ಸ್ವಚ್ಛ ನಗರಕ್ಕೆ ಜನತೆ ಸಹಕಾರ ಮುಖ್ಯ: ರೇವಣ್ಣ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಸೆ. 2
ಪಟ್ಟಣದ 7200 ಮನೆಗಳಲ್ಲಿ ಶೇಖರಣೆಗೊಳ್ಳುವ ಘನತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕವಾಗಿ ಶೇಖರಿಸಿಟ್ಟು ಪುರಸಭೆಯ ಟ್ರ್ಯಾಕ್ಟರ್ಗಳಿಗೆ ನೀಡುವುದರಿಂದ ಪಟ್ಟಣ ವ್ಯಾಪ್ತಿಯನ್ನು ಸ್ವಚ್ಛವಾಗಿರಿಸಿ ಸ್ವಚ್ಛ ನಗರವನ್ನಾಗಿಸಲು ಸಹಕರಿಸುವಂತೆ ಪಟ್ಟಣದ ಜನತೆಯನ್ನು ಶಾಸಕ ಎಚ್.ಡಿ.ರೇವಣ್ಣ ಕೋರಿದರು.
ಪುರಸಭೆಯಿಂದ ಸೋಮವಾರ ಕಸದ ಬಿನ್ಗಳನ್ನು ಉಚಿತವಾಗಿ ನೀಡುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆಯೊಂದಕ್ಕೆ ಎರಡು ಪ್ಲಾಸ್ಟಿಕ್ ಬುಟ್ಟಿಗಳನ್ನು ಸಾಂಕೇತಿಕವಾಗಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಪಟ್ಟಣದ 23 ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆಗಳಿಗೆ ಡಾಂಬರೀಕರಣ, ಕಾಂಕ್ರಿಟ್ ರಸ್ತೆ ಅಭಿವೃದ್ಧಿಗಾಗಿ ಐದು ಕೋಟಿ ರು ಅನುದಾನ ಬಂದಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಸೂರಿಲ್ಲದವರಿಗೆ ನಿವೇಶನ ಮತ್ತು ಮನೆಗಳನ್ನು ನೀಡುವ ಸಲುವಾಗಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಯೋಜನೆ ಪ್ರಕಾರ ಪಟ್ಟಣದಲ್ಲಿ ಯಾರೊಬ್ಬರು ಮನೆಯಿಲ್ಲ ಎಂದು ಹೇಳದಂತೆ ಪ್ರತಿಯೊಬ್ಬರಿಗೂ ನಿವೇಶನ ಮತ್ತು ಮನೆ ಕಟ್ಟಿಕೊಳ್ಳಲು 1.2 ಲಕ್ಷ ರು. ಕೊಡಿಸಿಕೊಡುವ ಯೋಜನೆ ಜಾರಿಗೆ ಬರಲಿದೆ. ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ಹೊಂದಿದ್ದು ಮನೆಯಿಲ್ಲದವರು ಇದ್ದಲ್ಲಿ ಅಂತಹ ಮಾಲೀಕರುಗಳಿಗೂ ಹಣ ಕೊಡಿಸಿಕೊಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬರ ಪರಿಹಾರ ಪ್ರತಿ ಕುಟುಂಬಕ್ಕೆ ತಲಾ 1100 ರು.ಗಳ ಪರಿಹಾರದ ಚೆಕ್ ವಿರತಣೆ ಮಾಡಲಾಯಿತು. ಪುರಸಭೆ ಸದಸ್ಯ ಎ.ಆರ್.ರವಿಕುಮಾರ್, ಕೆ.ಆರ್.ಸುಬ್ರಹ್ಮಣ್ಯ, ಎಚ್.ವಿ.ಸುರೇಶ್, ಮುಫೀದ್, ಮುಖ್ಯಾಧಿಕಾರಿ ಹರೀಶ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

