ಹಾಸನ

ಅಂಗಡಿ ತೆರವು ಖಂಡಿಸಿ ವರ್ತಕರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಬೇಲೂರು   ಅ.31
ಪುರಸಭೆಯವರು ನಡೆಸುತ್ತಿರುವ ದೌರ್ಜನ್ಯ  ಖಂಡಿಸಿ  ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೀದಿಗಿಳಿದು ಪ್ರತಿಭಟನೆ ಹಾಗೂ ರಸ್ತೆತಡೆ ನಡೆಸಿದ ಘಟನೆ ಪಟ್ಟಣದಲ್ಲಿ  ಗುರುವಾರ ನಡೆದಿದೆ.
ಪಟ್ಟಣದ  ಪ್ರಮುಖ ರಸ್ತೆಯಲ್ಲಿ ಇರುವ  ಅಂಗಡಿ ಮುಂಗಟ್ಟುಗಳನ್ನು  ಬಂದ್ ಮಾಡಿ  ಸ್ವಯಂಪ್ರೇರಿತರಾಗಿ  ರಸ್ತೆಗಿಳಿದ  ವರ್ತಕರು  ಪುರಸಭೆಯ ವಿರುದ್ಧ ಘೋಷಣೆ ಕೂಗಿದರು.
ಈ ಬಗ್ಗೆ  ವರ್ತಕರು ಮಾತನಾಡಿ,  ಪಟ್ಟಣದ  ಪುರಸಭೆಯವರು ಕಳೆದ ವಾರ ಫುಟ್ಪಾತ್ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸುವ ಸಂದರ್ಭದಲ್ಲಿ ಅಂಗಡಿಗೆ ಮೇಲ್ಭಾವಣಿಯ ಜಂಕ್ಶೀಟ್ಗಳನ್ನು ತೆರವುಗೊಳಿಸಿದ್ದರು. ಕೆಲವೆಡೆ ಮನಬಂದಂತೆ ಕಿತ್ತು ಹಾಕಿ  ಉಪಯೋಗಕ್ಕೆ ಬಾರದಂತೆ ಒಡೆದು ಹಾಕಿದ್ದರು. 2 ದಿನಗಳ ಹಿಂದೆ ಅಂಗಡಿಯ ಉಪ್ಪಿನಮೂಟೆ, ಮೆಣಸಿನ ಚೀಲವನ್ನು ಅಂಗಡಿ ಮುಂಭಾಗ ಇರಬಾರದು, ಅಂಗಡಿ ಒಳಗೆ  ಇರಬೇಕು. ಬ್ಯಾಗ್ ಹಾಗೂ ಇತೆರ ವಸ್ತುಗಳನ್ನು  ನೇತು ಹಾಕಬಾರದು ಎಂದು ಹೇಳಿ, ಎಲ್ಲವನ್ನು ಕಿತ್ತು ಹಾಕಲಾಗಿದೆ ಎಂದು ದೂರಿದರು.
ನಾವು ಚೀಲವನ್ನು ಎಲ್ಲಿ ಇಟ್ಟುಕೊಳ್ಳಬೇಕು ಎಂದು ಪರಿಪರಿಯಾಗಿ ಪುರಸಭೆಯವರಿಗೆ  ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪುರಸಭೆಯವರು  ಎಸಿ ಆದೇಶ ತಮಗೆ ಬಂದಿದೆ ಎಂದು ತೆರವು ಮಾಡಲಾಗುತ್ತಿದೆ ಎಂದು  ಉಡಾಫೆ ಉತ್ತರ ನೀಡುತ್ತಾರೆ ಎಂದು  ಹೇಳಿದ್ದಾರೆ.
ನಂತರ  ಪುರಸಭೆಯ ಕಚೇರಿ ಬಳಿ ತೆರಳಿದ ವರ್ತಕರು,  ತಮ್ಮ ಸಮಸ್ಯೆಗೆ  ಉತ್ತರ ನೀಡುವಂತೆ ಒತ್ತಾಯಿಸಿದರು. ಆದರೆ ಮುಖ್ಯಾಧಿಕಾರಿ ಕೆಲಸದ ನಿಮಿತ್ತ  ಬೆಂಗಳೂರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಯವರಾದರೂ ತಮ್ಮ ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿ ರಸ್ತೆತಡೆಗೆ ಮುಂದಾದರು.
ಈ ಮಧ್ಯೆ ಸಬ್ಇನ್ಸೆಪೆಕ್ಟರ್ ಅಶ್ವಿನ್ಕುಮಾರ್ ಹಾಗೂ  ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ  ಮಧ್ಯ ಪ್ರವೇಶಿಸಿ   ರಸ್ತೆತಡೆ ನಡೆಸದಂತೆ ಮನವಿ ಮಾಡಿದರು. ಕೆಲ ಕಾಲ  ರಸ್ತೆತಡೆ ನಡೆಸಿ, ನಂತರ ಪುರಸಭೆ ಕಚೇರಿ ಮುಂಭಾಗ ಎಲ್ಲ ವರ್ತಕರು ಜಮಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಯೋಜನಾಧಿಕಾರಿ ಶಶಿಕುಮಾರ್ ಮಾತನಾಡಿ, ಮುಖ್ಯಾಧಿಕಾರಿಗಳು  ಇರದ ಕಾರಣ ಅವರ ಗಮನಕ್ಕೆ  ಪ್ರತಿಭಟನೆಯನ್ನು ಈಗಾಗಲೇ ತರಲಾಗಿದೆ. 2 ದಿನಗಳ ನಂತರ ಚರ್ಚಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದ್ದು, ಪುರಸಭೆ ಸಿಬ್ಬಂದಿ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ.
ಮುಖ್ಯಾಧಿಕಾರಿ ಕ್ರಮ ಕೈಗೊಳ್ಳದಿದ್ದರೆ  ಉಗ್ರ ಪ್ರತಿಭಟನೆ ನಡೆಸುವುದಾಗಿ ವರ್ತಕರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವರ್ತಕರಾದ ವಾದಿರಾಜ್ ಧನ್ಯ, ವಿಷ್ಣುಪ್ರಸಾದ್, ತೀರ್ಥಂಕರ್ ಇನ್ನು ಎಲ್ಲ ವರ್ತಕರು   ಪಾಲ್ಗೊಂಡಿದ್ದರು.



ಪುಸ್ತಕ ಪ್ರದರ್ಶನ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ನಗರ ಕೇಂದ್ರ ಗ್ರಂಥಾಲಯದ ಪರಾಮರ್ಶನ ವಿಭಾಗದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಎಲ್.ನಾಗರಾಜು ತಿಳಿಸಿದ್ದಾರೆ.
ಸಾರಿಗೆ ಸಚಿವರ ಪ್ರವಾಸ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜಿಲ್ಲಾ ಪ್ರವಾಸ ಕಾರ್ಯಕ್ರಮದನ್ವಯ ನ.1ರಂದು ಬೆಳಗ್ಗೆ 8.30ಕ್ಕೆ ಹಾಸನಕ್ಕೆ ಆಗಮಿಸುವರು. ನಂತರ ಬೆಳಗ್ಗೆ 8.45ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿ ಪೂಜೆ, ಧ್ವಜಾರೋಹಣ ಹಾಗೂ ರಾಜ್ಯೋತ್ಸವ ಸಂದೇಶ ನೀಡುವರು. ಸಚಿವರು ಮಧ್ಯಾಹ್ನ 12ಕ್ಕೆ ಹಾಸನದಿಂದ ಹೊರಟು ಬೆಂಗಳೂರಿಗೆ ತೆರಳುವರು.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ರಾಜ್ಯ ಲೋಕೋಪಯೋಗಿ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಹಾಸನ ಜಿಲ್ಲಾ ಪ್ರವಾಸ ಕಾರ್ಯಕ್ರಮದನ್ವಯ ನ.1ರಂದು ಮಧ್ಯಾಹ್ನ 1.30ಕ್ಕೆ ರಸ್ತೆ ಮೂಲಕ ಅರಕಲಗೂಡಿಗೆ ಆಗಮಿಸುವರು. ನಂತರ ಸಾರ್ವಜನಿಕರ ಭೇಟಿ, ಕುಂದುಕೊರತೆಗಳ ವಿಚಾರಣೆ ನಡೆಸುವರು. ಮಾನ್ಯ ಸಚಿವರು ಸಂಜೆ 5 ಗಂಟೆಗೆ ಅರಕಲಗೂಡಿನಿಂದ ಹೊರಟು ಮೈಸೂರಿಗೆ ತೆರಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.