ಕಣಕಟ್ಟೆ ಕೆರೆಗೆ ಏತ ನೀರಾವರಿ ಮೂಲಕ ಹೇಮಾವತಿ ನೀರು
ಕ.ಪ್ರ.ವಾರ್ತೆ ಅರಸೀಕೆರೆ ಸೆ.2
ಸತತ ಬರಗಾಲದ ಬವಣೆಗೆ ಸಿಕ್ಕಿ ನಲುಗುತ್ತಿದ್ದ ತಾಲೂಕಿನ ಕಣಕಟ್ಟೆ ಹೋಬಳಿ ಜನತೆ ಕಂಡ ಕನಸು ಇಂದು ನನಸಾಯಿತು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಕಣಕಟ್ಟೆ ಗ್ರಾಮದ ಕೆರೆಯ ಅಂಗಳದಲ್ಲಿ ತಿಪಟೂರು ತಾಲೂಕಿನ ಮಾರ್ಗವಾಗಿ ಹರಿದು ಬಂದ ಹೇಮಾವತಿ ನದಿ ನೀರಿಗೆ ಗಂಗಾ ಪೂಜೆ ನೆರವೇರಿಸುವ ಮೂಲಕ ಶಾಸಕರು ಸ್ವಾಗತಿಸಿದರು.
ಸುಮಾರು 15 ವರ್ಷಗಳ ಹಿಂದೆ ತಾಲೂಕಿನ ಕಣಕಟ್ಟೆ ಹೋಬಳಿಯ ಕಾಮಸಮುದ್ರ, ಹೊಳಲ್ಕೆರೆ ಹಾಗೂ ಕಣಕಟ್ಟೆ ಕೆರೆಗಳಿಗೆ ನೀರು ಹರಿಸುವ ಹೊನ್ನವಳ್ಳಿ ಏತ ನೀರಾವರಿ ಯೋಜನೆ ಕಾರ್ಯ ರೂಪದ ಕನಸು ಕಂಡಿದ್ದ ಈ ಭಾಗದ ಜನತೆಗೆ ಕಾವೇರಿ ನ್ಯಾಯ ಮಂಡಲಿಯ ಜಲ ವಿವಾದ ಕಾರಣ ಮೂಲೆ ಸೇರಿತ್ತು.
ಆದರೆ ಈ ಯೋಜನೆಗೆ ಮರುಜೀವ ಬಂದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿದ್ದ ಯೋಜನೆ ರೂಪರೇಷಗಳನ್ನು ತಮ್ಮ ಅವಿರತ ಹೋರಾಟದ ಫಲವಾಗಿ ತಿಪಟೂರು ತಾಲೂಕಿನ ಹೊಗ್ಗನಘಟ್ಟ ಗ್ರಾಮದಲ್ಲಿನ ಹೇಮಾವತಿ ಕಾಲುವೆಗೆ ಜೋಡಿಸಿರುವ ರೈಸಿಂಗ್ಲೈನ್ ಮೂಲಕ ತಿಪಟೂರು ತಾಲೂಕಿಗೆ ಮತ್ತು ಅರಸೀಕೆರೆ ತಾಲೂಕಿಗೆ ಪ್ರತ್ಯೇಕವಾದ ಜಾಕ್ವೆಲ್ಗಳನ್ನು ನಿರ್ಮಿಸಲಾಗಿದೆ.
ಅಲ್ಲಿಂದ ಕೊಳವೆ ಮಾರ್ಗದಲ್ಲಿ ಎರಡು ತಾಲೂಕಿನ ಗ್ರಾಮಗಳ ಕೆರೆಗಳಿಗೂ ಪ್ರತ್ಯೇಕವಾಗಿ ನೀರು ಹರಿಸಲು ಸುಮಾರು 89 ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಿ ಅದನ್ನು ಕಾರ್ಯಗತಕ್ಕೆ ತರಲು ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ತುಂಬು ಹೃದಯದ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಸತತ ಎರಡು ವರ್ಷ ನಡೆದ ಈ ಕಾಮಗಾರಿಯ ಫಲವಾಗಿ ತಾಲೂಕಿನ ಕಾಮಸಮುದ್ರ ಕೆರೆಗೆ ಕಳೆದ 9 ತಿಂಗಳ ಹಿಂದೆ ಹೇಮಾವತಿ ನೀರು ಹರಿದು ಬಂದಿದ್ದು, ನಂತರ ಹೊಳಲ್ಕೆರೆ ಗ್ರಾಮದ ಕಪ್ಪೇಕಟ್ಟೆ ಕೆರೆಗೆ ನೀರನ್ನು ಹರಿಸಲಾಗಿತ್ತು. ಆದರೆ ಕಣಕಟ್ಟೆ ಹೋಬಳಿಯ ಕೆಲವು ರೈತರು ತಕರಾರು ಮಾಡಿದ ಕಾರಣ ನೆನೆಗುದಿಗೆ ಕಾಮಾಗಾರಿಯೂ ಪೂರ್ಣಗೊಂಡು ಇದೀಗ ಕಣಕಟ್ಟೆ ಗ್ರಾಮದ ಕೆರೆಗೆ ಹೇಮಾವತಿ ನೀರನ್ನು ಬೀಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ನಾಗರಾಜ್, ಜಿಪಂ ಸದಸ್ಯೆ ಪಾರ್ವತಮ್ಮ, ತಾಪಂ ಸದಸ್ಯ ಕೆ.ಎಂ.ನಂಜುಂಡಪ್ಪ, ಚಂದ್ರಶೇಖರ್, ಕೆ.ಆರ್.ದಿನೇಶ್, ಗ್ರಾಪಂ ಸದಸ್ಯ ಕೆ.ಸತೀಶ್, ಕೆ.ಎಚ್. ಸತೀಶ್, ಜೆಡಿಎಸ್ ಮುಖಂಡ ಕೆ.ಪಿ. ಶಿವಮೂರ್ತಿ, ಗೊಲ್ಲರಹಳ್ಳಿ ಹನುಮಪ್ಪ, ದೋಣನಕಟ್ಟೆ ಡಿ.ಪಿ. ಬಸವರಾಜು, ಗ್ರಾಮಾಭಿವೃದ್ಧಿ ವೇದಿಕೆ ಅಧ್ಯಕ್ಷ ಕೆ.ಎ. ನಾಗೇಶ್ರಾವ್, ಎಂ.ಇ. ಚಂದ್ರಶೇಖರ್, ನಂಜುಂಡಶೆಟ್ಟಿ, ಶಿವದೇವ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

