ಅರಸೀಕೆರೆಯಲ್ಲಿ ರೇಲ್ವೆ ಕಾರ್ಮಿಕರ ಪ್ರತಿಭಟನೆ
ಕ.ಪ್ರ. ವಾರ್ತೆ ಅರಸೀಕೆರೆ ಸೆ.16
ರೇಲ್ವೆ ಕಾರ್ಮಿಕರಿಗೆ ಬೋನಸ್ ಕಡಿತ ಮಾಡುವುದನ್ನು ವಿರೋಧಿಸಿ ಮತ್ತು ಅನೇಕ ವರ್ಷಗಳಿಂದ ಒತ್ತಾಯಿಸುತ್ತಿರುವ ಹಲವು ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪಟ್ಟಣದ ರೇಲ್ವೆ ನಿಲ್ದಾಣ ಮುಂಭಾಗದಲ್ಲಿ ಸೋಮವಾರ ಎಸ್ಡಬ್ಲೂಆರ್ಎಂಯು ಸಂಘಟನೆಯ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ರೇಲ್ವೆ ನಿಲ್ದಾಣ ಮುಂಭಾಗದಲ್ಲಿ ಸಂಘಟನೆಯ ಮೈಸೂರು ವಲಯದ ವಿಭಾಗೀಯ ಕಾರ್ಯದರ್ಶಿ ಎಸ್.ಎನ್. ನೂರ್ ಅಹಮದ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನೂರ್ ಅಹಮದ್ ಮಾತನಾಡಿ, ರೇಲ್ವೆ ಕಾರ್ಮಿಕರಿಗೆ ಬೋನಸ್ಅನ್ನು ಕೇಂದ್ರ ರೇಲ್ವೆ ಸಚಿವಾಲಯ ಕಡಿತ ಮಾಡಲು ಮುಂದಾಗಿರುವುದನ್ನು ಖಂಡಿಸಿ, ತಕ್ಷಣ ಇಂತಹ ಕಾರ್ಮಿಕ ವಿರೋಧಿ ಕ್ರಮವನ್ನು ಕೈಬೀಡಬೇಕೆಂದು ಒತ್ತಾಯಿಸಿದರು.
ಅನೇಕ ವರ್ಷಗಳಿಂದ ನಮ್ಮ ಸಂಘಟನೆಯು ಕಾರ್ಮಿಕರ ಹಿತಾಸಕ್ತಿಗೆ ಪೂರಕವಾದ ಹಲವು ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುತ್ತಿದೆ. ಕಾರ್ಮಿಕರ ಬಡ್ತಿ ಆಯೋಜನೆ ಹಾಗೂ ಹೊಸ ನಿವೃತ್ತಿ ಯೋಜನೆ ರದ್ದು ಮಾಡುವುದು. ಆದಾಯ ತೆರಿಗೆ ಮಿತಿಯನ್ನು 2 ಲಕ್ಷದಿಂದ 3 ಲಕ್ಷದವರೆಗೆ ಏರಿಸುವುದು. ರೇಲ್ವೆ ಕಾರ್ಮಿಕರ ಮಕ್ಕಳಿಗೆ ಕೆಲಸ ಕೊಡುವುದು ಇವೇ ಮುಂತಾದ ಇನ್ನೂ ಹಲವು 29 ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಹೋರಾಟ ನಡೆಸಿದರು.
ಕಾರ್ಮಿಕರ ಬೋನಸ್ ಕಡಿತ ಮಾಡುವುದಾದರೆ ಎಐಆರ್ಎಫ್ ಹಾಗೂ ಎಸ್ಡಬ್ಲೂಆರ್ಎಂಯು ಪ್ರಧಾನ ಕಾರ್ಯದರ್ಶಿ ಎ.ಎಂ.ಡಿಕ್ರೋಜ್ ನೇತೃತ್ವದಲ್ಲಿ ದೇಶಾದ್ಯಂತ ರೈಲು ತಡೆ ಚಳವಳಿ ಸದ್ಯದಲ್ಲೆ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಅರಸೀಕೆರೆ ಘಟಕದ ಕಾರ್ಯದರ್ಶಿ ಕರುಣಾಕರನ್, ಎ. ರವಿ, ಅಲ್ಬರ್ಟ್, ಅಲ್ತಾಫ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

