ಗ್ರಾಮೀಣರ ಆರ್ಥಿಕ ಪ್ರಗತಿಯಲ್ಲಿ ಹೈನುಗಾರಿಕೆಗೆ ವಿಶಿಷ್ಟ ಸ್ಥಾನ
ಹಾಸನ: ಹೈನುಗಾರಿಕೆ ದೇಶದ ಗ್ರಾಮೀಣ ಜನರ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಗ್ರಾಮಾಂತರ ಪ್ರದೇಶದ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರ ನೀಡುವ ಮುಖ್ಯ ಕಸುಬಾಗಿದೆ ಎಂದು ಹಾಸನದ ಅಮೂಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಹೇಳಿದರು.
ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಿಂದ ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈನುರಾಸು ನಿರ್ವಹಣೆ ಬಗ್ಗೆ ರೈತ ಮಹಿಳೆಯರಿಗೆ ಏರ್ಪಡಿಸಿದ್ದ ತರಬೇತಿ ಉದ್ಘಾಟಿಸಿ ಮಾತನಾಡುತ್ತಾ ಹೈನುಗಾರಿಕೆ ಪೌಷ್ಟಿಕ ಆಹಾರದ ಪೂರೈಕೆಯ ಜೊತೆಗೆ ಕೃಷಿಗೆ ಪೂರಕವಾಗಿ ಉತ್ತಮ ಸ್ವ ಉದ್ಯೋಗವಾಗಿದ್ದು, ವರ್ಷವಿಡೀ ನಿರಂತರ ಆದಾಯ ತರಬಲ್ಲದು ಎಂದು ಹೇಳಿದರು.
ಮಹಿಳೆಯರಲ್ಲಿ ವೃತ್ತಿ ಕೌಶಲ್ಯತೆ ಅಭಿವೃದ್ಧಿಪಡಿಸುವುದು ಮತ್ತು ಹೆಚ್ಚು ಮಹಿಳೆಯರನ್ನು ಆದಾಯ ತರುವ ಯೋಜನೆಗಳಲ್ಲಿ ತೊಡಗಿಸಿ ನಿರಂತರ ಉದ್ಯೋಗ ವ್ಯವಸ್ಥೆ ದೊರೆಯುವಂತೆ ಮಾಡುವ ಪರಿಕಲ್ಪನೆಯನ್ನು ಹೊಂದಿದ್ದು, ರೈತ ಮಳೆಯರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ತರಬೇತಿ ಆಯೋಜಿಸಿದ ಕೇಂದ್ರದ ವಿಜ್ಞಾನಿ ಡಾ.ಆರ್.ವಿನಯ್ಕುಮಾರ್ ಸ್ಥಳೀಯ ತಳಿಗಳಲ್ಲಿ ಹಾಲು ಉತ್ಪಾದನೆಯ ಸಾಮರ್ಥ್ಯ ಕಡಿಮೆ ಇದ್ದು ಹೈನುಗಾರಿಕೆ ಲಾಭದಾಯಕ ಗೊಳಿಸಲು ವೈಜ್ಞಾನಿಕವಾಗಿ ನಿರ್ವಹಿಸುವುದರ ಜೊತೆಗೆ ತಳಿಗಳ ಆಯ್ಕೆ, ಅವುಗಳ ಪೋಷಣೆ, ಸೂಕ್ತ ಮೇವು, ಪಶು ಆಹಾರ, ಆರೋಗ್ಯ ಮತ್ತು ರೋಗ ಪ್ರತಿಬಂಧಕ ಕ್ರಮಗಳನ್ನು ಅನುಸರಿಸ ಬೇಕೆಂದು ಹೇಳಿದರು.
ಮುಖ್ಯ ಅತಿಥಿ ಹಾಸನದ ಅಮೂಲ್ ವಿಶ್ರಾಂತ ವ್ಯವಸ್ಥಾಪಕ ನಿರ್ದೇಶಕ. ಬಿ.ಪಿ.ರಂಗನಾಥ್ ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಮಹಿಳಾ ಸಹಕಾರ ಸಂಘಗಳನ್ನು ರಚಿಸಿ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಹಿಳೆಯರಲ್ಲಿ ಕೂಲಿ ಕಾರ್ಮಿಕರು, ವಲಸೆ ಬಂದ ನಿರ್ಗತಿಕರು, ಸ್ತ್ರೀ ಪ್ರಧಾನ ಕುಟುಂಬಗಳು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದ ಮಹಿಳೆಯರನ್ನು ಆಯ್ದ ಗ್ರಾಮಗಳಲ್ಲಿ ಗುರುತಿಸಿ ಅವರನ್ನು ಬಡತನ ರೇಖೆಯಿಂದ ಮೇಲಕ್ಕೆ ತರುವ ಗುರುತರ ಜವಾಬ್ದಾರಿಯನ್ನು ಹಾಸನ ಹಾಲು ಒಕ್ಕೂಟ ವಹಿಸಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು ಮಾತನಾಡಿದರು.ಡಾ.ಓ. ಆರ್.ನಟರಾಜು ಸ್ವಾಗತಿಸಿದರು. ಡಾ.ಎ.ಸಿ. ಗಿರೀಶ್. ಡಾ.ಎನ್.ಎಲ್. ಸುಂದರೇಶ್, ನಂಜೇಗೌಡ, ಎ.ಆರ್. ಸೌಜನ್ಯ, ರೂಪೇಶ್ಕುಮಾರ್, ಡಾ. ಚೆನ್ನಕೇಶವ, ಡಾ. ರೆಡ್ಡಿ ಮತ್ತು ಡಾ.ಟಿ.ಎಸ್. ಮಂಜುನಾಥ ಸ್ವಾಮಿ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

