ಹಾಸನ

ರಾಸುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಲು ಮನವಿ

Published On :

ಹಾಸನ: ರೈತರು ತಮ್ಮ ರಾಸುಗಳಿಗೆ ಕಾಲಕಾಲಕ್ಕೆ ಕಾಲು-ಬಾಯಿ ಕಾಯಿಲೆಯ ವಿರುದ್ಧ ಲಸಿಕೆ ಹಾಕಿ ಸುವ ಮೂಲಕ ಆರ್ಥಿಕ ನಷ್ಟವನ್ನು ತಡೆಗಟ್ಟಬಹುದು ಎಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್.ನರಸಿಂಹಮೂರ್ತಿ ತಿಳಿಸಿದರು.
 ಪಶು ವೈದ್ಯಕೀಯ ಮಹಾವಿದ್ಯಾಲಯ, ಪಶುಪಾಲನಾ ಇಲಾಖೆ ಹಾಗೂ ರಾಷ್ಟ್ರೀಯ ಕೆಮಿಕಲ್ಸ್ ಆಶ್ರಯದಲ್ಲಿ  ದೊಡ್ಡಕೊಂಡಗೊಳ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಉಚಿತ ಪಶು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಕರುಗಳಿಗೆ ಜಂತುನಾಶಕವನ್ನೂ ಕ್ರಮಬದ್ಧವಾಗಿ ಕುಡಿಸಬೇಕು. ಇದರಿಂದ ಅವುಗಳ ಮೈಕಟ್ಟುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದೆಂದು ನುಡಿದರು.
  ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್ ಮಾತನಾಡಿ, ಕಾಲು-ಬಾಯಿ ರೋಗ ರೈತರಲ್ಲಿ ಆರ್ಥಿಕ ನಷ್ಟವನ್ನು ಉಂಟು ಮಾಡುವ ರೋಗ. ದನಗಳ ಸಾವು ಕಡಿಮೆ ಇದ್ದರೂ ಹೈನು ರಾಸುಗಳ ಹಾಲಿನ ಉತ್ಪಾದನೆ ಮತ್ತು ಸಂತಾನೋತ್ಪತ್ತಿ ಗಣನೀಯವಾಗಿ ತಗ್ಗುವುದು. ಆದ್ದರಿಂದ ರೈತರು ತಪ್ಪದೆ ವರ್ಷಕ್ಕೆ ಎರಡು ಬಾರಿ ಕಾಲ-ಬಾಯಿ ರೋಗದ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲೇ ಬೇಕೆಂದು ಆಗ್ರಹಿಸಿದರು.
 ರಾಷ್ಟ್ರೀಯ ಕೆಮಿಕಲ್ಸ್ ಅಧಿಕಾರಿ ಲಾಲೇಶನಾಯಕ್, ವಿನೋದ್, ಪ್ರವೀಣ್, ರಮೇಶ್, ಮುಖಂಡ ಅಣ್ಣಪ್ಪ, ತಮ್ಮಣ್ಣಗೌಡ, ರಂಗಸ್ವಾಮಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಪಶುಗಳ ಆರೋಗ್ಯ ತಪಾಸಣೆ, ಜಂತುನಾಶಕ ನೀಡುವಿಕೆ, ಖನಿಜ ಮಿಶ್ರಣ ಪುಡಿ ವಿತರಣೆ, ಶಸ್ತ್ರಚಿಕಿತ್ಸೆ ಹಮ್ಮಿಕೊಳ್ಳಲಾಗಿತ್ತು. ಸುಮಾರು 200 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು.
 ಪಶು ವೈದ್ಯಕೀಯ ಕಾಲೇಜಿನ ತಜ್ಞ ಡಾ.ಸಹದೇವ, ಡಾ. ಎಂ. ಶಿವಕುಮಾರ, ಡಾ.ಎಲ್.ಸುರೇಶ, ಡಾ. ರೇಣುಕಾರಾಧ್ಯ, ಡಾ.ಅನಿಲಕುಮಾರ್, ಡಾ. ಚೇತನ್, ಡಾ. ಎಲ್.ಮಂಜುನಾಥ್ ಡಾ. ಸುಶಾಂತ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.