ಹಾಸನ

ಶಿಕ್ಷಣದ ವ್ಯಾಪಾರೀಕರಣ: ಶಾಸಕ ಕುಮಾರಸ್ವಾಮಿ ವಿಷಾದ

Published On :

ಕ.ಪ್ರ. ವಾರ್ತೆ೤ ಆಲೂರು೤ ಸೆ. 5
ಶಿಕ್ಷಣ, ಶಿಕ್ಷಕರು ಉದ್ಯೋಗಕ್ಕಾಗಿ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳಿಗೆ  ಉತ್ತಮವಾದ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಬೇಕೆಂದು ಆಲೂರು-ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಕಿವಿಮಾತು ಹೇಳಿದರು.
ಅವರು ಆಲೂರಿನ ಒಕ್ಕಲಿಗರ ಸಮುದಾಯಭವನದಲ್ಲಿ ಸಾರ್ವಜನಿಕ  ಶಿಕ್ಷಣ ಇಲಾಖೆ ಹಾಗೂ ತಾ ರಾಷ್ಟ್ರೀಯ ಹಬ್ಬಗಳ  ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಡಾ. ರಾಧಾಕೃಷ್ಣನ್ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಶಿಕ್ಷಣ ವ್ಯಾಪಾರೀಕರಣದ ಉದ್ಯಮವಾಗಿರುವುದು ಶೋಚನೀಯ ಸಂಗತಿಯಾಗಿದೆ. ಆದ್ದರಿಂದ ಮಿತಿಯಿಲ್ಲದಷ್ಟು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಮಗುವಿನಲ್ಲಿ ಮೌಲ್ಯಗಳನ್ನು ಬಿತ್ತುವಂತಹ ಶಿಕ್ಷಣ ನೀಡಬೇಕಾದ ಸಂದರ್ಭದಲ್ಲಿ ವಾಣಿಜ್ಯಮಯವಾಗಿ ಯೋಚಿಸುತ್ತಿರುವುದು ಒಂದು ದುರಂತವೇ ಸರಿ ಎಂದರು.
 ನಿವೃತ್ತ ಶಿಕ್ಷಕ ಜಿ.ಕೆ.ವೆಂಕಟೇಶ್, ವೆಂಕಟೇಗೌಡರು, ಸಿ.ಎಸ್.ಸಂದರೇಶ್, ತಿರುಮಲಯ್ಯ, ಮಂಜಮ್ಮ, ಶಂಕ್ರಮ್ಮ, ಸುಬ್ಬಯ್ಯ ಮುಂತಾದವರನ್ನು ಮತ್ತು ಅಕಾಲ ಮರಣಕ್ಕೀಡಾದ ಶಿಕ್ಷಕರ ಕುಟುಂಬಗಳಿಗೆ ಎಸ್ಸೆಸ್ಸೆಲ್ಸಿ ಯಲ್ಲಿ ಶೇ.100 ಫಲಿತಾಂಶ ಪಡೆದ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು, ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು  ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮರಸು ಗ್ರಾಮದ ಶಾಲಾ ಶಿಕ್ಷಕರನ್ನು ದಿ ಎಂ.ವಿ.ಪುಟ್ಟಶ್ಯಾಮಚಾರ್ ಮಕ್ಕಳಾದ ಎಂ.ಪಿ.ಹರೀಶ್ ದಂಪತಿ ಶಾಲು, ಹಾರ, ಫಲ ತಾಂಬೂಲ ನೀಡಿ ಗೌರವಿಸಿದರು. ಉಪನ್ಯಾಸಕಿ ರತ್ನಾವತಿ ಪ್ರಧಾನ ಭಾಷಣ ಮಾಡಿದರು. ಎಚ್.ಬಿ.ಧರ್ಮರಾಜ್, ಕೆ.ಎಸ್.ಮಂಜೇಗೌಡ, ಚಂದ್ರಶೇಖರ್ ಮಾತನಾಡಿದರು.
 ಡಿ.ಎಂ.ವರದರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ.ನಾಗರಾಜ್, ಬಿಇಒ ಎಚ್.ಕೆ.ಪುಷ್ಪಲತಾ, ಎಸ್.ಎನ್.ರವಿಪ್ರಕಾಶ್,  ಧರ್ಮಶೆಟ್ಟಿ, ಶ್ರೀಕಾಂತ್, ರಾಮಚಂದ್ರ, ಸಗನಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.