ಹಾಸನ

ಮೈಸೂರು ಪಾಲಿಕೆ ಮೇಯರ್, ಉಪಮೇಯರ್ ಹಾಸನ ಭೇಟಿ,

Published On :

ಕ.ಪ್ರ. ವಾರ್ತೆ೤ ಹಾಸನ೤ ಸೆ.10
ಮೈಸೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಜೆಡಿಎಸ್ನ ಮೇಯರ್, ಉಪ ಮೇಯರ್ ಹಾಗೂ  ಸದಸ್ಯರು ಮಂಗಳವಾರ ಹಾಸನಕ್ಕೆ ಆಗಮಿಸಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿದರು.
 ನಗರದ ಪ್ರವಾಸಿ ಮಂದಿರದಲ್ಲಿ ರೇವಣ್ಣ ಅವರೊಂದಿಗೆ ಮಾತುತೆ ನಡೆಸಿದರು. ರೇವಣ್ಣ ಮಾತನಾಡಿ, ಪಾಲಿಕೆಯಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಪಕ್ಷ ಭೇದ ಮಾಡದೆ ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸುವಂತೆ ಸಲಹೆ ನೀಡಿದರು.
 ಈ ಸಂದರ್ಭದಲ್ಲಿ ಮೈಸೂರು ಮೇಯರ್ ಎನ್.ಎಂ.ರಾಜೇಶ್ವರ್ ಸೋಮು, ಉಪ ಮೇಯರ್ ಶೈಲೇಂದ್ರ, ಸದಸ್ಯ ಸಂದೇಶ್ ಸ್ವಾಮಿ, ಕೆಂಪಣ್ಣ, ಚೆನ್ನಪ್ಪ, ರಾಮು, ರಮಣಿ, ಮಹದೇವಪ್ಪ, ನಿಂಗಪ್ಪ, ಚಿನ್ನರವಿ, ಪ್ರೇಮಮ್ಮ, ಫೈರೋಜ್ಖಾನ್, ಮೈಸೂರು ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.