ್.ನವೀನ್ಕುಮಾರ್, ಎ.ಪಿ.ಅಹಮ್ಮದ್, ಅಬ್ದುಲ್ಸಮಿ, ಕ್ಲೀನ್ ಇಂಡಿಯಾ ಚಳವಳಿ ಅಧ್ಯಕ್ಷ ರಫೀಕ್ ದರ್ಬಾರ್, ಅರವಿಂದ್ ಇತರರು ಇದ್ದರು.
ಬೇಡಿಕೆಗಳು:
ಟಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರತಿ ವರ್ಷ ನ. 10 ಟಿಪ್ಪು ಜಯಂತಿ ಹಾಗೂ ಮೇ. 10 ರಂದು ಹುತಾತ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು
ಟಿ ನಾಣ್ಯ ಮತ್ತು ಅಂಚೆ ಚೀಟಿಯಲ್ಲಿ ಟಿಪ್ಪು ಭಾವಚಿತ್ರ ಅನಾವರಣ ಮಾಡಬೇಕು
ಟಿ ರಕ್ಷಣಾ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಹಾಗೂ ಈ ನೆಲಕ್ಕಾಗಿ ತಮ್ಮ ಅಪ್ರತಿಮ ಸೇವೆ ಸಲ್ಲಿಸಿದವರನ್ನು ಟಿಪ್ಪು ಹೆಸರಿನಲ್ಲಿ ಸನ್ಮಾನಿಸಬೇಕು
ಟಿ ನಗರಗಳಲ್ಲಿ ಕನಿಷ್ಟ ಒಂದು ಮುಖ್ಯ ರಸ್ತೆ ಹಾಗೂ ಯಾವುದಾದರೂ ವೃತ್ತಕ್ಕೆ ಟಿಪ್ಪು ಹೆಸರು ಇಡಬೇಕು
ಟಿ ವಿಧಾನಸೌಧ ಹಾಗೂ ಪಾರ್ಲಿಮೆಂಟ್ ಆವರಣದಲ್ಲಿ ಟಿಪ್ಪು ಪುತ್ಥಳಿ ಸ್ಥಾಪಿಸಬೇಕು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

