'ಉತ್ತಮ ಸಂದೇಶ ನೀಡುವಲ್ಲಿ ಚಿತ್ರಗಳು ವಿಫಲ'
ಅರಸೀಕೆರೆ: ದೇಶ ಮತ್ತು ಸಮಾಜದ ಬಗ್ಗೆ ಉತ್ತಮ ಸದಭಿರುಚಿ ಸಂದೇಶ ನೀಡುವ ನಿಟ್ಟಿನಲ್ಲಿ ಮಕ್ಕಳ ಚಲನಚಿತ್ರಗಳು ಮೂಡಿ ಬಂದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಯುವ ಪೀಳಿಗೆಯಿಂದ ಉತ್ತಮ ಸಮಾಜ ನಿರೀಕ್ಷಿಸಲು ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯ ಪಟ್ಟರು.
ಸ್ಥಳೀಯ ಬಾಲ ಕಲಾವಿದ ಮಾಸ್ಟರ್ ಮಿಥುನ್ ಪ್ರಧಾನ ಪಾತ್ರದಲ್ಲಿರುವ ಆಶಾಕಿರಣಗಳು ಎಂಬ ಮಕ್ಕಳ ಚಲನಚಿತ್ರವನ್ನು ಪಟ್ಟಣದ ಸಾಧನ ಚಿತ್ರಮಂದಿರದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಉತ್ತಮ ಸಂದೇಶ ನೀಡುವಲ್ಲಿ ಇಂದಿನ ಚಲನಚಿತ್ರಗಳು ವಿಫಲವಾಗಿವೆ ಎಂದು ನುಡಿದರು.
ನಮ್ಮೂರಿನ ಬಾಲ ಕಲಾವಿದ ಮಿಥುನ್ ಆಶಾಕಿರಣಗಳು ಎಂಬ ಮಕ್ಕಳ ಚಲನ ಚಿತ್ರದಲ್ಲಿ ಅಭಿನಯಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದರಲ್ಲಿ ಪ್ರಯತ್ನಪಟ್ಟಿರುವುದು ಹೆಮ್ಮೆಯ ವಿಷಯ.ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ತರುವುದರಲ್ಲಿ ಚಲನಚಿತ್ರಗಳು ಸಹಕಾರಿ. ಚಿತ್ರದ ನಿರ್ಮಾಪಕ ಲಕ್ಷ್ಮಣನಾಯಕ್ ಹಾಗೂ ನಿರ್ದೇಶಕ ರಾಮರಾವ್ ಶ್ರಮದಿಂದ ನಮ್ಮ ಕ್ಷೇತ್ರದ ಸ್ಥಳಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ , ಪುರಸಭೆ ಮಾಜಿ ಅಧ್ಯಕ್ಷ ಜಿ.ಟಿ.ಗಣೇಶ್, ಸದಸ್ಯ ಪಂಚಾಕ್ಷರಿ, ಪ್ರಾಂಶುಪಾಲ ಪ್ರೇಂನಾಯಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್, ತುಮಕೂರು ಜಿಪಂ ಮಾಜಿ ಅಧ್ಯಕ್ಷೆ ಸರೋಜಬಾಯಿ, ಕಸಾಪ ಮಾಜಿ ಅಧ್ಯಕ್ಷ ಪರಮೇಶ್, ಮಿಥುನ್ ಪೋಷಕರಾದ ಚಂದ್ರಶೇಖರ್, ಜಯಾ ಕೃಷ್ಣಮೂರ್ತಿ ಇತರರು ಮಿಥುನ್‌ಗೆ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

