ಹಾಸನ

ಸೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಅರಸೀಕೆರೆ   ಅ.31
ರೈತರು ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲದ ಕಾರಣ ಮೀಟರ್ಗಳನ್ನು ಕಿತ್ತು ತಂದಿದ್ದ ಸೆಸ್ಕಾಂ ಅಧಿಕಾರಿಗಳ ವರ್ತನೆ ಖಂಡಿಸಿ ತಾಲೂಕಿನ ಹಾರನಹಳ್ಳಿ ಸೆಸ್ಕಾಂ ಕಚೇರಿ ಮುಂದೆ ಗುರುವಾರ ರೈತ ಸಂಘದ ನೂರಾರು ಕಾರ್ಯಕರ್ತರು ಹೋರಾಟ ನಡೆಸಿ ಪರಿಣಾಮ ಸೆಸ್ಕಾಂ ಅಧಿಕಾರಿಗಳು ಪುನಃ ಮನೆಗಳಿಗೆ ಮೀಟರ್ ಅಳವಡಿಸಿದ ಪ್ರಸಂಗ ನಡೆದಿದೆ.
ತಾಲೂಕಿನ ಜಾವಗಲ್ ಹೋಬಳಿಯ ಮಾದಪುರ ಮತ್ತು ವಡೇರಹಳ್ಳಿ ಗ್ರಾಮದಲ್ಲಿನ ರೈತ ಸಂಘದ ಕೆಲವು ಕಾರ್ಯಕರ್ತರು ಬೆಂಗಳೂರಿನಲ್ಲಿ ನಡೆದ ರೈತ ಸಂಘದ ಕಾರ್ಯಕ್ರಮಕ್ಕೆ ಹೋಗುವ ಹಿನ್ನೆಲೆಯಲ್ಲಿ ತಮ್ಮ ಮನೆಗಳ ವಿದ್ಯುತ್ ಸಂಪರ್ಕದ ಬಿಲ್ಗಳನ್ನು ಪಾವತಿಸದೆ ಇದ್ದ ಕಾರಣವನ್ನೇ ನೆಪ ಮಾಡಿಕೊಂಡಿದ್ದಾರೆ.
ಸೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ವೈರ್ಮನ್ಗಳು ಎರಡು ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದ ವೇಳೆಯಲ್ಲಿ ಏಕಾಏಕಿ ಮನೆಯನ್ನು ಪ್ರವೇಶಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೀಟರ್ಗಳನ್ನು ಕಿತ್ತು ತಂದಿದ್ದಾರೆ ಎಂದು ಆರೋಪಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ನೇತೃತ್ವದಲ್ಲಿ ನೂರಾರು ರೈತರು ಮತ್ತು ಗ್ರಾಮಸ್ಥರು ಗುಂಪು ಸೇರಿ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿನ ಸೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರವಾದ ಕಾರಣ ಎಚ್ಚೆತ್ತ ಸೆಸ್ಕಾಂ ಅಧಿಕಾರಿಗಳು ಕಿತ್ತು ತಂದಿರುವ ವಿದ್ಯುತ್ ಮೀಟರ್ಗಳನ್ನು ಪುನಃ ಅಳವಡಿಸಲು ಭರವಸೆ ನೀಡಿ ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ಪ್ರತಿಭಟನಕಾರರು ತಮ್ಮ ಹೋರಾಟವನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಬೊರನಕೊಪ್ಪಲು ಶಿವಮೂರ್ತಿ, ಜವೇನಹಳ್ಳಿ ನಿಂಗಪ್ಪ, ಮಲ್ಲಿಕಾರ್ಜುನ, ಗೀಜಿಹಳ್ಳಿ ರವೀಶ್ ಬಾಬು, ಪ್ರಸಾದ್, ಕರಗುಂದ ಶಿವಲಿಂಗಪ್ಪ, ವಡೇರಹಳ್ಳಿ ಮತ್ತು ಮಾದಪುರ ಗ್ರಾಮಸ್ಥರು ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.