ಹಾಸನ

ಚನ್ನರಾಯಪಟ್ಟಣ ತಾ.ನಲ್ಲಿ ಸಂಜೆವರೆಗೂ ಸುರಿದ ಮಳೆ

Published On :

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯಿಂದ ರಾತ್ರಿ 7ರ ವರೆಗೆ ಎಡಬಿಡದೆ ಸುರಿದ ಮಳೆಯಿಂದ ತೋಟಗಳಲ್ಲಿ ನೀರು ತುಂಬಿ ತೆಂಗು ಹಾಗೂ ತಾಲೂಕಿನ ಪ್ರಮುಖ ಬೆಳೆ ರಾಗಿಗೆ ಅನುಕೂಲವಾಗಿದೆ.
ಅಂತರ್ಜಲ ಕುಸಿತದಿಂದ ಕಂಗಾಲಾಗಿದ್ದ ಜನತೆ ತಮ್ಮ ಪಂಪ್‌ಸೆಟ್‌ಗಳಲ್ಲಿ ನೀರು ಕಾಣಲು ಪುಬ್ಬ ಮಳೆ ಅತ್ಯಂತ ಅನುಕೂಲಕರ. ತಾಲೂಕಿನ ಕೆಲವು ಕೆರೆಗಳಿಗೆ ನೀರು ತುಂಬಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ.
ಮಳೆಯಿಂದ ಕೆಲವೆಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚನ್ನರಾಯಪಟ್ಟಣ ಬಾಗೂರು ರಸ್ತೆಯಲ್ಲಿ ಬೈಪಾಸ್ ನಿರ್ಮಾಣಕ್ಕಾಗಿ ನಿರ್ಮಿಸಿರುವ ಪ್ಲೇಓವರ್ ಕೆಳಗೆ ಬಾಗೂರು ಕಡೆಗೆ ಹೋಗಲು ಅವಕಾಶ ಕಲ್ಪಿಸಿದ್ದು, ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿ ಕೂಡಿರುವುದರಿಂದ ಐದು ಅಡಿಗೂ ಹೆಚ್ಚು ಮಳೆ ನೀರು ನಿಂತು ಬಾಗೂರು ಕಡೆಗೆ ಹೋಗುವ ವಾಹನಗಳಿಗೆ ಎರಡು ಗಂಟೆಗೂ ಅಧಿಕ ಸಮಯ ಅಡಚಣೆಯಾಯಿತು. ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಿಟಾಚಿ ಮುಖೇನ ಕಾಲುವೆ ತೆಗೆದು ಸೇತುವೆ ಕೆಳಗಿದ್ದ ನೀರನ್ನು ಹೊರ ಹೋಗಲು ಹರ ಸಾಹಸ ಪಟ್ಟರು. ಸಾರಿಗೆ ಸಂಸ್ಥೆ ಬಸ್‌ಗಳು ಸೇತುವೆ ಕೆಳಗೆ ನೀರಿನ ಮಧ್ಯೆ ಕೆಟ್ಟು ನಿಂತು ಪ್ರಯಾಣಿಕರು ಕೆಳಗಿಳಿಯಲು ಸಾಧ್ಯವಾಗದೆ ಒಂದು ಗಂಟೆಗೂ ಅಧಿಕ ಸಮಯ ಬಸ್ಸಿನಲ್ಲಿಯೇ ಪ್ರಯಾಣಿಕರು ಕಾಲ ಕಳೆಯುವ ಸಂದರ್ಭ ಒದಗಿ ಬಂದಿತು.
ಚನ್ನರಾಯಪಟ್ಟಣದಲ್ಲಿ ಚರಂಡಿಗಳು ಮುಚ್ಚಿ ಹೋಗಿರುವುದರಿಂದ ನೀರು ರಸ್ತೆಯಲ್ಲಿಯೇ ಹರಿದು ಬಂದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡಿತು.  ಕೆ.ಆರ್ ಸರ್ಕಲ್ ಹಾಗೂ ರೇಣುಕಾಂಬ ರಸ್ತೆಯಲ್ಲಿ   ಹರಿಯುತ್ತಿದ್ದ ನೀರಿನಲ್ಲಿಯೇ ವಾಹನಗಳು ಸಂಚರಿಸುವ ಪರಿಸ್ಥಿತಿ ಉಂಟಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.