ಹಾಸನ

'ಶಿಕ್ಷಣವೆಂದರೆ ಭವ್ಯ ಭವಿಷ್ಯ ರೂಪಿಸುವುದು'

Published On :

ಹಾಸನ: ಶಿಕ್ಷಣವೆಂದರೆ ಕೇವಲ  ಹಣ ಗಳಿಕೆ ಮಾತ್ರವಲ್ಲ,  ಭವಿಷ್ಯವನ್ನೂ ರೂಪಿಸುವುದಾಗಿದೆ ಎಂದು ಗೊರೂರು ಎಎನ್ವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್. ಚಂದ್ರಶೇಖರ್ ತಿಳಿಸಿದರು.
ಗೊರೂರು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಗುರು ಹಿರಿಯರನ್ನು ಗೌರವಿಸುವುದು, ಗುರಿಯನ್ನು ಇಟ್ಟುಕೊಳ್ಳುವುದನ್ನು  ಕಲಿಸುತ್ತದೆ ಎಂದು ಹೇಳಿದರು.
ವಿದ್ಯಾದಾನ ಶ್ರೇಷ್ಠ ದಾನ. ಹಾಗಾಗಿ ಹಲವಾರು ಕನಸು ಹೊತ್ತು ಬಂದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ  ಭವ್ಯ ಭವಿಷ್ಯ ರೂಪಿಸುವಲ್ಲಿ ನಮ್ಮ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಜ್ಞಾನ ಪಡೆದು ಉಜ್ವಲ  ಭವಿಷ್ಯವನ್ನು  ರೂಪಿಸಿಕೊಳ್ಳ ಬೇಕು. ಕೇವಲ ಶ್ರೀಮಂತಿಕೆಯಿಂದ ಜೀವನ ಸಾರ್ಥಕವಾಗಕುವುದಿಲ್ಲ ಎಂದು ನುಡಿದರು.
ಯೋಗಾನರಸಿಂಹಸ್ವಾವು  ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಜಿ.ರಾಮನಾಥ್ ಮಾತನಾಡಿ, ನಮ್ಮ ಕಾಲೇಜು ಸೇವಾ  ಮನೋಭಾವದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಈ ಸೌಲಭ್ಯವನ್ನು  ವಿದ್ಯಾರ್ಥಿಗಳು  ಸದುಪಯೋಗಪಡಿಸಿಕೊಂಡು ಜ್ಞಾನವಂತರಾಗಿ ಸತ್ಪ್ರಜೆಗಳಾಗಬೇಕು ಎಂದು  ಹೇಳಿದರು. ವಿದ್ಯಾಸಂಸ್ಥೆ ಉಪಾಧ್ಯಕ್ಷ  ಜಿ.ಎಲ್. ಮುದ್ದೇಗೌಡ ಮಾತನಾಡಿ,  ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲತೆಗಾಗಿ   ಕಾಲೇಜಿನಲ್ಲಿ ವಿಜ್ಞಾನ ವಿಭಾಗ ತೆರೆಯಬೇಕೆಂಬ ತಮ್ಮ ಅಭಿಲಾಷೆಯನ್ನು  ವ್ಯಕ್ತಪಡಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್ಚಂದ್ರ ಮಾತನಾಡಿ, ಶಿಕ್ಷಣ ಮನುಷ್ಯ ಜೀವನದಲ್ಲಿ  ಬಹಳ ಮುಖ್ಯವಾದುದು. ಕೇವಲ ಹಣ ಗಳಿಕೆ ಮುಖ್ಯವಲ್ಲ. ಎಂದರು. ಸಂಸ್ಥೆಯ ಅಧ್ಯಕ್ಷ ಜಿ.ಆರ್. ಶ್ರೀನಿವಾಸ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಂ.ಜಿ.ಸೋಮಶೇಖರ್ ಅವರನ್ನು ಅಭಿನಂದಿಸಲಾಯಿತು.  ಎಚ್.ಎಸ್. ಸ್ವಾತಿ ಸ್ವಾಗತಿಸಿದರು.  ಪೂರ್ಣಿಮಾ ವಂದಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.