ಹಾಸನ

ಬೈಲುಕುಪ್ಪೆಗೆ ಅಧ್ಯಯನ ತಂಡ ಭೇಟಿ

Published On :

ಹೊಳೆನರಸೀಪುರ: ಕೊಡಗು ಜಿಲ್ಲೆ ಕುಶಾಲನಗರ ಬಳಿಯಿರುವ ಟಿಬೆಟ್ ಕ್ಯಾಂಪ್ ಬೈಲುಕೊಪ್ಪಗೆ ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ವಿದ್ಯಾರ್ಥಿಗಳು ಭೇಟಿ ನೀಡಿ ಟಿಬೇಟಿಯನ್ನರ ಜೀವನ ಶೈಲಿ ಪರಿಚಯಿಸಿ ಕೊಂಡರು.
1962ರಲ್ಲಿ ಚೀನಾ ಟಿಬೇಟ್ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ನೂರಾರು ನಿರಾಶ್ರಿತ ಟಿಬೆಟಿಯನ್ನರು ಆಶ್ರಯ ಕೋರಿ ಭಾರತಕ್ಕೆ ಬಂದರು. ಆಗ ಅಂದಿನ ದಿ. ಪ್ರಧಾನಿ ನೆಹರೂ ನಿರಾಶ್ರಿತ ಟಿಬೇಟಿಯನ್ನರಿಗೆ ಕುಶಾಲನಗರದ ಬೈಲುಕೊಪ್ಪದ ಬಳಿ ಸ್ಥಳಾವಕಾಶ ನೀಡಿದರು.
ಸತತ ಪರಿಶ್ರಮದಿಂದ ಈ ಸ್ಥಳವನ್ನು ಒಂದು ಸಣ್ಣ ಟಿಬೆಟ್ನಂತೆಯೇ ರೂಪಿಸುವಲ್ಲಿ ಕಷ್ಟ ಸಹಿಷ್ಣುಗಳಾದ ಟಿಬೇಟಿಯನ್ನರು ಪರಿವರ್ತಿಸುವಲ್ಲಿ ಯಶಸ್ವಿಯಾದರು. ಅದರ ಶ್ರಮದ ಪ್ರತಿಫಲವೇ ಇಂದಿನ ಬೈಲುಕೊಪ್ಪ.
ಬೌದ್ಧ ದೇವಾಲಯಗಳು, ಟಿಬೆಟಿಯನ್ನರ ಬೌದ್ಧ ಧರ್ಮದ ಉನ್ನತ ವ್ಯಾಸಂಗ, ಗುಡಿ ಕೈಗಾರಿಕೆಗಳು, ಟಿಬೇಟ್ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಯೊಂದಿಗೆ ವಿಲೀನಗೊಳಿಸುವ ಸಾಂಪ್ರದಾಯಿಕ ಕಟ್ಟಡಗಳು, ಅಂಗಡಿ ಮುಗ್ಗಟ್ಟುಗಳು, ಆಸ್ಪತ್ರೆ, ಗೋದಿ ಪರಿಷ್ಕರಣಾ ಗಿರಣಿಗಳು, ಟಿಬೇಟಿಯನ್ ಆಹಾರವನ್ನು ಒಳಗೊಂಡಿರುವ ಹೋಟೆಲ್ಗಳು, ಬೌದ್ಧ ವಿಹಾರಗಳು ನೋಡುಗರ ಕಣ್ಣಿಗೆ ಕರ್ನಾಟಕದಲ್ಲೊಂದು ಟಿಬೇಟ್ಲೋಕದ ಸ್ಟೃಷ್ಟಿಯನ್ನು ಖಚಿತಗೊಳಿಸುತ್ತದೆ.
ಟಿಬೆಟಿಯನ್ನರು ಬುಧ್ಧನ ಬೋಧನೆಗಳಿಗೆ ಅನುಗುಣವಾಗಿ ತಮ್ಮ ಜೀವನದ ರೂಪುರೇಷೆಗಳನ್ನು ವ್ಯವಸ್ಥೆಗೊಳಿಸಿರುವವರು. ಜ್ಞಾನ, ಕರ್ಮಮಾರ್ಗಗಳೆರಡನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡವರು. ಎಲ್ಲಕ್ಕಿಂತ ಮಿಗಿಲಾಗಿ ಈ ಭವ್ಯ ಭಾರತ ದೇಶದ ಅತಿಥಿಗಳು. ಟಿಬೆಯನ್ನರಿಗೆ ಸ್ವಂತ ಭಾಷೆ ಲಿಪಿ ಇರಬಹುದು.  ಭಾರತೀಯ ಸಂಸ್ಕೃತಿಯನ್ನು ತಮ್ಮ ಸಂಸ್ಕೃತಿಯೆಂದು ತಿಳಿದು ಆರಾಧಿಸುವವರು. ಇಲ್ಲಿಯ ನೆಲ ಜಲ ಪ್ರಕೃತಿಯಲ್ಲಿ ಬುದ್ಧನ ಪ್ರತಿರೂಪವನ್ನೇ ಕಾಣುತ್ತಿದ್ದಾರೆ ಎಂದು ಪರಂಪರಾ ಕೂಟದ ಸಂಚಾಲಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ ಬಿ ಇರ್ಷಾದ್ ವಿದ್ಯಾರ್ಥಿಗಳಿಗೆ ವಿವರಿಸಿದರು.
ಸರಾಜೆ ವಿಶ್ವವಿದ್ಯಾನಿಲಯದ ಅಧ್ಯಾಪಕ ಚಾಂಗ್ಚುಂಗ್ ಅವರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಸಂವಾದ ನಡೆಸಿದ ಪ್ರೊ. ಇರ್ಷಾದ್ ಟಿಬೇಟಿಯನ್ನರ ಬದುಕಿನೊಡನೆ ಆಧ್ಯಾತ್ಮವನ್ನು ಸಮೀಕರಿಸುವ ಹಲವು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಣಾವತ್, ಕೃಷ್ಣ ನಾಯಕ್, ಎಂಕಾಂ, ಬಿಎ, ಬಿಬಿಎಂ ಬಿಕಾಂ ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.