'ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ'
ಹಾಸನ: ಯಾವುದೇ ಅಧಿಕಾರಿ ಕಾರ್ಯದ ಸಮಯ ಕೇವಲ ಕಚೇರಿ ವೇಳೆಯಾಗಿರುತ್ತದೆ. ಆದರೆ ಶಿಕ್ಷಕ ಮಾತ್ರ 24 ಗಂಟೆಯೂ ವೃತ್ತಿಪರನಾಗಿರುತ್ತಾನೆ ಹಾಗೂ ನಿರಂತರವಾಗಿ ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವಲ್ಲಿ ಕಾರಣನಾಗಿದ್ದಾನೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ್ ಅಭಿಪ್ರಾಯಪಟ್ಟರು.
ನಗರದ ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೋಣಿ, ಏಣಿ ಹಾಗೂ ಶಿಕ್ಷಕನ ಗುರಿ ಒಂದೇ. ದೋಣಿ ದಡದಿಂದ ದಡಕ್ಕೆ ದಾಟಿಸುತ್ತದೆ, ತಾನು ಮಾತ್ರ ಹಾಗೆಯೇ ಉಳಿಯುತ್ತದೆ. ಹಾಗೆ ಏಣಿ ಮೇಲೇರುವ ವ್ಯಕ್ತಿಗೆ ನೆರವಾಗಿ ತಾನು ಹಾಗೆಯೇ ಅದೇ ಸ್ಥಾನದಲ್ಲಿ ಉಳಿಯುವಂತೆ ಶಿಕ್ಷಕ ವಿದ್ಯಾರ್ಥಿಗಳನ್ನು ಗುರಿ ತಲುಪಿಸಲು ಶ್ರಮಿಸುತ್ತಾನೆ ಎಂದರು.
ಪ್ರಾಧ್ಯಾಪಕ ಅಜಿತ್ಪ್ರಸಾದ್ ಮಾತನಾಡಿ, ಗುರುವಿನ ಅಗತ್ಯ ಕೇವಲ ಮಾನವರಿಗಷ್ಟೇ ಅಲ್ಲದೇ, ದೇವ ಮಾನವರೂ ಕೂಡ ಗುರುವಿನಿಂದ ಮಾರ್ಗದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.
ಡಾ. ಸರ್ವಪಲ್ಲಿ ರಾಧಕೃಷ್ಣನ್ ಶಿಕ್ಷಕ ವೃತ್ತಿಯಿಂದ ದೇಶದ ಉಪ ರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ಶಿಕ್ಷಕ ಸಮುದಾಯದ ಮಹತ್ವವನ್ನು ಜಗತ್ತಿಗೆ ತೋರಿಸಿದರು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಮಾತನಾಡಿ, ಗುರು ಮತ್ತು ಗುರು ಪರಂಪರೆಯ ಬಗ್ಗೆ ತಿಳಿಸಿದರು. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯವೆಂದು ಹೇಳಿದರು.
ನಿವೃತ್ತ ಶಿಕ್ಷಕ ಎ. ವೇಣುಗೋಪಲ್ ಹಾಗೂ ಚಂದ್ರಕಾಂತ್ ಪಡೆಸೂರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಿಈಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಚ್.ಎ. ರೇಖಾ, ಎನ್ಎಸ್ಎಸ್ ಅಧಿಕಾರಿ ವಾಸು ಡಿ.ಆರ್. ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿನಿ ಮಮತ ನಿರೂಪಿಸಿದರು. ಜಯಶ್ರೀ ಪ್ರಾರ್ಥನೆ ಮಾಡಿದರು. ಅಪೂರ್ಣ ಸ್ವಾಗತಿಸಿದರು. ಪೂಜಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

