ಧ್ಯಾನ್ಚಂದ್ಗೆ ಭಾರತ ರತ್ನ ನೀಡಬೇಕು: ಪ್ರಕಾಶ್ಕುಮಾರ್
ಚನ್ನರಾಯಪಟ್ಟಣ: ಹಾಕಿ ಕ್ಷೇತ್ರದ ವಿಶ್ವ ಕ್ರೀಡಾಪಟು ಧ್ಯಾನ್ಚಂದ್ ಅವರಿಗೆ ಭಾರತ ರತ್ನ ನೀಡ ಬೇಕೆಂದು ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದರು. ಧ್ಯಾನ್ಚಂದ್ 16ನೇ ವಯಸ್ಸಿನಲ್ಲಿ ಸೈನಿಕರಾಗಿ ಅನಂತರ ಇಪ್ಪತ್ತನೇ ವಯಸ್ಸಿನಲ್ಲಿ ಭಾರತದ ಹಾಕಿ ತಂಡಕ್ಕೆ ಆಯ್ಕೆಯಾಗುತ್ತಾರೆ. 1926ರಲ್ಲಿ ಹಾಕಿ ಮಾಂತ್ರಿಕ ಎಂಬ ಬಿರುದು ವಿಶ್ವಮಟ್ಟದಲ್ಲಿ ಪಡೆದುಕೊಂಡ ಏಕೈಕ ಕ್ರೀಡಾಪಟು ಇವರಾಗಿದ್ದಾರೆ. 1936ರಲ್ಲಿ ಜನವರಿ 14ರ ಭಾರತ ಮತ್ತು ಜರ್ಮನಿ ತಂಡದ ನಡುವಿನ ಫೈನಲ್ ಪಂದ್ಯದಲ್ಲಿ ಗೆದ್ದಾಗ ಹಿಟ್ಲರ್ ಸೈನ್ಯದಲ್ಲಿ ಕರ್ನಲ್ ಹುದ್ದೆ ನೀಡುವುದಾಗಿ ತಿಳಿಸಿದಾಗ ಅದನ್ನು ಗೌರವಪೂರ್ವಕವಾಗಿ ತಿರಸ್ಕರಿಸಿ ಭಾರತದ ಗೌರವವನ್ನು ಎತ್ತಿಹಿಡಿದ ಅಪ್ರತಿಮ ಕ್ರೀಡಾಪಟು ಎಂದು ತಿಳಿಸಿದರು.
1956ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದು, ಈ ಬಾರಿ ದೇಶದ ಸರ್ವಶ್ರೇಷ್ಠ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದ್ದು ಅದು ಶೀಘ್ರವಾಗಿ ಆಗಬೇಕೆಂದು ಒತ್ತಾಯಿಸಿದರು. ಪ್ರಭಾರ ಪ್ರಾಂಶುಪಾಲ ಪ್ರೊ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನಾಗರಾಜು, ಪ್ರೊ.ವೆಂಕಟೇಗೌಡ, ಪ್ರೊ. ಶಿವಕುಮಾರ್, ರೂಪಾ, ಶ್ರೀನಿವಾಸ್, ಅಧೀಕ್ಷಕ ಲಕ್ಕೇಗೌಡ ಇದ್ದರು.ಅರುಣ್ಕುಮಾರ್ ಪ್ರಾರ್ಥನೆ, ಉಮೇಶ್ ನಿರೂಪಿಸಿದರು. ಪ್ರೊ. ಹನುಮಂತಯ್ಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

