ಹಾಸನ

'ಭಾರತದ ಸ್ವಾತಂತ್ರ್ಯ ಚಳವಳಿ ಅತ್ಯಂತ ಪರಿಣಾಮಕಾರಿ'

Published On :

ಗಂಡಸಿ (ಅರಸೀಕೆರೆ ತಾ.): ವಿಶ್ವದ ರಾಷ್ಟ್ರೀಯ ಹೋರಾಟಗಳಲ್ಲೇ ಭಾರತದ ಸ್ವಾತಂತ್ರ್ಯ ಚಳವಳಿ ತುಂಬಾ ಪರಿಣಾಮಕಾರಿಯಾದುದ್ದು ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ಸನಾವುಲ್ಲಾ ಖಾನ್ ವಿಶ್ಲೇಷಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯತೆ ಬೆಳವಣಿಗೆಯಲ್ಲಿ ಸ್ವಾತಂತ್ರ್ಯ ಚಳವಳಿಗಳ ಪಾತ್ರ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅಹಿಂಸೆ ಮೂಲಕ ಸ್ವಾತಂತ್ರ್ಯ ಸಂಪಾದನೆ ಮಾಡಿದ ವಿಶ್ವದ ಮೊಟ್ಟ ಮೊದಲ ರಾಷ್ಟ್ರ ಭಾರತ ಎಂದು ಪ್ರತಿಪಾದಿಸಿದರು.
 ರಾಷ್ಟ್ರಪಿತ ಮಹಾತ್ಮ ಗಾಂಧಿ, ಝೂನ್ಸಿರಾಣಿ ಲಕ್ಷ್ಮಿಬಾಯಿ, ಸುಭಾಷ್ಚಂದ್ರಬೋಸ್ ಇವರ ಹೋರಾಟಗಳು ಯುವ ಜನಾಂಗಕ್ಕೆ  ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಹನುಮಂತಯ್ಯ ಮಾತನಾಡಿ ಭಾರತೀಯ ಮಹಾನ್ ನಾಯಕ ಬಾಲಗಂಗಾಧರ್ ತಿಲಕ್, ಡಾ.ಅಂಬೇಡ್ಕರ್, ಬಿಪಿನ್ ಚಂದ್ರಪಾಲ್, ಭಗತ್ಸಿಂಗ್ ಇವರ ತ್ಯಾಗ ಬಲಿದಾನ ಸ್ಮರಣೆ ಯುವ ಜನಾಂಗಕ್ಕೆ ಅತಿ ಅವಶ್ಯಕತೆಯಿದೆ. ಈ ಮೂಲಕ ರಾಷ್ಟ್ರೀಯತೆಯನ್ನು   ಮೈಗೂಡಿಸಿಕೊಳ್ಳುವಂತೆ  ಪ್ರತಿಪಾದಿಸಿದರು.
ಉಪನ್ಯಾಸಕ ನವೀನ್, ಬಸವರಾಜು, ದೇವರಾಜಮೂರ್ತಿ, ಡಾ.ಶರತ್ಕುಮಾರ್, ನಟರಾಜ್ ರವೀಶ್,ದೀಪಾ  ಚೈತ್ರ, ರೇಷ್ಮ ಮೊದಲಾದವರು ಇದ್ದರು.
ಲಿಂಗರಾಜು ಪ್ರಾಸ್ತಾವಿಕ ನುಡಿ ಆಡಿದರು.ಜಿ.ಆರ್.ಮೋಹನ್ ಕುಮಾರ್ ಸ್ವಾಗತಿಸಿದರು. ಪರಮೇಶ್ವರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.