ಆಟೋಗೆ ಕಡ್ಡಾಯ ಮೀಟರ್ ಅಳವಡಿಸಲು ಡಿಸಿ ಸೂಚನೆ
ಕನ್ನಡಪ್ರಭ ವಾರ್ತೆ ಹಾಸನ ಸೆ. 6
ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ವಿ ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಮೀಟರ್ ಅಳವಡಿಸದ ಆಟೋಗಳ ಪರವಾನಗಿ ರದ್ದು ಪಡಿಸುವಂತೆ ಪ್ರಾದೇಶಿ ಸಾರಿಗೆ ಅಧಿಕಾರಿಗಳಿಗೆ ಆದೇಶ ನೀಡಿದರಲ್ಲದೆ ಮೀಟರ್ ಇಲ್ಲದೆ ಆಟೋ ಚಾಲನೆಯಾಗುತ್ತಿದ್ದರೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜವಾಬ್ದಾರರಾಗಿತ್ತಾರೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರ ಬೇಡಿಕೆ ಮೇರೆಗೆ ಆಟೋ ಪ್ರಯಾಣ ದರವನ್ನು ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ನಿಗದಿ ಪಡಿಸಿರುವ ದರಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದುವರೆ ಕಿಮೀ ಗೆ ರ.20 ನಿಗದಿ ಪಡಿಸಲು ತೀರ್ಮಾನಿಸಲಾಯಿತು.
ನಂತರದ ಕಿಮೀ ಗೆ ರು.10 ನಿಗದಿ ಪಡಿಸಲಾಯಿತು.ಪ್ರಯಾಣಿಕರ ಸುರಕ್ಷತೆ ಹಾಗೂ ಅನಧಿಕೃತ ಹಣ ವಸೂಲಿ ತಡೆಯುವ ನಿಟ್ಟಿನಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಪಾವತಿ ಕೌಂಟರ್ ಪ್ರಾರಂಭಿಸಲು ನಿರ್ಧರಿಸಲಾಯಿತು. ಮುಂಗಡ ಪಾವತಿ ಕೌಂಟರ್ ಪ್ರಾರಂಭಿಸಲು ರೋಟರಿಯವರು ಮುಂದೆ ಬಂದಿದ್ದಾರೆ.ಅವರಿಗೆ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಾಣೆ ಮಾಡಬಾರದು ಜೊತೆಗೆ ಮ್ಯಾಕ್ಸಿ ಕ್ಯಾಬ್ಗಳಲ್ಲಿ ಅಧಿಕ ಜನರನ್ನು ಒತ್ತು ಸಾಗುವುದು ಕೂಡ ಅಪಾಯಕಾರಿ ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ವಾಹನಗಳನ್ನು ದಿನನಿತ್ಯ ಪರಿಶೀಲನೆ ಮಾಡುತ್ತಿದ್ದಲ್ಲಿ ಅವಘಡಗಳನ್ನು ತಡೆಗಟ್ಟಬಹುದು. ಶಿಸ್ತು ಕಾಪಾಡಿದರೆ ಅನಾವುತಗಳು ನಡೆಯದಂತೆ ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.ಮ್ಯಾಕ್ಸಿಕ್ಯಾಬಬ್ಮಾಲೀಕರು ಕಾನೂನು ಚೌಕಟ್ಟಿನೊಳಗೆ ಸೇವೆ ಒದಗಿಸುವಂತೆ ತಿಳಿಸಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ಬಸ್ಗಳನ್ನು ಸಮಯಕ್ಕೆ ಸರಿಯಾಗಿ ಚಾಲನೆ ಮಾಡಲು ಕ್ರಮವಹಿಸುವಂತೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರಲ್ಲದೆ, ಯಾವುದೇ ಮಾರ್ಗಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರದೆ ಬದಲಾಯಿಸದಂತೆ ಆದೇಶಿಸಿದರು.
ಸಾರ್ವಜನಿಕರಿಗೆ ಸೌಕರ್ಯ ಒದಗಿಸುವುದರ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದ್ದು, ಯಾವುದೇ ಬಸಸ್ರಿಪೇರಿ ಇದ್ದಲ್ಲಿ ತಕ್ಷಣ ಬೇರೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ನಗರದೊಳಗೆ ಸಂಚಾರ ದಟ್ಟಣೆ ಇರುವ ಕಾರಣ ಸಾರಿಗೆ ಬಸ್ಗಳು ಹೊಸ ನಿಲ್ದಾಣ ಮುಂಭಾಗದ ಹೌಸಿಂಗ್ ಬೋರ್ಡ್ ಮೂಲಕ ಅರಕಲಗೂಡು ರಸ್ತೆ ಮತ್ತು ಸಂತೆಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಬಸ್ಗಳು ಸಂಚರಿಸಲು ಸರ್ವೇ ಮಾಡಿ ಸಾಧ್ಯವಾದಷ್ಟು ಬಸ್ಗಳನ್ನು ಆ ಮಾರ್ಗದಲ್ಲಿ ಸಂಚರಿಸಲು ಕ್ರಮವಹಿಸುವಂತೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದರು. ದುದ್ದ ಮಾರ್ಗವಾಗಿ ನಾಳೆಯಿಂದಲೆ ಬಸ್ಸ್ಂಚರಿಸಲು ಕ್ರಮಕೈಗೊಳುವಂತೆ ಸೂಚಿಸಿದರು.
ನಗರದ ಆರ್.ಸಿ.ರಸ್ತೆಯನ್ನು ಏಕಮುಖ ಸಂಚಾರದಿಂದ ದ್ವಿಮುಖ ಸಂಚಾರಕ್ಕೆ ಪ್ರಾಯೋಗಿಕವಾಗಿ ಸೆ.3 ರವರೆಗೆ ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾರ್ವಜನಿಕರಿಂದ ಯಾವರೀತಿ ಪ್ರತಿಕ್ರಿಯೇ ಬರುತ್ತದೆ ಅದನ್ನು ನೋಡಿಕೊಂಡು ಅಕ್ಟೋಬರ್ನಲ್ಲಿ ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಯಿತು.
ಸಾರ್ವಜನಿಕರ ಸುರಕ್ಷತೆ ಸಲುವಾಗಿ ನಗರದಲ್ಲಿ ಲಾರಿ ಸಂಚಾರವನ್ನು ಕಡಿಮೆ ಮಾಡಿ ಸಹಕರಿಸುವಂತೆ ಲಾರಿ ಮಾಲೀಕರಲ್ಲಿ ಮನವಿ ಮಾಡಿದರು. ಟ್ರಕ್ ಟರ್ಮಿನಲ್ ಬಗ್ಗೆ ಲಾರಿ ಮಾಲೀಕರನ್ನು ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಆಲೂರು, ಗಂಡಸಿ, ಅರಕಲಗೂಡಿನಲ್ಲಿ ಬಸ್ಗಳು ಬಸ್
ನಿಲ್ದಾಣಕ್ಕೆ ಹೋಗದೆ ಗೇಟ್ನಿಂದಲೇ ವಾಪಸ್ ಆಗುತ್ತವೆ ಎಂಬ ದೂರಿದೆ. ಜೊತೆಗೆ ಶಾಂತಿಗ್ರಾಮ ಹಗರೆ, ಬೇಲೂರು ಮಾರ್ಗದಲ್ಲಿ ಪಾಸ್ ಹೊಂದಿರುವ ಶಾಲಾ ವಿದ್ಯಾರ್ಥಿಗಳನ್ನು ಬಸ್ಗೆ ಹತ್ತಿಸುವುದಿಲ್ಲ ಎಂದು ದೂರುಗಳು ಕೇಳಿ ಬಂದಿವೆ ಇವುಗಳ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿದರು.
ಜಿಲ್ಲಾ ಬಳಕೆದಾರರ ಸಂಘದ ಕಾರ್ಯಾಧ್ಯಕ್ಷ ಸಿದ್ದಯ್ಯ ಮಾತನಾಡಿ, ಶಾಲಾ ಬಸ್ಗಳಲ್ಲಿ ಮಕ್ಕಳ ಬ್ಯಾಗ್ ಇಡಲು ಪ್ರತ್ಯೇಕ ಸ್ಥಳ ಕಲ್ಪಿಸಿರುವುದಿಲ್ಲ,ಮರಳು ಸಾಗಾಣಿಕೆ ಹಾಗೂ ಅಗತ್ಯಕ್ಕಿಂತ ಅಧಿಕ ಭಾರ ಸಾಗಿಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ ನಗರದ ವೃತ್ತಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಪೊಲೀಸ್ ಅಧಿಕಾರಿ ರೆಶ್ಮಿ. ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಡಿ.ಅಲ್ಮೇಡ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಮೂರ್ತಿ ಹಾಗೂ ನಾನಾ ಇಲಾಖೆ ಅಧಿಕಾರಿಗಳು, ಲಾರಿ ಮಲೀಕರ ಸಂಘದ ಅಧ್ಯಕ್ಷ ಅಣ್ಣಾಜಿ, ಆಟೋ ಚಾಲಕರ ಮತ್ತು ಮಲೀಕರ ಸಂಘದ ಅಧ್ಯಕ್ಷರು, ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘದ ಅಧ್ಯಕ್ಷ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

