'ನಕಲಿ ಔಷಧಿ ಅಲ್ಲ, ಎಲ್ಲವೂ ಅಸಲಿ'
ಅರಕಲಗೂಡು: ತಾಲೂಕಿನ ಕೊಣನೂರು ಗ್ರಾಮದ ಕಾವೇರಿ ಆಗ್ರೋ ಏಜೆನ್ಸೀಸ್ಗೆ ಜಿಲ್ಲಾ ಕೃಷಿ ಅಧಿಕಾರಿಗಳು ಮತ್ತು ತನಿಖಾ ತಂಡದವರು ಇತ್ತೀಚೆಗೆ ದಾಳಿ ನಡೆಸಿ ಪರಿಶೀಲಿಸಿದಾಗ ಈ ಅಂಗಡಿಯಲ್ಲಿರುವ ಯಾವುದೇ ಔಷಧಿ ನಕಲಿ ಅಲ್ಲವೆಂದೂ, ಎಲ್ಲಾ ಔಷಧಿಗಳೂ ಅಸಲಿಯಾಗಿವೆ ಎಂದೂ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಎಂಪಿಎಂಸಿ ಅಧ್ಯಕ್ಷ ಎಚ್.ಎಸ್. ಶಂಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ್ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಿಗಳಿಗೆ ಸುಳ್ಳು ಸುದ್ದಿ ನೀಡಿದ್ದು, ಅಧಿಕಾರಿಗಳಿಂದ ಈ ದಾಳಿ ನಡೆಯಲು ಕಾರಣವಾಗಿತ್ತು. ಈ ವೇಳೆ ನಕಲಿ ಬಾವಿಸ್ತಾನ್ ಮಾರುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಅಧಿಕಾರಿಗಳ ತನಿಖೆಯಿಂದ ಯಾವುದೇ ನಕಲಿ ಔಷಧಿಗಳ ವಿತರಣೆ ಆಗಿಲ್ಲ ಎಂದು ಅಧಿಕಾರಿಗಳು ದೃಢೀಕರಿಸಿದ್ದಾರೆ. ಸದರಿ ಆಗ್ರೋ ಏಜೆನ್ಸಿ ಮಾಲೀಕರು ಹೆಸರಾಂತ ಬಯರ್ಕ್ರಾಫ್ಸ್ ಕಂಪೆನಿಯಲ್ಲಿ ಎಂ.ಡಿ.ಓ ಹುದ್ದೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಲ್ಲದೆ, ತಂಬಾಕು ಮಂಡಳಿಯಲ್ಲೂ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. ಈ ಔಷಧಿ ಅಂಗಡಿಯು ಸುತ್ತ ಮುತ್ತಲು ಹಳ್ಳಿಗಳ ರೈತರಿಗೆ ಅವಶ್ಯವಾಗಿದೆ ಎಂದು ಅವರು ತಿಳಿಸಿದರು.
ನರೇಂದ್ರ ಮೋದಿ ರ್ಯಾಲಿಗೆ 5 ಸಾವಿರ ಮಂದಿ
ಸಕಲೇಶಪುರ: ಮೋದಿ ರ್ಯಾಲಿಗೆ ತಾಲೂಕಿನಿಂದ 5 ಸಾವಿರ ಮಂದಿ ತೆರಳಲಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಾಂಘಿ ಹೇಳಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಮೋದಿ ರ್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.17 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ರ್ಯಾಲಿಗೆ ತೆರಳಲು ತಾಲೂಕು ಬಿಜೆಪಿ ಘಟಕಕ್ಕೆ ಐದು ನೂರು ಟಿಕೆಟ್ ಮಾತ್ರ ದೊರೆತಿವೆ. ಆದರೆ ಬೇಡಿಕೆ ಇದರ 10 ಪಟ್ಟು ಹೆಚ್ಚಿಗೆ ಇದೆ. ಹೆಚ್ಚಿನ ಟಿಕೆಟ್ಗಾಗಿ ಮನವಿ ಮಾಡಲಾಗುವುದು ಎಂದರು. ಪ್ರಧಾನಕಾರ್ಯದರ್ಶಿ ಸಂದೇಶ್ ಹೆಬ್ಬನಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕೃಷ್ಣೇಗೌಡ, ನಗರ ಘಟಕ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ವಕ್ತಾರ ಚೇತನ್ ಹರಗರಹಳ್ಳಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

